Loan Transfer: ಗೃಹಸಾಲ ಮಾಡಿದವರಿಗೆ ಹೊಸ ಯೋಜನೆ ಬಿಡುಗಡೆ, ಈ ರೀತಿ ವರ್ಗಾವಣೆ ಮಾಡಿಕೊಳ್ಳಿ ನಿಮ್ಮ ಸಾಲ.

ಗೃಹಸಾಲ ಪಡೆದವರಿಗೆ ಉಪಯುಕ್ತ ಮಾಹಿತಿ, ನಿಮ್ಮ ಸಾಲವನ್ನು ಇನ್ನೊಂದು ಬ್ಯಾಂಕ್ ಗೆ ವರ್ಗಾವಣೆ ಮಾಡಬಹುದು.

Home Loan Transfer: ದೇಶದ ವಿವಿಧ ಪ್ರತಿಷ್ಠಿತ ಬ್ಯಾಂಕ್ (Bank) ಗಳು ಗ್ರಾಹಕರಿಗೆ ಗೃಹ ಸಾಲವನ್ನು ನೀಡುತ್ತದೆ. ಬ್ಯಾಂಕ್ ನೀಡುವ ಈ ಸಾಲದಿಂದ ಜನಸಾಮಾನ್ಯರು ತಮ್ಮ ಸ್ವತಃ ಮನೆ ನಿರ್ಮಾಣ ಅಥವಾ ಖರೀದಿಯ ಕನಸನ್ನು ಈಡೇರಿಸಿಕೊಳ್ಳಬಹುದು. ಇನ್ನು ಬ್ಯಾಂಕ್ ನಲ್ಲಿ ಸಲ ಪಡೆಯುವ ಮುನ್ನ ಎಚ್ಚರದಿಂದರಬೇಕು.

ಯಾವುದೇ ಬ್ಯಾಂಕ್ ನಲ್ಲಿ ಸಾಲ ಪಡೆಯುವ ಬ್ಯಾಂಕ್ ನಿಯಮಗಳ ಬಗ್ಗೆ ಅರಿತುಕೊಳ್ಳಬೇಕು. ಇನ್ನು ವಿವಿಧ ಬ್ಯಾಂಕ್ ಗಳಲ್ಲಿ ನೀಡಲಾಗುವ ಬಡ್ಡಿದರದ ಬಗ್ಗೆ ಕೂಡ ಮಾಹಿತಿ ತಿಳಿದಿರಬೇಕು.

Home loan can be transferred from one bank to another bank.
Image Credit: Magicbricks

ಗೃಹ ಸಾಲದ ವರ್ಗಾವಣೆ
ನೀವು ಗೃಹ ಸಾಲವನ್ನು (Home Loan) ಪಡೆದಿದ್ದರೆ ನಿಮಗೆ ಇದೀಗ ಉಪಯುಕ್ತ ಮಾಹಿತಿಯೊಂದು ಹೊರಬಿದ್ದಿದೆ. ಇತ್ತೀಚೆಗಂತೂ ಬ್ಯಾಂಕ್ ಗಳು ತಮ್ಮ ಸಾಲದ ಬಡ್ಡಿ ದರವನ್ನು ಹೆಚ್ಚಿಸುತ್ತಿದೆ. ಇನ್ನು ಬ್ಯಾಂಕ್ ಬಡ್ಡಿದರಗಳು ಕಾಲಕ್ರಮೇಣ ಬಲಾಗುತ್ತದೆ ಅದಕ್ಕೆ ಅನುಗುಣವಾಗಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

ಇನ್ನು ಹೆಚ್ಚು EMI ಕಟ್ಟುವ ಪರಿಸ್ಥಿತಿ ಬಂದಾಗ ಸಾಲ ಪಡೆದವರು ಒಂದು ಬ್ಯಾಂಕ್ ನಿಂದ ಇನ್ನೊಂದು ಬ್ಯಾಂಕ್ ವರ್ಗಾಯಿಸಲು ಬಯಸುತ್ತಾರೆ. ಇನ್ನುಮುಂದೆ ಬ್ಯಾಂಕ್ ಗಳಲ್ಲಿ ನೀವು ಗೃಹ ಸಾಲವನ್ನು ಪಡೆದುಕೊಂಡರೆ ಅದನ್ನು ಇನ್ನೊಂದು ಬ್ಯಾಂಕ್ ಗೆ ವರ್ಗಾವಣೆ ಮಾಡುವ ಸೌಲಭ್ಯವನ್ನು ಬ್ಯಾಂಕ್ ನೀಡುತ್ತದೆ.

