Home Loan: ಗೃಹಸಾಲ ಮಾಡುವವರಿಗೆ ಹೊಸ ಮಾರ್ಗಸೂಚಿ ಪ್ರಕಟ, RBI ನಿಂದ ಐತಿಹಾಸಿಕ ಘೋಷಣೆ.
ಬ್ಯಾಂಕುಗಳಿಗೆ ಹೊಸ ನಿಯಮ ಜಾರಿಗೊಳಿಸಿದ RBI .
Home Loan Interest Rate: ಇತ್ತೀಚಿಗೆ ಸಾಕಷ್ಟು ಜನರು ಸ್ವಂತ ವಾಹನ ಖರೀದಿ ಅಥವಾ ಸ್ವಂತ ಮನೆ ನಿರ್ಮಾಣದ ಕನಸನ್ನು ಹೊಂದಿರುತ್ತಾರೆ. ತಮ್ಮ ಕನಸನ್ನು ಸಾಕ್ಷಾತ್ಕಾರ ಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಬ್ಯಾಂಕುಗಳಲ್ಲಿ ಅಥವಾ ಇನ್ನಿತರ ಹಣಕಾಸು ಸಂಸ್ಥೆ ಗಳಲ್ಲಿ ಸಾಲವನ್ನು ಪಡೆಯುತ್ತಾರೆ. ಇದೀಗ ಬ್ಯಾಂಕುಗಳು ಸಾಲಕ್ಕೆ ಬಡ್ಡಿಯನ್ನು ವಿಧಿಸುವ ಮೂಲಕ ಗ್ರಾಹಕರಿಗೆ ಸಾಲವನ್ನು ನೀಡುತ್ತದೆ.
ಇನ್ನು ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು ಇತ್ತೀಚಿಗೆ ತನ್ನ ಎಂಸಿಎಲ್ಆರ್ (MCLR)ದರವನ್ನು ಪರಿಷ್ಕರಿಸುತ್ತಿದೆ. ಇತ್ತೀಚಿಗೆ ಆರ್ ಬಿಐ ರೆಪೋ ದರದ ಹೆಚ್ಚಳದ ಬಗ್ಗೆ ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದ್ದವು, ಇದೀಗ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ (Shaktikanta Das) ರೆಪೋ (Repo) ದರದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಲಾಗುದಿಲ್ಲ ಎಂದು ಮಾಹಿತಿ ನೀಡಿದ್ದಾರೆ. ರೆಪೋ ದರ ಹೆಚ್ಚಾದರೆ ಬ್ಯಾಂಕುಗಳು ತಮ್ಮ ಬಡ್ಡಿದರದಲ್ಲಿ ಕೂಡ ಹೆಚ್ಚಳವನ್ನು ಮಾಡುತ್ತವೆ. ವಾಹನ ಮತ್ತು ಗೃಹ ಸಾಲ ನೀಡುವ ಬ್ಯಾಂಕ್ ಗಳಿಗೆ RBI ಹೊಸ ನಿಯಮವನ್ನ ವಿಧಿಸಿದೆ.
ಸಾಲದಲ್ಲಿ ಪಿಕ್ಸೆಟ್ ಬಡ್ಡಿದರಕ್ಕೆ ಅವಕಾಶ
ಬ್ಯಾಂಕುಗಳು ಜನರಿಗೆ ಸಾಲ ನೀಡುವ ಮುನ್ನ ಸಾಲದ ಬಡ್ಡಿದರದ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ಆದರೆ ಇದೀಗ ಬ್ಯಾಂಕುಗಳು ಗ್ರಾಹಕರ ಒಪ್ಪಿಗೆ ಪಡೆಯದೆ ಬಡ್ಡಿದರಗಳನ್ನ ವಿಧಿಸುತ್ತಿವೆ ಹಾಗೆ ಬದಲಾದ ಬಡ್ಡಿದರಗಳ ಬಗ್ಗೆ ಬ್ಯಾಂಕುಗಳು ಗ್ರಾಹಕರಿಗೆ ಮಾಹಿತಿ ನೀಡುತ್ತಿಲ್ಲ ಎಂಬ ದೂರುಗಳು RBI ಗಮನಕ್ಕೆ ಬಂದಿವೆ. ಈ ಕಾರಣಕ್ಕಾಗಿ RBI ಮಹತ್ವದ ತೀರ್ಮಾನವನ್ನ ಕೈಗೊಂಡಿದೆ.
