SBI Home Loan: SBI ಗೃಹಸಾಲ ಪಡೆದವರಿಗೆ ಗುಡ್ ನ್ಯೂಸ್, 297 ಕೋಟಿ ಗೃಹಸಾಲ ಮನ್ನಾ ಮಾಡಿದ SBI.

ಗೃಹಸಾಲ ಪಡೆದವರಿಗೆ ಗುಡ್ ನ್ಯೂಸ್, ಸಾಲ ಮನ್ನಾ ಮಾಡಿದ ಎಸ್ ಬಿ ಐ.

SBI Home Loan Waiver: ಎಸ್ ಬಿ ಐ (SBI) ಬ್ಯಾಂಕ್ ದೇಶದ ಅತಿದೊಡ್ಡ ಬ್ಯಾಂಕ್ ಆಗಿದ್ದು ಈ ಬ್ಯಾಂಕ್ ಜನರಿಗೆ ಹಲವಾರು ರೀತಿಯ ಸೇವೆಗಳನ್ನು ಒದಗಿಸುತ್ತಿದೆ. ಬ್ಯಾಂಕ್ atm ಹಿಂಪಡೆಯುವಿಕೆಗಳು ಆನ್ ಲೈನ್ ಬ್ಯಾಂಕಿಂಗ್ ಸೇವೆಗಳು ಠೇವಣಿಗಳಿಂದ ಸಾಲಗಳಂತಹ ವಿವಿಧ ರೀತಿಯ ಸೇವೆಗಳನ್ನ ನೀಡುತ್ತದೆ. ಬ್ಯಾಂಕಿನ ಆದಾಯದ ಮುಖ್ಯ ಮೂಲವೆಂದರೆ ಸಾಲ.

ಬ್ಯಾಂಕುಗಳು ಸಾಮಾನ್ಯವಾಗಿ ಕಡಿಮೆ ಬಡ್ಡಿಗೆ ಠೇವಣಿಗಳನ್ನ ಸ್ವೀಕರಿಸುತ್ತವೆ ಮತ್ತು ಹೆಚ್ಚಿನ ಬಡ್ಡಿಗೆ ಗ್ರಾಹಕರಿಗೆ ನೀಡುತ್ತವೆ. ಎಸ್‌ ಬಿ ಐ ಕೂಡ ಇದಕ್ಕೆ ಹೊರತಾಗಿಲ್ಲ.

SBI Home Loan
Image Credit: google

ಎಸ್ ಬಿ ಐ ಗೃಹಸಾಲ

ಎಸ್ ಬಿ ಐ ಗ್ರಾಹಕರಿಗೆ ವಿವಿಧ ರೀತಿಯ ಸಾಲಗಳನ್ನು ನೀಡುತ್ತದೆ, ಗೃಹ ಸಾಲಗಳು ಇದರಲ್ಲಿ ಪ್ರಮುಖವಾಗಿದೆ. ಇವು ದೊಡ್ಡ ಮೊತ್ತಗಳಾಗಿವೆ. ಆದರೆ ಈ ಬ್ಯಾಂಕ್ ಗೃಹ ಸಾಲವನ್ನು ಗಮನಿಸಿದರೆ ಕಳೆದ ಐದು ವರ್ಷಗಳಲ್ಲ ಇಎಂಐ ಕಟ್ಟದೆ ಸುಸ್ತಿದಾರರ ಸಂಖ್ಯೆ ಹೆಚ್ಚಿದೆ.

ಹಣಕಾಸು ವರ್ಷ 2018-19 ರಿಂದ 2022-23 ರವರೆಗೆ ಎಸ್ ಬಿ ಐ ನಲ್ಲಿ ಸುಮಾರು 113603 ಜನರು ತಮ್ಮ ಇ ಎಂ ಐ ಸಾಲವನ್ನು ಸರಿಯಾಗಿ ಪಾವತಿಸುತ್ತಿಲ್ಲ. ಆದರೆ ಈ ಖಾತೆಗಳು ಡೀಫಾಲ್ಟ್ ಆಗಿವೆ. ಇವುಗಳ ಮೌಲ್ಯ ಒಟ್ಟು ರೂ. 7655 ಕೋಟಿ. ಕೊರೊನಾ ಸೇರಿದಂತೆ ಇತರ ಹಲವು ಅಂಶಗಳು ಇದಕ್ಕೆ ಕಾರಣವೆಂದು ಹೇಳಬಹುದು.

Join Nadunudi News WhatsApp Group

Home loan waiver from SBI
Image Credit: businessleague

ಎಸ್ ಬಿ ಐ ನಿಂದ ಗೃಹಸಾಲ ಮನ್ನಾ
ಎಸ್ ಬಿ ಐ ಈ ಅವಧಿಯಲ್ಲಿ ಸುಮಾರು 2178 ಕೋಟಿ ಮೌಲ್ಯದ 45,168 ಗೃಹ ಸಾಲ ಖಾತೆಗಳನ್ನ ವಜಾ ಮಾಡಿದ್ದು, ಆರ್‌ ಟಿ ಐ ನಲ್ಲಿ ಈ ವಿಷಯ ಬಹಿರಂಗವಾಗಿದೆ. ಆರ್‌ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌರ್, ಆರ್‌ಟಿಐ ಕಾಯ್ದೆಯಡಿ ಈ ವಿಷಯಗಳನ್ನ ಕೇಳಿದ್ದಾರೆ. ಅವರ ಪ್ರಕಾರ, ಸ್ಟೇಟ್ ಬ್ಯಾಂಕ್ 2018-19ರಲ್ಲಿ 237 ಕೋಟಿ, 2019-20ರಲ್ಲಿ 192 ಕೋಟಿ, 2020-21ರಲ್ಲಿ 410 ಕೋಟಿ, 2021-22ರಲ್ಲಿ 642 ಕೋಟಿ, 2022-23ರಲ್ಲಿ 697 ಕೋಟಿ ಗೃಹ ಸಾಲ ಮನ್ನಾ ಮಾಡಲಾಗಿದೆ.

Join Nadunudi News WhatsApp Group