Home Loan Insurance: ಮನೆ ಸಾಲ ಮಾಡುವಾಗ ಮನೆ ಇನ್ಶೂರೆನ್ಸ್ ಯಾಕೆ ಮಾಡಬೇಕು…? ಏನಿದು ಹೋಂ ಲೋನ್ Insurance

Home Loan Insurance ಪಡೆಯುವುದರಿಂದ ಏನು ಲಾಭ...? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Home Loan Insurance Details: ಸದ್ಯದ ಈ ದುಬಾರಿ ದುನಿಯಾದಲ್ಲಿ ಸ್ವಂತ ಮನೆ ನಿರ್ಮಿಸುವುದು ಕಷ್ಟದ ಮಾತಾಗಿದೆ. ಮನೆ ಕಟ್ಟುವುದೆಂದರೆ ಮಾತಿನಲ್ಲಿ ಹೇಳುವಷ್ಟು ಸುಲಭವಲ್ಲ. ಸ್ವಂತ ಮನೆ ನಿರ್ಮಾಣದ ಕನಸಿಗೆ ಅಡ್ಡವಾಗುವುದೇ ಆರ್ಥಿಕ ಸಮಸ್ಯೆ. ಈ ಆರ್ಥಿಕ ಸಮಸ್ಯೆಗೆ ಪರಿಹಾರವಾಗಿರುವುದು Home Loan . ಹೌದು, ದೇಶದಲ್ಲಿ ಅದೆಷ್ಟೋ ಜನರು ಬ್ಯಾಂಕ್ ನಲ್ಲಿ Home Loan ಪಡೆಯುವ ಮೂಲಕ ತಮ್ಮ ಸ್ವಂತ ಮನೆ ನಿರ್ಮಾಣದ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ.

Home Loan Insurance
Image Credit: Housing

Home Loan Insurance ನ ಬಗ್ಗೆ ನಿಮಗೆಷ್ಟು ಗೊತ್ತು…?
ಗೃಹ ನಿರ್ಮಾಣದ ಜೊತೆಗೆ ಗೃಹ ಸಾಲವನ್ನು ಕೂಡ ಮರುಪಾವತಿ ಮಾಡುತ್ತಾ ಎರಡೆರಡು ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಇನ್ನು ಜೀವ ವಿಮೆ, ಆರೋಗ್ಯ ವಿಮೆಗೆ ಇರುವಂತೆ ಗೃಹ ಸಾಲಕ್ಕೂ ಕೂಡ Insurance ಇರುತ್ತದೆ ಎನ್ನುವ ವಿಚಾರ ನಿಮಗೆ ತಿಳಿದಿದೆಯೇ..? ಹೌದು, ಜೀವ ವಿಮೆ, ಆರೋಗ್ಯ ವಿಮೆಗೆ ನೀಡಲಾಗುವಂತೆ ಗೃಹ ಸಾಲಕ್ಕೆ ಕೂಡ Insurance ಅನ್ನು ನೀಡಲಾಗುತ್ತದೆ. ಗೃಹ ಸಾಲಕ್ಕೆ Insurance ಪಡೆಯುವುದರಿಂದ ಏನು ಪ್ರಯೋಜನವಿದೆ ಎನ್ನುವ ಬಗ್ಗೆ ನಾವೀಗ ಈ ಲೇಖನದಲ್ಲಿ ಹೇಳಲಿದ್ದೇವೆ.

