Home Loan: ಗೃಹಸಾಲ ಮಾಡಿದವರಿಗೆ ಮತ್ತು ಮಾಡುವವರಿಗೆ RBI ನಿಂದ ದೊಡ್ಡ ಘೋಷಣೆ, ಬಡ್ಡಿ ನಿಯಮ ಬದಲಾವಣೆ.

ಹೋಂ ಲೋನ್ ಮಾಡುವವರಿಗೆ RBI ನಿಂದ ಮಹತ್ವದ ಘೋಷಣೆ.

Home Loan Interest Rate: ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚಿಗೆ ಹೊಸ ಹೊಸ ನಿಯಮವನ್ನು ಜಯಾರಿಗೊಳಿಸುತ್ತಿದೆ. ಆರ್ ಬಿಐ ನಿಯಮದ ಪ್ರಕಾರ ಬ್ಯಾಂಕುಗಳು ವಹಿವಾಟು ನಡೆಸುತ್ತಿವೆ. ಇನ್ನು ಇತ್ತೀಚಿಗೆ ಆರ್ ಬಿಐ ನಿಯಮ ಉಲ್ಲಂಘನೆ ಮಾಡುತ್ತಿರುವ ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ.

ಈಗಾಗಲೇ ಸಾಕಷ್ಟು ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ಆರ್ ಬಿಐ ರದ್ದುಮಾಡಿದೆ. ಇದೀಗ ಆರ್ ಬಿಐ ಸಾಲಗಳ ಬಡ್ಡಿದರದ ಬಗ್ಗೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಇನ್ನುಮುಂದೆ ಬ್ಯಾಂಕುಗಳು ಆರ್ ಬಿಐ ನಿಯಮಾನುಸಾರ ವಹಿವಾಟು ನಡೆಸಬೇಕಿದೆ.

RBI has issued another order regarding interest rates for home loan borrowers.
Image Credit: economictimes.indiatimes

ಗೃಹ ಸಾಲ ಪಡೆದವರಿಗೆ ಮಹತ್ವದ ಮಾಹಿತಿ
ಸಾಮಾನ್ಯವಾಗಿ ಎಲ್ಲರು ಸ್ವಂತ ಮನೆ ನಿರ್ಮಾಣದ ಆಸೆಯನ್ನು ಹೊಂದಿರುತ್ತಾರೆ. ಜನರ ಮನೆ ನಿರ್ಮಾಣದ ಕನಸಿಗೆ ವಿವಿಧ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಸಾಲವನ್ನು ನೀಡುವ ಮೂಲಕ ಸಹಾಯವಾಗುತ್ತದೆ. ಇನ್ನು ಗೃಹ ಸಾಲವನ್ನು ಪಡೆಯುವಾಗ ಯಾರೇ ಆಗಲಿ ಮೊದಲು ಸಾಲದ ಬಡ್ಡಿದರದ ಬಗ್ಗೆ ಯೋಚಿಸುತ್ತಾರೆ. ಯಾವ ಬ್ಯಾಂಕ್ ಅತಿ ಕೆಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ ಆ ಬ್ಯಾಂಕ್ ನಲ್ಲಿ ಜನರು ಗೃಹ ಸಾಲವನ್ನು ಪಡೆಯಲು ನಿರ್ಧರಿಸುತ್ತಾರೆ.

ಸಾಮಾನ್ಯವಾಗಿ ಗೃಹ ಸಾಲವನ್ನು ಸರ್ಕಾರೀ ಬ್ಯಾಂಕ್ ಗಳಲ್ಲಿ ಸಾಲ ಪಡೆಯುವುದು ಉತ್ತಮ. ಕೆಲ ಖಾಸಗಿ ವಲಯದ ಬ್ಯಾಂಕ್ ಗಳಿಗೆ ಹೋಲಿಸಿದೆ ಸರ್ಕಾರೀ ಬ್ಯಾಂಕ್ ಗಳ ಬಡ್ಡಿದರ ಕಡಿಮೆ ಇರುತ್ತದೆ. ಗೃಹ ಸಾಲವನ್ನು ಪಡೆಯುವಾಗ ದೀರ್ಘವದಿಯ ಸಾಲವನ್ನು ಪಡೆಯಬಾರದು. ಬದಲಾಗಿ ಕಡಿಮೆ ವರ್ಷದ ಅವಧಿಯ ಆಯ್ಕೆಯನ್ನು ಆರಿಸಬೇಕು. ಕಡಿಮೆ ಅವಧಿಯ ಸಾಲವನ್ನು ಪಡೆದರೆ ಬಡ್ಡಿದರ ಕಡಿಮೆ ಆಗುತ್ತದೆ.

