Activa CNG: ಕೊನೆಗೂ ಬಂತು Activa CNG ಸ್ಕೂಟರ್, ಕಡಿಮೆ ಬೆಲೆ ಮತ್ತು 100 ಕಿಲೋಮೀಟರ್ ಮೈಲೇಜ್.
ಕಡಿಮೆ ಬೆಲೆಗೆ ಖರೀದಿಸಿ 100 ಕಿಲೋಮೀಟರ್ ಮೈಲೇಜ್ ನೀಡುವ CNG ಸ್ಕೂಟರ್.
HONDA Activa CNG: ಭಾರತೀಯ ಮಾರುಕಟ್ಟೆಯಲ್ಲಿ Honda ಕಂಪನಿಯ ಬೈಕ್ ಗಳು ಅತಿ ಹೆಚ್ಚು ಬೇಡಿಕೆಯನ್ನು ಪಡೆದುಕೊಂಡಿದೆ. ಕಂಪನಿಯು ಇತ್ತೀಚಿಗೆ ವಿವಿಧ ಮಾದರಿಯಲ್ಲಿ ಹೊಸ ಹೊಸ ಬೈಕ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಹೋಂಡಾ ಕಂಪನಿಯ ಬೈಕ್ ಗಳು ಗ್ರಾಹಕರಿಗೆ ಹೆಚ್ಚಿನ ಮೈಲೇಜ್ ನೀಡುತ್ತವೆ. ಹೋಂಡಾ ಬೈಕ್ ನ ಜೊತೆಗೆ Activa Scooter ಗಳು ಕೂಡ ಅಷ್ಟೇ ಬೇಡಿಕೆಯನ್ನು ಪಡೆದುಕೊಂಡಿದೆ.
ಇನ್ನು ಗ್ರಾಹಕರಿಗೆ ತಮ್ಮ ಬಳಿ ಇರುವ ಸ್ಕೂಟರ್ ಗಳು ಹೆಚ್ಚಿನ ಮೈಲೇಜ್ ನೀಡಬೇಕು ಎನ್ನುವ ಬಗ್ಗೆ ಯೋಚಿಸುತ್ತಾರೆ. ಇದೀಗ ನಿಮ್ಮ ಸ್ಕೂಟರ್ ಮೈಲೇಜ್ ಹೆಚ್ಚಿಸಿಕೊಳ್ಳಲು ಹೋಂಡಾ ಆಕ್ಟಿವಾ ಸಹಾಯ ಮಾಡಲಿದೆ. ಇನ್ನು ಕಡಿಮೆ ಮೈಲೇಜ್ ನೀಡುತ್ತಿರುವ ನಿಮ್ಮ ಆಕ್ಟಿವಾದ ಮೈಲೇಜ್ ಅನ್ನು ನೀವು ಹೆಚ್ಚಿಸಿಕೊಳ್ಳಲು ಪೆಟ್ರೋಲ್ ನ ಬದಲಾಗಿ CNG ಬಳಸಬೇಕಾಗುತ್ತದೆ.
HONDA Activa CNG
ಈಗಾಗಲೇ ಹೋಂಡಾ ಕಂಪನಿಯು ತನ್ನ ಆಕ್ಟಿವಾ ಮಾದರಿಯನ್ನು ಎಲೆಕ್ಟ್ರಿಕ್ ಹಾಗೂ ಪೆಟ್ರೋಲ್ ಮಾದರಿಯಲ್ಲಿ ಮಾತ್ರ ಬಿಡುಗಡೆ ಮಾಡಿದೆ. ಆಕ್ಟಿವಾ ಸಿಎನ್ ಜಿ ಮಾದರಿ ಇನ್ನು ಬಿಡುಗಡೆ ಆಗಿಲ್ಲ. ಸದ್ಯದಲ್ಲೇ Honda ತನ್ನ Activa CNG ರೂಪಾಂತರವನ್ನು ಕೂಡ ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಗ್ರಾಹಕರ ಪೆಟ್ರೋಲ್ ಖರ್ಚನ್ನು ಇನ್ನಷ್ಟು ಉಳಿಸಲಿದೆ. ಸದ್ಯ ಹೋಂಡಾ ಕಂಪನಿಯ ಈ Activa CNG ವಿಶೇಷತೆಗಳೇನು? Activa CNG ಮಾರುಕಟ್ಟೆಗೆ ಬೆಲೆ ಎಷ್ಟಿರಬಹುದು? ಎಂಬೆಲ್ಲ ಪ್ರಶ್ನೆಗೆ ಇಲ್ಲಿದೆ ಉತ್ತರ.
ಕಡಿಮೆ ಬೆಲೆಗೆ 100 ಕಿಲೋಮೀಟರ್ ಮೈಲೇಜ್ ನೀಡುವ ಸ್ಕೂಟರ್
HONDA Activa CNG ಯಾ ಎಂಜಿನ್ ನಲ್ಲಿ ಕಂಪನಿಯು ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಸ್ಕೂಟರ್ ನ ಮುಂದಿರುವ ಜಾಗದಲ್ಲಿ ನಾವು ಎರಡು ಸಿಲಿಂಡರ್‌ಗಳನ್ನು ನೋಡಬಹುದು. ಈ ಎರಡೂ ಸಿಲಿಂಡರ್ ಗಳಲ್ಲಿ 10 ಕೆಜಿ CNG ತುಂಬಬಹುದು.
ಈ CNG Scooter ಪ್ರತಿ ಕಿಲೋಗ್ರಾಂಗೆ 100 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ ಎನ್ನಲಾಗುತ್ತಿದೆ. ಇನ್ನು CNG Scooter ಭಾರತದಲ್ಲಿ ಸರಿಸುಮಾರು 90 ರಿಂದ 95 ಸಾವಿರ ರೂ. ಗಳಲ್ಲಿ ಲಭ್ಯವಾಗಲಿದೆ. ಇನ್ನು CNG ಸ್ಕೂಟರ್ ನಲ್ಲಿ ಬೂಟ್ ಸ್ಪೇಸ್ ಅನ್ನು ಪಡೆಯುತ್ತೀರಿ ಆದರೆ ಮುಂಭಾಗದಲ್ಲಿ ಒದಗಿಸಲಾದ ಫುಟ್ ರೆಸ್ಟ್ ಅನ್ನು ಕಡಿಮೆಗೊಳಿಸಲಾಗುತ್ತದೆ. ಇನ್ನು ಆಕ್ಟಿವಾ CNG ಯಲ್ಲಿ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.