Honda Electric: ಓಲಾ ಸ್ಕೂಟರ್ ಗೆ ಪೈಪೋಟಿ ಕೊಡಲು ಬಂತು ಹೋಂಡಾ Activa EV, 200 Km ಮೈಲೇಜ್ ಮತ್ತು ಕಡಿಮೆ ಬೆಲೆ.
ದೇಶದಲ್ಲಿ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲು ಈಗ ಹೋಂಡಾ ತಯಾರಿಯನ್ನ ಮಾಡುತ್ತಿದೆ.
Honda Activa Electric EV: ಪ್ರಸ್ತುತ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮಾದರಿಯ ಬೈಕ್ ಗಳಿಗಿಂತ ಎಲೆಕ್ಟ್ರಿಕ್ ವಾಹನಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಮಾರುಕಟ್ಟೆಗೆ ಹೊಸ ಮಾದರಿಯ ಎಲೆಕ್ಟ್ರಿಕ್ ಬೈಕ್ ಬರುತ್ತಿದ್ದಂತೆ ಬಹಳ ವೇಗವಾಗಿ ಸೆಲ್ ಕಾಣುತ್ತಿದೆ. ಈ ಕಾರಣಕ್ಕೆ ವಿವಿಧ ಪ್ರತಿಷ್ಠಿತ ಕಂಪನಿಗಳು ವಿಭಿನ್ನ ವಿನ್ಯಾಸದ ಹೊಸ ಮಾದರಿಯ ಎಲೆಕ್ಟ್ರಿಕ್ ಬೈಕ್ ಗಳನ್ನೂ ಹೆಚ್ಚಾಗಿ ಪರಿಚಯಿಸುತ್ತಿವೆ.
ಇನ್ನು ಎಲೆಕ್ಟ್ರಿಕ್ ವಾಹನಗಳ ಮೇಲಿನ ಬೇಡಿಕೆ ಹೆಚ್ಚಾಗಲು ಒಂದು ವಿಧದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯ ಏರಿಕೆ ಕಾರಣವಾಗಿದೆ. ಅಧಿಕ ಹಣ ಖರೀದಿಸಿ ವಾಹನವನ್ನು ಖರೀದಿಸಿದರು ಅದರ ನಿರ್ವಹಣೆಗೆ ಬೇಕಾಗುವ ಕಚ್ಚಾ ತೈಲದ ಬೆಲೆ ಹೆಚ್ಚಾಗುತ್ತಿದೆ. ಈ ಕಾರಣಕ್ಕೆ ಜನರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಬಯಸುತ್ತಿದ್ದಾರೆ.
ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಕಂಪನಿಗಳು ಹೊಸ ಮಾದರಿಯ ಸ್ಕೂಟರ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಅದರಲ್ಲೂ ಹೋಂಡಾ (Honda) ಕಂಪನಿ ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯನ್ನೇ ಪರಿಚಯಿಸುತ್ತಿದೆ.
ಹೋಂಡಾ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
ಇದೀಗ ದೇಶದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪೆನಿಗಳಲ್ಲಿ ಒಂದಾದ ಹೋಂಡಾ ತನ್ನ ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವಿಶೇಷ ದರದಲ್ಲಿ ಗ್ರಾಹಕರಿಗೆ ಪರಿಚಯಿಸಲಿದೆ. ಹೋಂಡಾ ಕಂಪನಿಯ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಹೋಂಡಾ ಕಂಪನಿಯ ಈ ಎಲೆಕ್ಟ್ರಿಕ್ ಸ್ಕೂಟರ್ ಗಳ ವಿಶೇಷತೆ ಹಾಗೂ ಲಭ್ಯತೆಯ ಬಗ್ಗೆ ವಿವರ ತಿಳಿಯೋಣ.
ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ ಹೋಂಡಾ ಆಕ್ಟಿವಾ
ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 4 ರಿಂದ 5wh ಬ್ಯಾಟರಿಯನ್ನು ಅಳವಡಿಸಲಾಗಿದೆ. ಹೋಂಡಾ ಆಕ್ಟಿವಾ ಸ್ಕೂಟರ್ ಒಂದೇ ಚಾರ್ಜ್‌ನಲ್ಲಿ ಬರೋಬ್ಬರಿ 200 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರ ಚಲಿಸುತ್ತದೆ. ಹೋಂಡಾ ಆಕ್ಟಿವಾ ಸ್ಕೂಟರ್ ನಲ್ಲಿ ಸುಧಾರಿತ ಡಿಸ್ ಪ್ಲೇ ಅಳವಡಿಸಲಾಗಿದ್ದು, ಓಡೋಮೀಟರ್, ಬ್ಯಾಟರಿ ಚಾರ್ಜ್ ಇಂಡಿಕೇಟರ್, ಟರ್ನ್ ಸೈಡ್ ಇಂಡಿಕೇಟರ್, ಸ್ಪೀಡ್‌ಮಾಂಟರ್, ಕ್ಲಾಕ್ ಅನ್ನು ಒಳಗೊಂಡಿದೆ. ನ್ಯಾವಿಗೇಷನ್, ಸಂಪರ್ಕ ಮತ್ತು ಕರೆ ಎಚ್ಚರಿಕೆ ವ್ಯವಸ್ಥೆ ಕೂಡ ನೀಡಲಾಗಿದೆ.
ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ
ಸ್ಕೂಟರ್ ನಲ್ಲಿ ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಮುಂಭಾಗ ಮತ್ತು ಹಿಂಭಾಗದ ಟೈರ್‌ಗಳಲ್ಲಿ ಆಂಟಿ-ಫೈರ್, ಅಲಾರ್ಮ್, ಆಂಟಿ-ಥೆಫ್ಟ್ ಅಲಾರ್ಮ್, ಡಿಸ್ಕ್ ಬ್ರೇಕ್ ಮತ್ತು ಕಾಂಬಿ ಬ್ರೇಕಿಂಗ್ ಸಿಸ್ಟಮ್ ಅನ್ನು ಒದಗಿಸಲಾಗುವುದು.
ಮುಂಭಾಗ ಮತ್ತು ಹಿಂಭಾಗದ ಟೈರ್‌ಗಳಲ್ಲಿ ಅಡ್ವಾನ್ಸ್ ವೈಶಿಷ್ಟ್ಯಗಳು ಚಾರ್ಜಿಂಗ್ ಪಾಯಿಂಟ್, ವೇಗದ ಚಾರ್ಜಿಂಗ್, ಇಂಟರ್ನೆಟ್ ಸಂಪರ್ಕ ಒಳಗೊಂಡಿರುತ್ತದೆ. ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಗೆ ಕಂಪನಿಯು 1.10 ಲಕ್ಷ ರೂ. ಅನ್ನು ನಿಗಧಿಪಡಿಸಿದೆ. ಇನ್ನು 2024 ರ ಅಂತ್ಯದ ವೇಳೆಗೆ ಈ ಸ್ಕೂಟರ್ ಮಾರುಕಟ್ಟೆಗೆ ಬಂದು ಓಲಾ ಸ್ಕೂಟರ್ ಗಳಿಗೆ ಬಾರಿ ಪೈಪೋಟಿ ನೀಡಲಿದೆ.