Activa EV: ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರಿಗೆ ಬೇಸರದ ಸುದ್ದಿ, ಇನ್ನೊಂದು ಘೋಷಣೆ ಮಾಡಿದ ಕಂಪನಿ.

ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಕಂಪನಿ ಇನ್ನೊಂದು ಘೋಷಣೆ ಮಾಡಿದೆ.

Honda Activa Electric Launch Date: ಭಾರತೀಯ ಆಟೋ ವಲಯದಲ್ಲಿ ಇತ್ತೀಚೆಗಂತೂ ಪೆಟ್ರೋಲ್ ಮಾದರಿಗಿಂತ ಎಲೆಕ್ಟ್ರಿಕ್ ಮಾದರಿಯ ಸ್ಕೂಟರ್ ಗಳು ಹೆಚ್ಚು ಬಿಡುಗಡೆಗೊಳ್ಳುತ್ತಿದೆ ಎಂದರೆ ತಪ್ಪಾಗಲಾರದು. ಮಾರುಕಟ್ಟೆಯಲ್ಲಿ ಹೆಚ್ಚಾಗಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಗಳು ಹೆಚ್ಚಿನ ಬೇಡಿಕೆ ಪಡೆಯುತ್ತದೆ.

ಇದೀಗ Honda ಕಂಪನಿ ಓಲಾ ಎಲ್ಕ್ಟ್ರಿಕ್ ಮಾದರಿಯ ಬೇಡಿಕೆಯನ್ನು ತಗ್ಗಿಸಲು ಹೊಸ ವಿನ್ಯಾಸದ ಎಲೆಕ್ಟ್ರಿಕ್ ಮಾದರಿಯನ್ನು ಪರಿಚಯಿಸಲು ಸಜ್ಜಾಗಿದೆ. ಈ ನೂತನ ಎಲೆಕ್ಟ್ರಿಕ್ ಮಾದರಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ. ಸದ್ಯ Honda ತನ್ನ ನೂತನ ಮಾದರಿ ಯಾವಾಗ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಎನ್ನುವ ಬಗ್ಗೆ ಮಾಹಿತಿ ಬಹಿರಂಗಪಡಿಸಿದೆ.

Honda Activa Electric Launch Date
Image Credit: Original Source

Honda Activa Electric
Honda ಇದೀಗ ನೂತನವಾಗಿ ತನ್ನ Activa Electric ಮಾದರಿಯನ್ನು ಪರಿಚಯಿಸಲು ಸಿದ್ದತೆ ನಡೆಸುತ್ತಿದೆ. ಕಂಪನಿಯು ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್‌ ಸ್ಕೂಟರ್ ನಲ್ಲಿ 4 ರಿಂದ 5wh ಬ್ಯಾಟರಿಯನ್ನು ಅಳವಡಿಸಲಾಗಿದೆ. ಹೋಂಡಾ ಆಕ್ಟಿವಾ ಸ್ಕೂಟರ್ ವೇಗದ ಚಾರ್ಜಿಂಗ್ ನೊಂದಿಗೆ ಒಂದೇ ಚಾರ್ಜ್‌ನಲ್ಲಿ ಬರೋಬ್ಬರಿ 100 ಕಿಲೋಮೀಟರ್‌ ಗಳಿಗಿಂತ ಹೆಚ್ಚು ದೂರ ಚಲಿಸುತ್ತದೆ.

ಇನ್ನು Honda Activa Electric ಮಾದರಿಯ್ಲಲಿ ಅಳವಡಿಸಲಾದ ಬ್ಯಾಟರಿ ಕೇವಲ 2 ರಿಂದ 3 ಗಂಟೆಗಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗಲಿದೆ. ಹೋಂಡಾ ಆಕ್ಟಿವಾ ಸ್ಕೂಟರ್ ನಲ್ಲಿ ಸುಧಾರಿತ ಹತ್ತು ಹಲವು ವೈಶಿಸ್ಯಗಳನ್ನು ನೋಡಬಹುದು. ದೊಡ್ಡ ಡಿಸ್ ಪ್ಲೇ ಅಳವಡಿಸಲಾಗಿದ್ದು, Odometer, Battery Charge Indicator, Turn Side Indicator, Speedometer, Clock ಅನ್ನು ಒಳಗೊಂಡಿದೆ. ಇದರ ಜೊತೆಗೆ Navigation, connectivity and call alert ವ್ಯವಸ್ಥೆ ಕೂಡ ನೀಡಲಾಗಿದೆ.

Honda Activa Electric
Image Credit: Rushlane

Honda Activa ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಅಪ್ಡೇಟ್
ಸದ್ಯ Honda Activa Electric ಮಾದರಿಗಾಗಿ ಕಾಯುತ್ತಿದ್ದ ಜನರಿಗೆ ಬಿಗ್ ಅಪ್ಡೇಟ್ ಲಭಿಸಿದೆ. ಸ್ಕೂಟರ್ ನಲ್ಲಿ ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದ್ದು, ಮುಂಭಾಗ ಮತ್ತು ಹಿಂಭಾಗದ ಟೈರ್‌ ಗಳಲ್ಲಿ Anti-fire, alarm, anti-theft alarm, disc brake and combi braking system ಅನ್ನು ಒದಗಿಸಲಾಗುವುದು. ಮುಂಭಾಗ ಮತ್ತು ಹಿಂಭಾಗದ ಟೈರ್‌ ಗಳಲ್ಲಿ ಅಡ್ವಾನ್ಸ್ ವೈಶಿಷ್ಟ್ಯಗಳು ಚಾರ್ಜಿಂಗ್ ಪಾಯಿಂಟ್, ವೇಗದ ಚಾರ್ಜಿಂಗ್, ಇಂಟರ್ನೆಟ್ ಸಂಪರ್ಕ ಒಳಗೊಂಡಿರುತ್ತದೆ.

Join Nadunudi News WhatsApp Group

ನೀವು ಈ ನೂತನ Honda Activa Electric ಮಾದರಿಯನ್ನು ಮಾರುಕಟ್ಟೆಯಲ್ಲಿ 1.10 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು 2024 ರ ಅಂತ್ಯದ ವೇಳೆಗೆ ಈ ಸ್ಕೂಟರ್ ಮಾರುಕಟ್ಟೆಗೆ ಬರಲಿದೆ ಎಂದು ಕಂಪನಿಯು ಅಧಿಕೃತವಾಗಿ ಘೋಷಣೆ ಹೊರಡಿಸಿದೆ. ಸದ್ಯ ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಪರಿಚಯವಾಗಲಿರುವ ಈ Hnnda EV ಓಲಾ ಸ್ಕೂಟರ್ ಗಳಿಗೆ ಬಾರಿ ಪೈಪೋಟಿ ನೀಡಲಿದೆ.

Join Nadunudi News WhatsApp Group