Home Loan: ದೇಶಾದ್ಯಂತ ಮನೆ ಸಾಲ ಮಾಡುವವರಿಗೆ ಹೊಸ ಕಾನೂನು, ಆದೇಶ ಕೊಟ್ಟ ಬ್ಯಾಂಕುಗಳು
ಗೃಹಸಾಲ ಪಡೆಯುವ ಮುನ್ನ ಬ್ಯಾಂಕ್ ನ ಈ ನಿಯಮಗಳ ಬಗ್ಗೆ ತಿಳಿದುಕೊಳ್ಳಿ.
Home Loan Update: ಸಾಮಾನ್ಯವಾಗಿ ಮನೆ ಕಟ್ಟುವುದು ಎಲ್ಲರ ಕನಸಾಗಿರುತ್ತದೆ. ಹೊಸ ಮನೆಯ ನಿರ್ಮಾಣ ಅಥವಾ ಖರೀದಿಗೆ ಹೆಚ್ಚಿನ ಹಣ ಬೇಕಾಗುತ್ತದೆ. ಇನ್ನು ಹೊಸ ಮನೆ ಕಟ್ಟಲು ಅಥವಾ ಖರೀದಿಸಲು ಬ್ಯಾಂಕ್ ನಲ್ಲಿ ಹೋಮ್ ಲೋನ್ (Home Loan) ಲಭ್ಯವಿರುತ್ತದೆ.
ಈ ಹೋಮ್ ಲೋನ್ ನ ಸಹಾಯದಿಂದ ಜನರು ಮನೆ ನಿರ್ಮಾಣದ ಕನಸನ್ನು ನನಸು ಮಾಡಿಕೊಳ್ಳಬಹುದು. ಇನ್ನು ಗೃಹ ಸಾಲ ಪಡೆಯುವ ಸಮಯದಲ್ಲಿ ಬಹಳ ಎಚ್ಚರ ವಹಿಸಬೇಕಾಗುತ್ತದೆ. ಸಾಲ ಪಡೆಯುವ ಮುನ್ನ ಸಾಲದ ನಿಯಮಗಳ ಬಗ್ಗೆ ತಿಳಿದುಕೊಂಡಿರಬೇಕು.
ಗೃಹ ಸಾಲ ಪಡೆಯಲು ಯಾವ ಬ್ಯಾಂಕ್ ಗಳು ಉತ್ತಮವಾಗಿರುತ್ತದೆ
ಸಾಮಾನ್ಯವಾಗಿ ಗೃಹ ಸಾಲವನ್ನು ಪಡೆಯುವ ಸರ್ಕಾರೀ ಬ್ಯಾಂಕ್ ಗಳಲ್ಲಿ ಸಾಲ ಪಡೆಯುವುದು ಉತ್ತಮ. ಏಕೆಂದರೆ ಕೆಲ ಖಾಸಗಿ ವಲಯದ ಬ್ಯಾಂಕ್ ಗಳಿಗೆ ಹೋಲಿಸಿದೆ. ಸರ್ಕಾರೀ ಬ್ಯಾಂಕ್ ಗಳ ಬಡ್ಡಿದರ ಕಡಿಮೆ ಇರುತ್ತದೆ. ಇನ್ನು ಸಿಬಿಲ್ ಸ್ಕೊರ್ 750 ಗಿಂತ ಕಡಿಮೆ ಇದ್ದರೆ ನಿಮ್ಮ ಸಾಲದ ಇಂಟರೆಸ್ಟ್ ರೇಟ್ ಅಧಿಕ ಆಗಲಿದೆ.
ಗೃಹ ಸಾಲವನ್ನು ಪಡೆಯುವಾಗ ದೀರ್ಘವದಿಯ ಸಾಲವನ್ನು ಪಡೆಯಬಾರದು. ಬದಲಾಗಿ ಕಡಿಮೆ ವರ್ಷದ ಅವಧಿಯ ಆಯ್ಕೆಯನ್ನು ಆರಿಸಬೇಕು. ಕಡಿಮೆ ಅವಧಿಯ ಸಾಲವನ್ನು ಪಡೆದರೆ ಬಡ್ಡಿದರ ಕಡಿಮೆ ಆಗುತ್ತದೆ.
ಗೃಹಸಾಲ ಪಡೆಯುವಾಗ ಈ ತಪ್ಪು ಮಾಡಿದರೆ ಜೀವನಪರ್ಯಂತ ಸಾಲ ತೀರಿಸಬೇಕಾಗುತ್ತದೆ
ನೀವು ಯಾವ ಬ್ಯಾಂಕ್ ನಲ್ಲಿ ಸಾಲ ಪಡೆಯಲು ಬಯಸುವ ಮೊದಲು ವಿವಿಧ ಬ್ಯಾಂಕ್ ಗಳ ಬಡ್ಡಿ ದರವನ್ನು ತಿಳಿದುಕೊಳ್ಳಬೇಕು. ಅತಿ ಕಡಿಮೆ ಬಡ್ಡಿದರ ಯಾವ ಬ್ಯಾಂಕ್ ನಲ್ಲಿ ಇರುತ್ತದೆ ಎನ್ನುವುದನ್ನು ಗಮನಿಸಬೇಕು.ಸಾಲ ಪಡೆಯುವ ಮೊದಲು ಸಂಸ್ಕರಣಾ ಶುಲ್ಕವನ್ನು ಪರಿಶೀಲಿಸಬೇಕು. ಡಾಕ್ಯುಮೆಂಟೇಷನ್ ಮತ್ತು ಕಾನೂನು ಶುಲ್ಕಗಳು ಸೇರಿದಂತೆ ಸಾಕಷ್ಟು ಶುಲ್ಕಗಳನ್ನು ವಿಧಿಸಲಾಗುತ್ತದೆ.
ನಿಮ್ಮ ಸಾಲಕ್ಕೆ ಲೋನ್ ಕವರ್ ಟರ್ಮ್ ಅಶ್ಯುರೆನ್ಸ್ ಯೋಜನೆ ಇದೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಬೇಕು. ಅಗತ್ಯಕ್ಕೆ ಅನುಗುಣವಾಗಿ ಲೋನ್ ಲಭ್ಯತೆಯ ಬಗ್ಗೆ ಕೂಡ ನಿಗಾ ವಹಿಸಬೇಕು.ನಿಮ್ಮ ಸಾಲವು ಮುಕ್ತಾಯದ ಆಯ್ಕೆಯನ್ನು ಹೊಂದಿದೆಯೇ ಇಲ್ಲವೇ ಎನ್ನುದನ್ನು ಪರಿಶೀಲಿಸಬೇಕು.
ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ತೆರಿಗೆ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಬೇಕು. ಗೃಹ ಸಾಲದ ಮೇಲೆ ಪಾವತಿಸಿದ ಅಸಲು ಮತ್ತು ಬಡ್ಡಿಯ ಮೇಲೆ ತೆರಿಗೆ ಕಡಿತಗಳು ಸಿಗಬಹುದು.