CB350 Features: ನೋಡಲು ಬುಲೆಟ್ ಬೈಕಿನಂತೆ ಕಾಣುವ ಈ ಹೋಂಡಾ ಬೈಕಿನ ಬೆಲೆ ಎಷ್ಟು…? ಬುಲೆಟ್ ಗಿಂತ ಹೆಚ್ಚು ಮೈಲೇಜ್.
ನೋಡಲು ಬುಲೆಟ್ ನಂತೆ ಕಾಣುವ ಈ ಹೋಂಡಾ ಬೈಕಿಗೆ ಜನರು ಫಿದಾ.
Honda CB350 Bullet Bike Feature: ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಬೈಕ್ ಗಳು ಎಂಟ್ರಿ ಕೊಡುವ ಮೂಲಕ ಯುವಕರನ್ನು ಹೆಚ್ಚು ಹೆಚ್ಚು ಹೆಚ್ಚಿಸುತ್ತಿದೆ. ಯುವಕರಿಗೆ ಹೆಚ್ಚಾಗಿ ಬೈಕ್ ನ ಮೇಲೆ ಕ್ರೇಜ್ ಹೆಚ್ಚಿರುತ್ತಾದೆ.
ಹೀಗಾಗಿ ದೇಶದ ಜನಪ್ರಿಯ ಬೈಕ್ ತಯಾರಕ ಕಂಪನಿಗಳು ವಿಭಿನ್ನ ವಿನ್ಯಾಸದ ಆಕರ್ಷಕ ಲುಕ್ ನಲ್ಲಿ ಬೈಕ್ ಗಳನ್ನು ಪರಿಚಯಿಸುವ ಮೂಲಕ ಯುವಕರನ್ನು ಸೆಳೆಯುತ್ತಿರುತ್ತದೆ. ಸಾಮಾನ್ಯವಾಗಿ ಯುವಕರಿಗೆ ಬುಲೆಟ್ ಬೈಕ್ ಗಳ ಮೇಲೆ ಒಂದು ರೀತಿಯಲ್ಲಿ ಕ್ರೇಜ್ ಹೆಚ್ಚಿರುತ್ತದೆ. ಹೀಗಾಗಿ ಯುವಕರ ಬುಲೆಟ್ ಬೈಕ್ ಖರೀದಿಗೆ ಮನಸ್ಸು ಮಾಡುತ್ತಾರೆ.
Royal Enfield Classic 350 ಬೈಕ್ ಅನ್ನು ಹಿಂದಿಕ್ಕಲು ಬಂದಿದೆ CB350
ಇನ್ನು ಬಕೆಟ್ ಬೈಕ್ ಎಂದಾಕ್ಷಣ ನೆನಪಿಗೆ ಬರುವುದು ರಾಯಲ್ ಏನ್ ಫೀಲ್ಡ್ ನ ಬೈಕ್ ಗಳು. ಆದರೆ ನಿಮಗೆ ಗೊತ್ತೇ..? ಮಾರುಕಟ್ಟೆಯಲ್ಲಿ ಸದ್ಯ ರಾಯಲ್ ಏನ್ ಫೀಲ್ಡ್ ಬುಲ್ರ್ಟ್ ಬೈಕ್ ನಂತೆಯೇ ದೇಶದ ಜನಪ್ರಿಯ ಬೈಕ್ ತಯಾರಕ ಕಂಪೆನಿಯಾದ HONDA ಸದ್ಯ ಬುಲೆಟ್ ಬೈಕ್ ನಂತೆ ಹೊಸ ವಿನ್ಯಾಸದಲ್ಲಿ ತನ್ನ ನೂತನ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಹೌದು ಸದ್ಯ ಮಾರುಕಟ್ಟೆಯಲ್ಲಿ Honda CB350 Bullet Bike ಮಾರುಕಟ್ಟೆಯಲ್ಲಿ ರಾಯಲ್ ಏನ್ ಫೀಲ್ಡ್ ಬುಲೆಟ್ ಬೈಕ್ ಗಳಿಗಿಂತ ಹೆಚ್ಚು ಸದ್ದು ಮಾಡುತ್ತಿದೆ. ನೂತನ Honda CB350 Bullet Bike ಮಾರುಕಟ್ಟೆಯಲ್ಲಿ Royal Enfield Classic 350 ಬೈಕ್ ನ ಬೇಡಿಕೆಯನ್ನೇ ಕಡಿಮೆ ಮಾಡಿದೆ. ಅಷ್ಟಕ್ಕೂ ರಾಯಲ್ ಏನ್ ಫೀಲ್ಡ್ ಬೈಕ್ ಗಳಿಗೆ ಪೈಪೋಟಿ ನೀಡಲು ಬಂದ ನೂತನ CB3500 ಬೈಕ್ ನ ವಿಶೇಷತೆಗಳೇನು..? ಇಲ್ಲಿದೆ ಬೈಕ್ ನ ಸಂಪೂರ್ಣ ವಿವರ.
