Activa CNG: 40 ರೂ ಖರ್ಚಿನಲ್ಲಿ ಹೋಂಡಾ ಆಕ್ಟಿವಾ ಓಡುತ್ತೆ 100 km, ಜಸ್ಟ್ ಈ ಕೆಲಸ ಮಾಡಿ ಸಾಕು.
ಕೇವಲ 40 ರೂ. ಖರ್ಚು ಮಾಡುವ ಮೂಲಕ ನಿಮ್ಮ ಸ್ಕೂಟರ್ ನ ಮೈಲೇಜ್ ಅನ್ನು ಹೆಚ್ಚಿಸಿಕೊಳ್ಳಬಹುದು.
Honda Activa CNG: ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ (Honda) ಕಂಪನಿಯ ಬೈಕ್ ಗಳು ಅತಿ ಹೆಚ್ಚು ಬೇಡಿಕೆಯನ್ನು ಪಡೆದುಕೊಂಡಿದೆ. ಕಂಪನಿಯು ಇತ್ತೀಚಿಗೆ ವಿವಿಧ ಮಾದರಿಯಲ್ಲಿ ಹೊಸ ಹೊಸ ಬೈಕ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಹೋಂಡಾ ಕಂಪನಿಯ ಬೈಕ್ ಗಳು ಗ್ರಾಹಕರಿಗೆ ಹೆಚ್ಚಿನ ಮೈಲೇಜ್ ನೀಡುತ್ತವೆ.
ಇನ್ನು ಇತ್ತೀಚಿಗೆ ಹೋಂಡಾ ತನ್ನ ಹೊಸ ಆಕ್ಟಿವಾ (Honda Activa) ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಇನ್ನು ಗ್ರಾಹಕರಿಗೆ ತಮ್ಮ ಬಳಿ ಇರುವ ಸ್ಕೂಟರ್ ಗಳು ಹೆಚ್ಚಿನ ಮೈಲೇಜ್ ನೀಡಬೇಕು ಎನ್ನುವ ಬಗ್ಗೆ ಯೋಚಿಸುತ್ತಾರೆ. ಇದೀಗ ನಿಮ್ಮ ಸ್ಕೂಟರ್ ಮೈಲೇಜ್ ಹೆಚ್ಚಿಸಿಕೊಳ್ಳಲು ಸುಲಭ ಉಪಾಯದ ಬಗ್ಗೆ ಮಾಹಿತಿ ಲಭಿಸಿದೆ.
ಈ ಕೆಲಸ ಮಾಡುವ ಮೂಲಕ ನಿಮ್ಮ ಸ್ಕೂಟರ್ ನ ಮೈಲೇಜ್ ಅನ್ನು ಹೆಚ್ಚಿಸಿಕೊಳ್ಳಬಹುದು
ಸಾಮಾನ್ಯವಾಗಿ ಹೋಂಡಾ ಆಕ್ಟಿವಾ ಸ್ಕೂಟರ್ ನ ಮೈಲೇಜ್ 45 ರಿಂದ 50 ಅಥವಾ ಗರಿಷ್ಟ 55 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಇದಕ್ಕಿಂತಲೂ ಹೆಚ್ಚಿನ ಮೈಲೇಜ್ ನೀಡುವ ಬೈಕ್ ಅನ್ನು ಖರೀದಿಸಲು ನೀವು ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ. ಆದರೆ ಇದೀಗ ನೀವು ಈ ಸುಲಭ ವಿಧಾನದ ಮೂಲಕ ಕೇವಲ 40 ರೂ. ಗಳಲ್ಲಿ 100 ಕಿಲೋಮೀಟರ್ ಮೈಲೇಜ್ ಅನ್ನು ಪಡೆಯಬಹುದಾಗಿದೆ.
ಕೇವಲ 40 ರೂ. ನಲ್ಲಿ ಮೈಲೇಜ್ ಹೆಚ್ಚಿಸಿಕೊಳ್ಳುವುದು ಹೇಗೆ
ಇನ್ನು ಕಡಿಮೆ ಮೈಲೇಜ್ ನೀಡುತ್ತಿರುವ ನಿಮ್ಮ ಆಕ್ಟಿವಾದ ಮೈಲೇಜ್ ಅನ್ನು ನೀವು ಹೆಚ್ಚಿಸಿಕೊಳ್ಳಲು ಪೆಟ್ರೋಲ್ ನ ಬದಲಾಗಿ CNG ಬಳಸಬೇಕಾಗುತ್ತದೆ. CNG ಬಳಕೆಯಿಂದಾಗಿ ನೀವು ಕೇವಲ 40 ರೂ. ಗಳಲ್ಲಿ 100 ಕಿಲೋಮೀಟರ್ ಮೈಲೇಜ್ ಅನ್ನು ಪಡೆಯಬಹುದು. ಒಂದು ಕೆಜಿ ಸಿಎನ್ ಜಿ ನಿಮಗೆ ಕೇವಲ 40 ರೂ. ಗಳಲ್ಲಿ ಲಭ್ಯವಾಗಲಿದೆ.
ಆಕ್ಟಿವಾದ CNG ಕಿಟ್
ಈಗಾಗಲೇ ಹೋಂಡಾ ಕಂಪನಿಯು ತನ್ನ ಆಕ್ಟಿವಾ ಮಾದರಿಯನ್ನು ಎಲೆಕ್ಟ್ರಿಕ್ ಹಾಗೂ ಪೆಟ್ರೋಲ್ ಮಾದರಿಯಲ್ಲಿ ಮಾತ್ರ ಬಿಡುಗಡೆ ಮಾಡಿದೆ. ಆಕ್ಟಿವಾ ಸಿಎನ್ ಜಿ ಮಾದರಿ ಇನ್ನು ಬಿಡುಗಡೆ ಆಗಿಲ್ಲ.
ಇದೀಗ ದೆಹಲಿ ಮೂಲದ ಸಿಎನ್ ಜಿ ಕಿಟ್ ತಯಾರಕ ಕಂಪನಿ LOVATO ಹೋಂಡಾ ಆಕ್ಟಿವಾ ಸ್ಕೂಟರ್ ನಲ್ಲಿ CNG ಕಿಟ್ ಅನ್ನು ಸ್ಥಾಪಿಸಲು ಮುಂದಾಗಿದೆ. ಸಿಎನ್ ಜಿ ಕಿಟ್ ನ ಬೆಲೆ 15 ಸಾವಿರ ರೂ. ಆಗಿದೆ. ಸಿಎನ್ ಜಿ ಕಿಟ್ ನಿಮ್ಮ ಸ್ಕೂಟರ್ ನ ಮೈಲೇಜ್ ಅನ್ನು ಹೆಚ್ಚಿಸುತ್ತದೆ.