RBI has again changed the interest rate rules for home loans
Image Credit: timesnownews

ಗೃಹ ಸಾಲದ ಬಡ್ಡಿದರದಲ್ಲಿ ಆರ್ ಬಿಐ ಮಹತ್ವದ ಆದೇಶ
ಪ್ರಸ್ತುತ ಆರ್ ಬಿಐ ರೆಪೋ ದರ ಶೇ. 6.50 ರಷ್ಟಿದೆ. ಇನ್ನು ಇತ್ತೀಚಿಗೆ ಆರ್ ಬಿಐ ರೆಪೋ ದರ ಹೆಚ್ಚಿಸುವ ಬಗ್ಗೆ ಸುದ್ದಿಗಳು ವೈರಲ್ ಆಗಿದ್ದವು. ಆದರೆ ಆರ್ ಬಿಐ ಗವರ್ನರ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನುವ ಬಗ್ಗೆ ಸ್ಪಷ್ಟನೆ ನೀಡಿದ್ದರು. ಇದೀಗ ಆರ್ ಬಿಐ ಗೃಹ ಸಾಲ ಪಡೆದವರಿಗೆ ಸಿಹಿ ಸುದ್ದಿ ನೀಡಿದೆ. ಇನ್ನು ಆರ್ ಬಿಐ ರೆಪೋ ದರ ಬದಲಾದರೆ ಸಾಲದ ಬಡ್ಡಿದರ ಬದಲಾಗುತ್ತವೆ. ರೆಪೋ ದರದಲ್ಲಿನ ಬದಲಾವಣೆ ಸಾಲ ಪಡೆದವರಿಗೆ ಇಎಂಐ ಹೊರೆಯನ್ನು ಹೆಚ್ಚಿಸುತ್ತದೆ.

Join Nadunudi News WhatsApp Group

ಇದೀಗ ಆರ್ ಬಿಐ ಬ್ಯಾಂಕುಗಳಿಗೆ ಬಡ್ಡಿದರದ ಬಗ್ಗೆ ಮಹತ್ವದ ಆದೇಶ ಹೊರಡಿಸಿದೆ. ಗೃಹ ಸಾಲವನ್ನು ಪಡೆಯುವಾಗ ಯಾವ ಬಡ್ಡಿದರದಲ್ಲಿ ಸಾಲವನ್ನು ಪಡೆದಿದ್ದರು ಅದೇ ಬಡ್ಡಿದರ ಮುಂದುವರೆಸಬೇಕಿದೆ. ರೆಪೋ ದರ ಹೆಚ್ಚಿಸಿದರೆ ಬಡ್ಡಿದರ ಹೆಚ್ಚಿಸಬಾರದು ಎಂದು ಆರ್ ಬಿಐ ಬ್ಯಾಂಕುಗಳಿಗೆ ಸೂಚನೆ ನೀಡಿದೆ. ಇನ್ನು ಮುಂದೆ ಗೃಹ ಸಾಲ ಪಡೆದವರು ಚಿಂತಿಸುವ ಅಗತ್ಯ ಇಲ್ಲ. ನೀವು ಎಷ್ಟು ದರದಲ್ಲಿ ಸಾಲವನ್ನು ಪಡೆಯುತ್ತಿರೋ ಅಷ್ಟೇ ಬಡ್ಡಿದರದಲ್ಲಿ ಸಾಲ ಪಾವತಿ ಸಾಧ್ಯವಾಗಲಿದೆ.

Join Nadunudi News WhatsApp Group