Honda: ಮಾಧ್ಯಮ ವರ್ಗದ ಜನರಿಗಾಗಿ ಅಗ್ಗದ ಬೈಕ್ ಲಾಂಚ್ ಮಾಡಿದ ಹೋಂಡಾ, 65 Km ಮೈಲೇಜ್.
10 ವರ್ಷ ವಾರಂಟಿ ಜೊತೆ ಗ್ರಾಹಕರ ಕೈ ಸೇರಲಿದೆ ಹೋಂಡಾದ ಈ ಹೊಸ ಬೈಕ್.
Honda CD 110 Dream Deluxe Bike: ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಬೈಕ್ ಗಳು ಬಿಡುಗಡೆಯಾಗುತ್ತಿವೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ಮಾದರಿಯ ಬೈಕ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.
ಇದೀಗ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟೋಕ್ರೋಪ್ (Hero Motocorp) ಇತ್ತೀಚಿಗೆ ಸಾಕಷ್ಟು ಮಾದರಿಯ ಬೈಕ್ ಗಳನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೆಚ್ಚು ಮೈಲೇಜ್ ನೀಡುವ ಬೈಕ್ ಅನ್ನು ಹೋಂಡಾ ಕಂಪನಿ ಗ್ರಾಹಕರಿಗೆ ಪರಿಚಯಿಸುತ್ತಿರುತ್ತದೆ. ಈಗ ನಾವು ಹೋಂಡಾ ಕಂಪನಿ ಬಿಡುಗಡೆ ಗೊಳಿಸಿದ ಈ ಹೊಸ ಬೈಕ್ ಯಾವುದು ಎನ್ನುವ ಬಗ್ಗೆ ತಿಳಿದುಕೊಳ್ಳೋಣ.
ಹೋಂಡಾ ಸಿಡಿ 110 ಡ್ರೀಮ್ ಡಿಲಕ್ಸ್ ಬೈಕ್ (Honda CD 110 Dream Deluxe Bike)
ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ತನ್ನ ಬಹುನಿರೀಕ್ಷಿತವಾದ ಹೊಸ ಹೋಂಡಾ ಸಿಡಿ 110 ಡ್ರೀಮ್ ಡಿಲಕ್ಸ್ ಬೈಕ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಬೈಕ್ ಕೇವಲ ಒಂದು ರೂಪಾಂತರದಲ್ಲಿ ಮಾತ್ರ ಖರೀದಿಗೆ ಸಿಗುತ್ತಿದೆ.
ಸಿಡಿ 110 ಡ್ರೀಮ್ ಡಿಲಕ್ಸ್ ಬೈಕ್ ಮೇಲೆ 10 ವರ್ಷ ವಾರಂಟಿ ಪ್ಯಾಕೇಜ್ ಅನ್ನು ನೀಡುತ್ತಿದೆ. ಹಾಗೆ ಈ ಬೈಕ್ ನ ಎಕ್ಸ್ ಶೋರೂಂ ಬೆಲೆ 73,400 ಆಗಿದೆ. ಇನ್ನು ಹೋಂಡಾ ಕಂಪನಿಯ ಈ ಬೈಕ್ ಸುಮಾರು 65 ಕಿಲೋ ಮೀಟರ್ ಮೈಲೇಜ್ ಕೂಡ ನೀಡಲಿದೆ.
ಹೋಂಡಾ ಸಿಡಿ 110 ಡ್ರೀಮ್ ಡಿಲಕ್ಸ್ ಬೈಕ್ ವೈಶಿಷ್ಟ್ಯತೆ
ಹೋಂಡಾ ಸಿಡಿ 110 ಡ್ರೀಮ್ ಡಿಲಕ್ಸ್ ಬೈಕ್ ಇಂಧನ ಇಂಜೆಕ್ಟ್ ಆಗಿದ್ದು, ಹೋಂಡಾದ ವರ್ಧಿತ ಸ್ಮಾರ್ಟ್ ಪವರ್ ತಂತ್ರಜ್ಞಾನದೊಂದಿಗೆ ಬರುತ್ತದೆ. ಈ ಎಂಜಿನ್ 109 .51cc ಏರ್-ಕೋಲ್ಡ್ ಎಂಜಿನ್ 7500 rpm ನಲ್ಲಿ 8 .67 bhp ಮತ್ತು 5500 rpm ನಲ್ಲಿ 9 .30 ನಮ್ ಟಾರ್ಕ್ ಉತ್ಪದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಎಂಜಿನ್ ಅನ್ನು 4 -ಸ್ಪೀಡ್ ಗೇರ್ ಬಾಕ್ಸ್ ಜೊತೆಗೆ ಜೋಡಿಸಲಾಗಿದೆ. ಈ ಬೈಕ್ ಕಿಕ್ ಸ್ಟಾರ್ಟರ್ ಜೊತೆಗೆ ಆಟೋ ಸ್ಟಾರ್ಟರ್ ಅನ್ನು ಪಡೆದಿದೆ.
