Home Loans: ಮನೆ ಕಟ್ಟಲು ಹೋಮ್ ಲೋನ್ ಮಾಡುವವರಿಗೆ ಸಿಹಿಸುದ್ದಿ, ಬಡವ ಶ್ರೀಮಂತ ಎಲ್ಲರಿಗು ಒಂದೇ ರೂಲ್ಸ್
ಈ ಮಾರ್ಗವನ್ನು ಅನುಸರಿಸಿದರೆ ನೀವು ಕಡಿಮೆ ಬಡ್ಡಿದರದ ಮೂಲಕ ಸಾಲವನ್ನು ಪಡೆಯಬಹುದಾಗಿದೆ.
Home loan Interest Duration: ಜನಸಾಮಾನ್ಯರ ಸ್ವಂತ ಮನೆ ನಿರ್ಮಾಣದ ಕನಸಿಗೆ ಗೃಹಸಾಲ ಒಂದು ರೀತಿಯಲ್ಲಿ ಸಹಾಯವಾಗುತ್ತದೆ. ದೇಶದ ಕೋಟ್ಯಂತರ ಜನರು ತಮ್ಮ ಕನಸನ್ನು ಗೃಹ ಸಾಲದ ಪಡೆಯುವ ಮೂಲಕ ನನಸು ಮಾಡಿಕೊಂಡಿದ್ದಾರೆ. ಇನ್ನು ಜನರ ಕನಸನ್ನು ನನಸು ಮಾಡಲು ಬ್ಯಾಂಕುಗಳು ಹಗೂ ಇತರ ಹಣಕಾಸು ಸಂಸ್ಥೆಗಳು ಗೃಹ ಸಾಲವನ್ನು ನಿಡುತ್ತದೆ.
ನೀವು ಬ್ಯಾಂಕ್ ನಲ್ಲಿ ಸಾಲ ಪಡೆಯಲು ಬಯಸುವ ಮೊದಲು ವಿವಿಧ ಬ್ಯಾಂಕ್ ಗಳ ಬಡ್ಡಿ ದರದ ಬಗ್ಗೆ ಗಮನ ಹರಿಸುವುದು ಉತ್ತಮ. ಇದೀಗ ಗೃಹಸಾಲ (Home Loan) ಪಡೆದುಕೊಳ್ಳುವವರಿಗೆ ಅಗತ್ಯ ಮಾಹಿತಿಯೊಂದು ಹೊರಬಿದ್ದಿದೆ. ಈ ಮಾಹಿತಿಯನ್ನು ಅನುಸರಿಸುವ ಮೂಲಕ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲವನ್ನು ಪಡೆಯಲು ಸಾಧ್ಯವಿದೆ.
ಹೋಂ ಲೋನ್ ಅನ್ನು ಎಷ್ಟು ಅವಧಿಗೆ ಪಡೆದುಕೊಂಡರೆ ಬಡ್ಡಿ ಕಡಿಮೆ ಬರುತ್ತದೆ
ಸಾಮಾನ್ಯವಾಗಿ ಗೃಹ ಸಾಲವನ್ನು ಪಡೆಯುವ ಸರ್ಕಾರೀ ಬ್ಯಾಂಕ್ ಗಳಲ್ಲಿ ಸಾಲ ಪಡೆಯುವುದು ಉತ್ತಮ. ಏಕೆಂದರೆ ಕೆಲ ಖಾಸಗಿ ವಲಯದ ಬ್ಯಾಂಕ್ ಗಳಿಗೆ ಹೋಲಿಸಿದೆ. ಸರ್ಕಾರೀ ಬ್ಯಾಂಕ್ ಗಳ ಬಡ್ಡಿದರ ಕಡಿಮೆ ಇರುತ್ತದೆ. ಇನ್ನು ಸಿಬಿಲ್ ಸ್ಕೊರ್ 750 ಗಿಂತ ಕಡಿಮೆ ಇದ್ದರೆ ನಿಮ್ಮ Home Loan Interest Rate ಅಧಿಕ ಆಗಲಿದೆ. ಗೃಹ ಸಾಲವನ್ನು ಪಡೆಯುವಾಗ ದೀರ್ಘವದಿಯ ಸಾಲವನ್ನು ಪಡೆಯಬಾರದು. ಬದಲಾಗಿ ಕಡಿಮೆ ವರ್ಷದ ಅವಧಿಯ ಆಯ್ಕೆಯನ್ನು ಆರಿಸಬೇಕು. ಕಡಿಮೆ ಅವಧಿಯ ಸಾಲವನ್ನು ಪಡೆದರೆ ಬಡ್ಡಿದರ ಕಡಿಮೆ ಆಗುತ್ತದೆ.
