Loan: ಗೃಹ ಸಾಲ ತೆಗೆದುಕೊಳ್ಳುವವರೇ ಎಚ್ಚರ, ಇದನ್ನ ಪಾಲಿಸದಿದ್ದರೆ ಕಟ್ಟಬೇಕು ದುಪ್ಪಟ್ಟು ಬಡ್ಡಿ.
ಗೃಹಸಾಲ ಪಡೆಯುವಾಗ ಈ ಕೆಳಗಿನ ಸಲಹೆಗಳನ್ನು ಪಾಲಿಸದಿದ್ದರೆ ಹೆಚ್ಚಿನ ಬಡ್ಡಿಯನ್ನು ಪಾವತಿಸ ಬೇಕಾಗುತ್ತದೆ.
Home Loan Interest Hike: ಸಾಕಷ್ಟು ಜನರು ಸ್ವಂತ ಮನೆ ನಿರ್ಮಾಣದ ಕನಸನ್ನು ಹೊಂದಿರುತ್ತಾರೆ. ಆಗಿನ ಕಾಲದಲ್ಲಿ ಜನರು ಸ್ವಂತ ಮನೆಯನ್ನು ನಿರ್ಮಾಣ ಮಾಡಲು ತಮ್ಮ ಆದಾಯವನ್ನು ಕೂಡಿಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ತಮ್ಮ ಮನೆ ನಿರ್ಮಾಣದ ಕನಸನ್ನು ಸಾಕ್ಷಾತ್ಕಾರ ಗೊಳಿಸಿಕೊಳ್ಳುವ ಸಲುವಾಗಿ ಗೃಹಸಾಲವನ್ನ ಹೆಚ್ಚಾಗಿ ಪಡೆಯುತ್ತಾರೆ.
ಬ್ಯಾಂಕ್ ಗಳಲ್ಲಿ ಅಥವಾ ಇನ್ನಿತರ ಹಣಕಾಸು ಸಂಸ್ಥೆಗಳಲ್ಲಿ ಗೃಹಸಾಲ ಪಡೆಯುದರಿಂದ ತಮ್ಮ ಸ್ವಂತ ಮನೆ ನಿರ್ಮಾಣದ ಕನಸನ್ನು ಆದಷ್ಟು ಬೇಗ ಈಡೇರಿಸಿಕೊಳ್ಳಬಹುದಾಗಿದೆ. ಇದೀಗ ಗೃಹಸಾಲ ಪಡೆದುಕೊಳ್ಳುವವರಿಗೆ ಅಗತ್ಯ ಮಾಹಿತಿಯೊಂದು ಹೊರಬಿದ್ದಿದೆ. ಈ ಕೆಲವು ತಂತ್ರಗಳನ್ನು ಅನುಸರಿಸುವ ಮೂಲಕ ಕಡಿಮೆ ಬಡ್ಡಿದರದಲ್ಲಿ ಗೃಹಸಾಲವನ್ನು ಪಡೆಯಲು ಸಾಧ್ಯವಿದೆ.
ಗೃಹಸಾಲ ಯೋಜನೆಯ ಸಲಹೆಗಳು
ದೀರ್ಘಾವಧಿಯ ಸಾಲ
ಗೃಹಸಾಲವು ದೀರ್ಘಾವಧಿಯ ಸಾಲ ಆಗಿರುದರಿಂದ ಅದಕ್ಕೆ ಹೆಚ್ಚು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಆದರೆ ಈ ಆರ್ಥಿಕ ಹೊರೆ ಕಡಿಮೆ ಮಾಡಲು ಕೆಲವು ತಂತ್ರಗಳಿವೆ, ಈ ತಂತ್ರವನ್ನು ಅನುಸರಿಸಿದರೆ ಗೃಹಸಾಲದ ಬಡ್ಡಿ ಕಡಿಮೆಯಾಗುತ್ತದೆ. ಹಾಗೆ ನೀವು ಪ್ರತಿ ತಿಂಗಳು ಪಾವತಿಸಬೇಕಾದ ಕಂತಿನ ಹೊರೆ ಕೂಡ ಕಡಿಮೆಯಾಗುತ್ತದೆ.
ಗೃಹಸಾಲದ ಅವಧಿ
ಗೃಹಸಾಲವನ್ನು ಪಡೆಯುವಾಗ ನೀವು ದೀರ್ಘಾವಧಿಯ ಸಾಲವನ್ನು ಆಯ್ಕೆ ಮಾಡಿದರೆ ಮಾಸಿಕ ಕಂತುಗಳ ಹೊರೆ ಕಡಿಮೆಯಾಗುತ್ತದೆ ಆದರೆ ಇದು ದೀರ್ಘಾವಧಿ ಸಾಲ ಆಗಿರುದರಿಂದ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಇನ್ನು ನೀವು ಕಡಿಮೆ ಅವಧಿಯ ಸಾಲವನ್ನು ಆರಿಸಿಕೊಂಡಾಗ ಬಡ್ಡಿ ಕಡಿಮೆಯಾಗುತ್ತದೆ ಆದರೆ ಮಾಸಿಕ ಕಂತುಗಳ ಹೊರೆ ತುಂಬ ಹೆಚ್ಚಾಗುತ್ತದೆ. ಹಾಗಾಗಿ ನೀವು ನಿಮ್ಮ ಆದಾಯದ ಮೂಲಕ್ಕೆ ಅನುಗುಣವಾಗಿ ಮನೆ ಸಾಲದ ಅವಧಿಯನ್ನು ಆರಿಸುದು ಸೂಕ್ತವಾಗಿದೆ.