Home loan can be transferred from one bank to another bank.
Image Credit: Bankofindia

ಗೃಹ ಸಾಲವನ್ನು ಈ ರೀತಿಯಾಗಿ ವರ್ಗಾವಣೆ ಮಾಡಿಕೊಳ್ಳಬಹುದು
ನೀವು ಹೊಸ ಬ್ಯಾಂಕ್ ಅನ್ನು ಆಯ್ಕೆ ಮಾಡಿಕೊಂಡು ಆ ಬ್ಯಾಂಕ್ ನ EMI ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು. ಹೊಸ ಬ್ಯಾಂಕ್ ಅನ್ನು ಆಯ್ಕೆ ಮಾಡಿದ ನಂತರ ಹಳೆಯ ಬ್ಯಾಂಕ್ ನಲ್ಲಿ ಸ್ವತ್ತುಮರುಸ್ವಾಧಿನಕ್ಕೆ ಅರ್ಜಿ ಸಲ್ಲಿಸಬೇಕು.ಇದಾದ ಬಳಿಕ ಹಳೆಯ ಬ್ಯಾಂಕ್ ನಿಂದ ಖಾತೆ ಹೇಳಿಕೆ ಮತ್ತು ಆಸ್ತಿ ದಾಖಲೆಗಳನ್ನು ಪಡೆಯಬೇಕು.ನಂತರ ಹಳೆಯ ಬ್ಯಾಂಕ್ ನಿಮಗೆ NOC ಅಥವಾ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ನೀಡುತ್ತದೆ.

Join Nadunudi News WhatsApp Group

ನಿರಾಕ್ಷೇಪಣಾ ಪತ್ರವನ್ನು ನೀವು ಹೊಸ ಬ್ಯಾಂಕ್ ನಲ್ಲಿ ಸಲ್ಲಿಸುವ ಮೂಲಕ ನೀವು ನಿಮ್ಮ ಗೃಹ ಸಾಲವನ್ನು ಒಂದು ಬ್ಯಾಂಕ್ ನಿಂದ ಇನ್ನೊಂದು ಬ್ಯಾಂಕ್ ಗೆ ವರ್ಗಾಯಿಸಬಹುದು. ಈ ವರ್ಗಾವಣೆ ಪ್ರಕ್ರಿಯೆ ಮಾಡಲು ನೀವು ಕೆವೈಸಿ ಪೇಪರ್ ಗಳು, ಪ್ರಾಪರ್ಟಿ ಪೇಪರ್ ಗಳು ಲೋನ್ ಬ್ಯಾಲನ್ಸ್ ಪೇಪರ್ ಗಳು, ಬಡ್ಡಿ ಪೇಪರ್ ಸೇರಿದಂತೆ ಹಲವು ದಾಖಲೆಗಳನ್ನು ನೀಡಬೇಕಾಗುತ್ತದೆ. ಎಲ್ಲ ಪ್ರಕ್ರಿಯೆಯ ನಂತರ ಹಳೆಯ ಬ್ಯಾಂಕ್ ನೀಡಿದ ಒಪ್ಪಿಗೆ ಪತ್ರದ ಮೇಲೆ ಸಾಲವನ್ನು ಮುಚ್ಚುತ್ತದೆ. ನಂತರ ನಿಮ್ಮ EMI ಅನ್ನು ಹೊಸ ಬ್ಯಾಂಕ್ ನಿಂದ ಪ್ರಾರಂಭಿಸಲಾಗುತ್ತದೆ.

Join Nadunudi News WhatsApp Group