Rent Rules: ಮನೆ ಬಾಡಿಗೆ ಕೊಡುವ ಎಲ್ಲರಿಗೂ ಹೊಸ ನಿಯಮ.
ಮನೆ ಬಾಡಿಗೆ ನೀಡುವವರಿಗೆ ಮತ್ತು ಮನೆ ಬಾಡಿಗೆ ತೆಗೆದುಕೊಳ್ಳುವವರಿಗೆ ಹೊಸ ನಿಯಮ.
Rent Agreement Rules: ಮನೆ ಬಾಡಿಗೆ ತೆಗೆದುಕೊಳ್ಳುವವರು ಮತ್ತು ಮನೆ ಬಾಡಿಗೆ ಕೊಡುವವರು ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳಬೇಕು. ಆಸ್ತಿಯನ್ನು ಪಡೆಯಲು ಕೆಲವು ಕಾನೂನು ನಿಯಮಗಳಿಗೆ. ಮನೆ ಬಾಡಿಗೆ ತೆಗೆದುಕೊಳ್ಳುವವರು ಅನಂತರ ಅವರೇ ಆ ಮನೆಯ ಮಾಲೀಕರಾಗಬಹುದು.
ಆದ್ದರಿಂದ ಕಾನೂನು ನಿಯಮದ ಬಗ್ಗೆ ಆಸ್ತಿಯ ಬಗ್ಗೆ ಅದರ ಹಕ್ಕಿನ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಅದರಲ್ಲೂ ಬಾಡಿಗೆ ನಿಯಮವನ್ನು ಜನರು ತಿಳಿದುಕೊಂಡು ಮುಂದುವರೆಯುವುದು ಹೆಚ್ಚು ಉಪಯುಕ್ತವಾಗಿದೆ.
ಮನೆ ಬಾಡಿಗೆ ನೀಡುವವರಿಗೆ ಮತ್ತು ಮನೆ ಬಾಡಿಗೆ ತೆಗೆದುಕೊಳ್ಳುವವರಿಗೆ ಹೊಸ ಮಾಹಿತಿ
ಜನರು ಮನೆಯನ್ನು ಬಾಡಿಗೆಗೆ ಕೊಡುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು. ದೊಡ್ಡ ದೊಡ್ಡ ನಗರದಲ್ಲಿ ಮನೆ ಬಾಡಿಗೆಗೆ ಕೊಡುವವರು ಹೆಚ್ಚಾಗಿ ಇರುತ್ತಾರೆ. ದೊಡ್ಡ ಮನೆ ಹೊಂದಿರುವವರು ತಮ್ಮ ಮನೆಯ ಅರ್ಧ ಭಾಗವನ್ನು, ರೂಮ್ ಗಳನ್ನೂ ಬಾಡಿಗೆಗೆ ಕೊಡುತ್ತಾರೆ. ಆದರೆ ಮನೆ ಬಾಡಿಗೆ ಎಂದರೆ ಅದಕ್ಕೆ ಕಾನೂನು ನಿಯಮಗಳು ಇವೆ. ಮನೆ ಬಾಡಿಗೆ ಕೊಡುವವರು ಅವರಿಗೆ ಆದಾಯ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಕೊಡುತ್ತಾರೆ. ಆದರೆ ಇದಕ್ಕೆ ಕಾನೂನು ನಿಯಮ ಇರುವುದು ಅವರಿಗೆ ತಿಳಿದಿಲ್ಲ.
ಮನೆ ಬಾಡಿಗೆದಾರರಿಗೆ ಹೊಸ ನಿಯಮ
ಮನೆ ಬಾಡಿಗೆ ತೆಗೆದುಕೊಳ್ಳುವವರು ಮತ್ತು ಮನೆ ಬಾಡಿಗೆ ನೀಡುವವರು ಕಾನೂನು ನಿಯಮಗಳನ್ನು ತಿಳಿದುಕೊಳ್ಳಬೇಕು. ಕಾನೂನಿನ ಪ್ರಕಾರ ಬಾಡಿಗೆ ಕೊಡುವವರು ಎಚ್ಚರದಿಂದ ಇರಬೇಕು, ಏಕೆಂದರೆ ಬಾಡಿಗೆದಾರರು 12 ವರ್ಷಗಳ ವರೆಗೆ ಬಾಡಿಗೆ ಮನೆ ಅಥವಾ ರೂಮ್ ನಲ್ಲಿ ಇದ್ದರೆ ಆ ಮನೆ ಅವರದ್ದಾಗುತ್ತದೆ.
ಬಾಡಿಗೆ ಒಪ್ಪಂದ
ಮನೆಯ ಮಾಲೀಕರು ಬಾಡಿಗೆ ನೀಡಬೇಕಾದರೆ ಕಾನೂನು ನಿಯಮವನ್ನು ತಿಳಿದುಕೊಳ್ಳಲೇಬೇಕು. ಬಾಡಿಗೆ ಒಪ್ಪಂದವನ್ನು ಮಾಡಿಸಿದರೆ ಬಾಡಿಗೆ ಮನೆ ನಿಮ್ಮದಾಗಿಯೇ ಇರುತ್ತದೆ. ಬಾಡಿಗೆ ಒಪ್ಪಂದ ಅಂದರೆ ಈ ಎಗ್ರಿಮೆಂಟ್ 11 ತಿಂಗಳದ್ದಾಗಿರುತ್ತದೆ. ಪ್ರತಿ ತಿಂಗಳಿಗೊಮ್ಮೆ ಈ ಒಪ್ಪಂದವನ್ನು ನವೀಕರಿಸಲೇಬೇಕು.
ಈ ರೀತಿ ಅಗ್ರಿಮೆಂಟ್ ಮಾಡಿಸಿಕೊಂಡಾಗ ನೀವು ಯಾವಾಗ ಬೇಕಾದರೂ ಬಾಡಿಗೆದಾರರನ್ನು ಬದಲಾಯಿಸಬಹುದು. ಬಾಡಿಗೆದಾರರು ನಿಮ್ಮ ಮನೆಯಲ್ಲಿ ಹಕ್ಕು ಸಾಧಿಸಲು ಸಾಧ್ಯವಾಗುವುದಿಲ್ಲ. ಇನ್ನು ಮನೆ ಬಾಡಿಗೆ ನೀಡುವವರು ನಿಮ್ಮ ಆಸ್ತಿ ಬಗ್ಗೆ ಗಮನ ವಹಿಸಬೇಕು. ಏಕೆಂದರೆ ಬಾಡಿಗೆದಾರರು ನಿಮ್ಮ ಆಸ್ತಿಯನ್ನು ಸಹ ಪಡೆದುಕೊಳ್ಳಬಹುದು.