ಇದೀಗ ಗ್ರಾಹಕರು ತೆಗೆದುಕೊಳ್ಳುವ ವಾಹನ ಮತ್ತು ಗೃಹ ಸಾಲ (Home Loan)ಗಳಿಗೆ ಕಾಲಾನುಕಾಲಕ್ಕೆ ಬದಲಾಗುವ ಬಡ್ಡಿದರದಿಂದ ಪಿಕ್ಸೆಟ್ ಬಡ್ಡಿದರಕ್ಕೆ ಬದಲಾವಣೆ ಮಾಡಿಕೊಳ್ಳುವ ಆಯ್ಕೆಯನ್ನು ನೀಡಬೇಕೆಂಬ ಹೊಸ ನಿಯಮವನ್ನ RBI ಬ್ಯಾಂಕುಗಳಿಗೆ ವಿಧಿಸಿದೆ. ಈ ನಿಯಮ ಹಳೆಯ ಮತ್ತು ಹೊಸದಾಗಿ ಪಡೆಯುವ ಸಾಲಗಳಿಗೂ ಅನ್ವಯವಾಗುತ್ತದೆ.
ಮುಂಬೈ ಅಲ್ಲಿ ನೆಡೆದ ಮೂರೂ ದಿನದ ದ್ವೈಮಾಸಿಕ ವಿಥಿಯ ಪರಿಶೀಲನಾ ಸಭೆ ಮುಗಿದ ನಂತರ RBI ಗವರ್ನರ್ ಶಕ್ತಿಕಾಂತ್ ದಾಸ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಗೆ ಪ್ರಸ್ತುತ ವಿತ್ತೀಯ ವರ್ಷದಲ್ಲಿ ಸತತ ಮೂರನೇ ಬಾರಿಗೆ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಇರಿಸಲು ತೀರ್ಮಾನ ಮಾಡಿದೆ.
ಸಾಲ ತೆಗೆದುಕೂಂಡವರಿಗೆ ಪಿಕ್ಸೆಟ್ ಬಡ್ಡಿದರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಬಡ್ಡಿದರ ಹಾಗೂ EMI ಬಗ್ಗೆ ಸಮಗ್ರ ಮಾಹಿತಿಯನ್ನ ನೀಡಬೇಕು. ಹಾಗೆ ಬದಲಾಗುವ ಬಡ್ಡಿ ದರದಿಂದ ಪಿಕ್ಸೆಟ್ ಬಡ್ಡಿದರಕ್ಕೆ ಬದಲಾಗುವ ಬಗ್ಗೆ, ಶೀಘ್ರವಾಗಿ ಸಾಲ ಕೊನೆಗೊಳಿಸುವ ಬಗ್ಗೆ, ಎಲ್ಲ ರೀತಿಯ ಶುಲ್ಕಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಬ್ಯಾಂಕುಗಳು ನೀಡಬೇಕೆಂದು RBI ಸೂಚನೆ ನೀಡಿದೆ.
ಆಫ್ಲೈನ್ ಪಾವತಿ ಮಿತಿ ಏರಿಕೆ
UPI ಲೈಟ್ ನಲ್ಲಿ ಆಫ್ಲೈನ್ ಮೂಲಕ ಕೂಡ ಪಾವತಿ ಮಾಡಬಹುದು. ಆಫ್ಲೈನ್ ಪಾವತಿ ಮಿತಿಯನ್ನು 200 ರೂ. ನಿಂದ 500 ರೂ. ಗೆ ಏರಿಕೆ ಮಾಡಲಾಗಿದೆ. ಹಾಗೆ ಗರಿಷ್ಠ ಮಿತಿಯನ್ನ 2000 ರೂಪಾಯಿಗೆ ಏರಿಸಲಾಗಿದೆ. ಇದು ಸಣ್ಣ ಪ್ರಮಾಣದ ಪಾವತಿದಾರರಿಗೆ ಅನುಕೂಲವಾಗಲಿದೆ.