Honda CB350 ಬುಲೆಟ್ ಬೈಕ್ ನ ವಿಶೇಷತೆಗಳೇನು..?
*ಹೋಂಡಾ CB350 ಬುಲೆಟ್ ಬೈಕ್ 348 cc 4 ಸ್ಟ್ರೋಕ್ SI ಎಂಜಿನ್ ಹೊಂದಿದ್ದು, ಈ ಎಂಜಿನ್ ತುಂಬಾ ಶಕ್ತಿಶಾಲಿಯಾಗಿದೆ. ಇದು 3000 rpm ನಲ್ಲಿ 30 ನ್ಯೂಟನ್ ಮೀಟರ್ ಟಾರ್ಕ್ ಮತ್ತು 5500 rpm ನಲ್ಲಿ 21 PS ನ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
*ವಿಶಿಷ್ಟ ಫೀಚರ್ ಹೊಂದಿರುವ Honda CB350 ಬೈಕ್ ಭರ್ಜರಿ 42km ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.
*ಪ್ರೆಶಿಯಸ್ ರೆಡ್ ಮೆಟಾಲಿಕ್, ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಮ್ಯಾಟ್ ಕ್ರಸ್ಟ್ ಮೆಟಾಲಿಕ್, ಮ್ಯಾಟ್ ಮಾರ್ಷಲ್ ಗ್ರೀನ್ ಮೆಟಾಲಿಕ್ ಮತ್ತು ಮ್ಯಾಟ್ ಡ್ಯೂನ್ ಬ್ರೌನ್ ನ ಐದು ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ.
*ನೂತನ Honda CB350 ಎರಡು ರೂಪಾಂತರದಲ್ಲಿ ಲಭ್ಯವಿದ್ದು, Honda CB350 DLX ರೂಪಾಂತರದ ಬೆಲೆ 1,99,900 ರೂ. ಆಗಿದ್ದು, Honda CB350 DLX Pro ರೂಪಾಂತರದ ಬೆಲೆ 2,17,800 ರೂ. ಆಗಿದೆ.
* 5 ಸ್ಪೀಡ್ ಗೇರ್ ಬಾಕ್ಸ್ ಅನ್ನು ಎಂಜಿನ್ ನಲ್ಲಿ ಅಳವಡಿಸಲಾಗಿದ್ದು ಉತ್ತಮ ಕಾರ್ಯಕ್ಷಮತೆ ನೀಡಲಿದೆ. ಮುಂಭಾಗದಲ್ಲಿ ದೂರದರ್ಶಕ ಮತ್ತು ಹಿಂಭಾಗದಲ್ಲಿ ಅವಳಿ ಹೈಡ್ರಾಲಿಕ್ ಸಸ್ಪೆನ್ಷನ್ ಹೊಂದಿದ್ದು, ಸುರಕ್ಷತೆಯ ದೃಷ್ಟಿಯಿಂದ ಈ ಬೈಕ್ ನಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ಮತ್ತು ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಅಳವಡಿಸಲಾಗಿದೆ.
*HSVCS, Bluetooth Connectivity, Honda Selectable Torque Control (HSTC), Dual Channel ABS, LED Lighting, Analogue – Digital Instrument Cluster ನಂತಹ ಅನೇಕ ಫೀಚರ್ ಅನ್ನು ಹೊಂದಿದೆ.