Home Loan Insurance ಪಡೆಯುವುದರಿಂದ ಏನು ಲಾಭ…?
ಹೋಮ್ ಲೋನ್ ಪ್ರೊಟೆಕ್ಷನ್ ಪ್ಲಾನ್ Loan Protection Plan (HLPP) ಎಂದೂ ಕರೆಯುವ Home Loan Insurance ಒಂದು ವಿಮ ಪಾಲಿಸಿಯಾಗಿದ್ದು, ಇದು ಸಾಲಗಾರನ ಕುಟುಂಬಕ್ಕೆ ಆಕಸ್ಮಿಕ ಮರಣದ ಸಂದರ್ಭದಲ್ಲಿ ಗೃಹ ಸಾಲವನ್ನು ಮರುಪಾವತಿಸಲು ಸಹಾಯ ಮಾಡುವ ವಿಮಾ ಪಾಲಿಸಿಯಾಗಿದೆ. ಗೃಹ ಸಾಲವನ್ನು ಪಾವತಿಸುವ ವ್ಯಕ್ತಿಯು ದುರದೃಷ್ಟವಶಾತ್ ಮರಣಹೊಂದಿದರೆ ವಿಮೆಯು ಬಾಕಿ ಇರುವ EMI ಅನ್ನು ನೋಡಿಕೊಳ್ಳುತ್ತದೆ. ಇದರಿಂದ ಮನೆ ಸುರಕ್ಷಿತವಾಗಿರುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Home Loan Insurance Details
Image Credit: idfcfirstbank

ಗೃಹ ಸಾಲದ ವಿಮೆಯ ಬಗ್ಗೆ RBI ನಿಯಮಗಳೇನು..?
ಈ ವಿಮೆಯನ್ನು ಗೃಹ ಸಾಲವನ್ನು ತೆಗೆದುಕೊಳ್ಳುವ ಸಮಯದಲ್ಲಿ ಅಥವಾ ಸಾಲದ ಅವಧಿಯಲ್ಲಿ ಯಾವುದೇ ಸಮಯದಲ್ಲಿ ಖರೀದಿಸಬಹುದು. ಸಾಲದ ಮೊತ್ತ, ಸಾಲದ ಅವಧಿ, ಸಾಲಗಾರನ ವಯಸ್ಸು, ಆರೋಗ್ಯ ಮತ್ತು ಆಯ್ಕೆಮಾಡಿದ ಕವರೇಜ್ ಸೇರಿದಂತೆ ಹಲವಾರು ಅಂಶಗಳನ್ನು ಅವಲಂಬಿಸಿ ವಿಮೆಯ ವೆಚ್ಚವು ಬದಲಾಗುತ್ತದೆ.

ಸಾಲ ನೀಡುವ ಬ್ಯಾಂಕ್ ಸಾಲಗಾರರನ್ನು ಗೃಹ ಸಾಲ ವಿಮಾ ಪಾಲಿಸಿಯನ್ನು ಖರೀದಿಸಲು ಒತ್ತಾಯಿಸುವಂತಿಲ್ಲ ಎಂದು RBI ಸೂಚಿಸಿದೆ. ಹೀಗಾಗಿ ಗೃಹ ಸಾಲ ವಿಮೆ ಕಡ್ಡಾಯವಲ್ಲ ನಿಮಗೆ ತಿಳಿದಿರಲಿ. ನೀವು ಗಮನಿಸಬೇಕಾದ ಇನ್ನೊಂದು ವಿಷಯವೆಂದರೆ, ಗೃಹ ವಿಮೆ ಮತ್ತು ಗೃಹ ಸಾಲ ವಿಮೆ ಎರಡು ವಿಭಿನ್ನ ವಿಷಯಗಳು. ಪ್ರತಿಕೂಲ ಘಟನೆಯ ಸಂದರ್ಭದಲ್ಲಿ ಗೃಹ ವಿಮೆ ನಿಮ್ಮ ಮನೆಯನ್ನು ರಕ್ಷಿಸುತ್ತದೆ, ಕೆಲವು ಅನಿರೀಕ್ಷಿತ ಘಟನೆಗಳಿಂದ ಮರುಪಾವತಿ ಸಾಧ್ಯವಾಗದಿದ್ದರೆ ಗೃಹ ಸಾಲ ವಿಮೆ ಅದರ ಜವಾಬ್ದಾರಿಯನ್ನು ನೋಡಿಕೊಳ್ಳುತ್ತದೆ.

Join Nadunudi News WhatsApp Group

Join Nadunudi News WhatsApp Group