ಹೋಂಡಾ ಸಿಡಿ 110 ಡ್ರೀಮ್ ಡಿಲಕ್ಸ್ ಬೈಕ್ ಡೈಮಂಡ್ ಮಾದರಿಯ ಪ್ರೇಮ್ ನೊಂದಿಗೆ ಮುಂಭಾಗದಲ್ಲಿ ಟೆಲಿಸ್ಕೊಪಿಕ್ ಪೋರ್ಕ್ ಗಳು ಮತ್ತು ಹಿಂಭಾಗದಲ್ಲಿ ಹೈಡ್ರಾಲಿಕ್ ಟ್ವಿನ್ ಶಾಕ್ ಅನ್ನು ಪಡೆದುಕೊಂಡಿದೆ. ಹಾಗೆ ಸುರಕ್ಷತೆಯಲ್ಲಿ ಮುಖ್ಯ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಮಾತನಾಡುದಾದರೆ ಮುಂದೆ ಮತ್ತೆ ಹಿಂದೆ 130 ಎಂಎಂ ಡ್ರಮ್ ಬ್ರೇಕ್ ಅನ್ನು ಹೊಂದಿದೆ.
ಸಿಡಿ 110 ಡ್ರೀಮ್ ಡಿಲಕ್ಸ್ ಬೈಕ್ 18 ಇಂಚಿನ ಅಲಾಯ್ ವೀಲ್ ಗಳು ಮತ್ತು ಮುಂಭಾಗ ಹಾಗು ಹಿಂಭಾಗದಲ್ಲಿ 80 /100 -18 ಟ್ಯೂಬ್ ಲೆಸ್ ಟೈರ್ ಗಳನ್ನ ಹೊಂದಿದೆ. ಹಾಗೆ ಈ ಬೈಕ್ ಸೈಡ್ ಸ್ಟಾಂಡ್ ಎಂಜಿನ್ ಕಟ್ ಅಪ್ ವೈಶಿಷ್ಟ್ಯವನ್ನು ಪಡೆದಿದೆ. ಸೈಡ್ ಸ್ಟಾಂಡ್ ಹಾಕಿಕೊಂಡರೆ ಎಂಜಿನ್ ಸ್ಟಾರ್ಟ್ ಅಗುದನ್ನು ತಡೆಯುತ್ತದೆ. ಇನ್ನು CB110 ಉದ್ದವಾದ ಸೀಟಿನೊಂದಿಗೆ ಬರುತ್ತದೆ ಮತ್ತು 720 ಎಂಎಂ ಸೀಟ್ ಎತ್ತರವನ್ನು ಹೊಂದಿದೆ.
ಇನ್ನು ಈ ಹೋಂಡಾ ಸಿಡಿ 110 ಡ್ರೀಮ್ ಡಿಲಕ್ಸ್ ಬೈಕ್ ನ ಬಿಡುಗಡೆಯ ಕುರಿತು ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಅಧ್ಯಕ್ಷ ಹಾಗೂ ಸಿಇಒ ವ್ಯವಸ್ಥಾಪಕ ನಿರ್ದೇಶಕರಾದ ಟುತ್ಸುಮು ಓಟನಿ ಅವರು ಹೊಸ OBD2 ಕಂಪ್ಲೈಂಟ್ CD110 ಡ್ರೀಮ್ ಡಿಲಕ್ಸ್ ಬೈಕ್ ಬಿಡುಗಡೆಯೊಂದಿಗೆ ನಾವು ಭಾರತದಲ್ಲಿ ಕೈಗೆಟಕುವ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆ ಯನ್ನು ಮರು ವ್ಯಾಖ್ಯಾನಿಸಲು ಉತ್ಸುಕರಾಗಿದೇವೆ. ಈ ಹೊಸ ತಲೆಮಾರಿನ ಬೈಕ್ ಸೌಕರ್ಯ, ಅನುಕೂಲತೆ ಮತ್ತು ವಿಶ್ವಾಸಾರ್ಹತೆಯಿಂದ ಕೂಡಿದೆ ಎಂದು ಹೇಳಿದ್ದಾರೆ.