ಗೃಹಸಾಲ ಮುಂಗಡ ಪಾವತಿ
ನಿಮ್ಮ ಮಾಸಿಕ ಆದಾಯ ಹೆಚ್ಚಾದ ಸಮಯದಲ್ಲಿ ಗೃಹಸಾಲದ ಕಂತುಗಳನ್ನು ಸ್ವಲ್ಪ ಮುಂಚಿತವಾಗಿ ಪಾವತಿಸಬೇಕು ಆಗ ನಿಮ್ಮ ಹಣಕಾಸಿನ ಹೊರೆ ವೆಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.
ಮನೆ ಸಾಲದ ಶುಲ್ಕ ಗಳು
ನಿಮ್ಮದು ಪ್ಲೋಟಿಂಗ್ ಪ್ರಕಾರದ ಹೌಸ್ ಲೋನ್ ಬಡ್ಡಿದರವಾಗಿದ್ದರೆ ಯಾವುದೇ ಪೂರ್ವ ಪಾವತಿ ಶುಲ್ಕಗಳು ಇರುವುದಿಲ್ಲ ಇದರಿಂದ ನಿಮ್ಮ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಇನ್ನು ನೀವು ಸ್ಥಿರ ಬಡ್ಡಿದರದೊಂದಿಗೆ ಮನೆ ಸಾಲ ತೆಗೆದುಕೊಂಡರೆ ಪೂರ್ವ ಪಾವತಿ ಶುಲ್ಕ ವನ್ನು ಪಾವತಿಸಬೇಕಾಗುತ್ತದೆ.
ಗೃಹಸಾಲದ ಡೌನ್ ಪೇಮೆಂಟ್
ನೀವು ಹೆಚ್ಚಿನ ಡೌನ್ ಪೆಮೆಂಟಿನೊಂದಿಗೆ ಗೃಹಸಾಲ ತೆಗೆದುಕೊಂಡಾಗ ಅದರ ಬಡ್ಡಿದರ ಕಡಿಮೆಯಾಗುತ್ತದೆ.
ಹೋಂ ಲೋನ್ ವರ್ಗಾವಣೆ
ಹೋಂ ಲೋನ್ ಬ್ಯಾಲೆನ್ಸ್ ಟ್ರಾನ್ಸ್ಪರ್ ನಿಮ್ಮ ಗೃಹಸಾಲವನ್ನು ಕಡಿಮೆ ಬಡ್ಡಿದರ ವಿಧಿಸುವ ಬ್ಯಾಂಕ್ ಗೆ ವರ್ಗಾಯಿಸಲು ಅವಕಾಶ ನೀಡುತ್ತದೆ.
ಹೋಂ ಲೋನ್ ಸ್ಥಿರ ಬಡ್ಡಿದರ
ಸ್ಥಿರ ಬಡ್ಡಿದರದೊಂದಿಗೆ ನೀವು ಗೃಹಸಾಲವನ್ನು ತೆಗೆದುಕೊಂಡು ಪೂರ್ವ ಪಾವತಿ ಮಾಡಿದರು ಸಹ ಹೆಚ್ಚುವರಿ ಶುಲ್ಕ ವನ್ನು ಪಾವತಿಸಬೇಕಾಗುತ್ತದೆ.
ಕ್ರೆಡಿಟ್ ಸ್ಕೋರ್ ಸುಧಾರಣೆ
ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವವರಿಗೆ ಬ್ಯಾಂಕ್ ಗಳು ಕಡಿಮೆ ಬಡ್ಡಿಯಲ್ಲಿ ಸಾಲವನ್ನು ನೀಡುತ್ತವೆ. ಹಾಗೆ ಕ್ರೆಡಿಟ್ ಸ್ಕೋರ್ ಇಲ್ಲದವರಿಗೆ ಹೆಚ್ಚಿನ ಬಡ್ಡಿಯೊಂದಿಗೆ ಸಾಲವನ್ನು ನೀಡುತ್ತದೆ.
ಗೃಹಸಾಲಕ್ಕಾಗಿ ಉತ್ತಮ ಬ್ಯಾಂಕ್
ಗೃಹಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಮಾರುಕಟ್ಟೆಯಲ್ಲಿ ಕಡಿಮೆ ಬಡ್ಡಿದರಕ್ಕೆ ಯಾವ ಬ್ಯಾಂಕ್ ಗಳು ಸಾಲ ನೀಡುತ್ತವೆ ಎನ್ನುವ ಬಗ್ಗೆ ತಿಳಿದುಕೊಂಡು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುದು ಉತ್ತಮ.
ಹೌಸಿಂಗ್ ಲೋನ್ ಕ್ಯಾಲ್ಕ್ಯುಲೇಟರ್
ಇಂದು ಅನೇಕ ಉಚಿತ EMI ಕ್ಯಾಲ್ಕ್ಯುಲೇಟರ್ ಗಳು ಅನ್ಲೈನ್ನಲ್ಲಿ ಲಭ್ಯವಿದೆ. ಮಾಸಿಕ EMI ಹೊರೆಯ ಅಂದಾಜು ಮಾಡಲು ಅವುಗಳನ್ನು ಬಳಸಿ. ಈ ರೀತಿಯಲ್ಲಿ ನೀವು ನಿಮ್ಮ ಹೋಂ ಲೋನ್ ಹೊರೆಯನ್ನು ಕಡಿಮೆ ಮಾಡಲು ಪ್ರಯತ್ನಿಸಬಹುದು.