ಗೃಹಸಾಲ ಪಡೆಯುವಾಗ ಈ ತಪ್ಪು ಮಾಡಬೇಡಿ
ನೀವು ಯಾವ ಬ್ಯಾಂಕ್ ನಲ್ಲಿ ಸಾಲ ಪಡೆಯಲು ಬಯಸುವ ಮೊದಲು ವಿವಿಧ ಬ್ಯಾಂಕ್ ಗಳ ಬಡ್ಡಿ ದರವನ್ನು ತಿಳಿದುಕೊಳ್ಳಬೇಕು. ಅತಿ ಕಡಿಮೆ ಬಡ್ಡಿದರ ಯಾವ ಬ್ಯಾಂಕ್ ನಲ್ಲಿ ಇರುತ್ತದೆ ಎನ್ನುವುದನ್ನು ಗಮನಿಸಬೇಕು. ಸಾಲ ಪಡೆಯುವ ಮೊದಲು ಸಂಸ್ಕರಣಾ ಶುಲ್ಕವನ್ನು ಪರಿಶೀಲಿಸಬೇಕು. ಡಾಕ್ಯುಮೆಂಟೇಷನ್ ಮತ್ತು ಕಾನೂನು ಶುಲ್ಕಗಳು ಸೇರಿದಂತೆ ಸಾಕಷ್ಟು ಶುಲ್ಕಗಳನ್ನು ವಿಧಿಸಲಾಗುತ್ತದೆ. ನಿಮ್ಮ ಸಾಲಕ್ಕೆ ಲೋನ್ ಕವರ್ ಟರ್ಮ್ ಅಶ್ಯುರೆನ್ಸ್ ಯೋಜನೆ ಇದೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಬೇಕು.
ಅಗತ್ಯಕ್ಕೆ ಅನುಗುಣವಾಗಿ ಲೋನ್ ಲಭ್ಯತೆಯ ಬಗ್ಗೆ ಕೂಡ ನಿಗಾ ವಹಿಸಬೇಕು. ನಿಮ್ಮ ಸಾಲವು ಮುಕ್ತಾಯದ ಆಯ್ಕೆಯನ್ನು ಹೊಂದಿದೆಯೇ ಇಲ್ಲವೇ ಎನ್ನುದನ್ನು ಪರಿಶೀಲಿಸಬೇಕು. ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ತೆರಿಗೆ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಬೇಕು.
ಗೃಹ ಸಾಲದ ಮೇಲೆ ಪಾವತಿಸಿದ ಅಸಲು ಮತ್ತು ಬಡ್ಡಿಯ ಮೇಲೆ ತೆರಿಗೆ ಕಡಿತಗಳು ಸಿಗಬಹುದು. ಇನ್ನು ಗೃಹಸಾಲವನ್ನು ಪಡೆಯುವಾಗ ನೀವು ದೀರ್ಘಾವಧಿಯ ಸಾಲವನ್ನು ಆಯ್ಕೆ ಮಾಡಿದರೆ ಮಾಸಿಕ ಕಂತುಗಳ ಹೊರೆ ಕಡಿಮೆಯಾಗುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವವರಿಗೆ ಬ್ಯಾಂಕ್ ಗಳು ಕಡಿಮೆ ಬಡ್ಡಿಯಲ್ಲಿ ಸಾಲವನ್ನು ನೀಡುತ್ತವೆ.