Honda New: ಮಧ್ಯಮ ವರ್ಗದ ಜನರಿಗಾಗಿ 65 Km ಮೈಲೇಜ್ ಕೊಡುವ ಬೈಕ್ ಲಾಂಚ್ ಮಾಡಿದ ಹೋಂಡಾ, 10 ವರ್ಷ ವಾರೆಂಟಿ.
65 ಕಿಲೋಮೀಟರ್ ಮೈಲೇಜ್ ನೀಡುವ ಹೋಂಡಾ ಕಂಪನಿಯ ಹೊಸ ಬೈಕ್ ಬಿಡುಗಡೆ.
Honda CD 110 Dream Deluxe Bike: ದೇಶದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಬ್ರಾಂಡ್ ಆಗಿರುವ ಹೋಂಡಾ (Honda) ಇತ್ತೀಚಿಗೆ ವಿಭಿನ್ನ ಮಾದರಿಯ ಬೈಕ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ಹೊಸ ಹೊಸ ಬೈಕ್ ಗಳು ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳುತ್ತಿದ್ದಂತೆ ಹೋಂಡಾ ಹೆಚ್ಚಿನ ಸೇಲ್ ಕಾಣುತ್ತಿದೆ. ಇತ್ತೀಚಿಗೆ ವಿವಿಧ ಕಂಪನಿಗಳು ಅನೇಕ ರೀತಿಯ ಬೈಕ್ ಗಳನ್ನೂ ಪರಿಚಯಿಸುತ್ತಲೇ ಇರುತ್ತದೆ.
ಹೀಗಾಗಿ ಎಲ್ಲಾ ಮಾದರಿಯ ಬೈಕ್ ಗಳಿಗೆ ಪೈಪೋಟಿ ನೀಡಲು ಹೋಂಡಾ ಹೊಸ ಬೈಕ್ ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ನೂತನ ಹೋಂಡಾ ಬೈಕ್ ನಲ್ಲಿ ಸುಧಾರಿತ ಫೀಚರ್ ಗಳನ್ನೂ ಅಳವಡಿಸಲಾಗಿದ್ದು ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಲಭ್ಯವಾಗಲಿದೆ. ನೀವು ಹೊಸ ಬೈಕ್ ಅನ್ನು ಖರೀದಿಸುವ ಯೋಜನೆಯಲ್ಲಿದ್ದರೆ ಈ ಬೈಕ್ ನಿಮಗೆ ಉತ್ತಮ ಬೆಲೆಯಲ್ಲಿ ಲಭ್ಯವಾಗಲಿದೆ.
ಹೋಂಡಾ ಸಿಡಿ 110 ಡ್ರೀಮ್ ಡಿಲಕ್ಸ್ ಬೈಕ್ (Honda CD 110 Dream Deluxe Bike)
ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ತನ್ನ ಬಹುನಿರೀಕ್ಷಿತವಾದ ಹೊಸ ಹೋಂಡಾ ಸಿಡಿ 110 ಡ್ರೀಮ್ ಡಿಲಕ್ಸ್ ಬೈಕ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೋಂಡಾ ಸಿಡಿ 110 ಡ್ರೀಮ್ ಡಿಲಕ್ಸ್ ಕೇವಲ ಒಂದು ರೂಪಾಂತರದಲ್ಲಿ ಮಾತ್ರ ಖರೀದಿಗೆ ಸಿಗುತ್ತಿದೆ. ಸಿಡಿ 110 ಡ್ರೀಮ್ ಡಿಲಕ್ಸ್ ಬೈಕ್ ಮೇಲೆ 10 ವರ್ಷ ವಾರಂಟಿ ಪ್ಯಾಕೇಜ್ ಅನ್ನು ನೀಡಲಾಗುತ್ತಿದೆ.
ಹೋಂಡಾ ಸಿಡಿ 110 ಡ್ರೀಮ್ ಡಿಲಕ್ಸ್ ಮೈಲೇಜ್
ಈ ನೂತನ ಮಾದರಿಯ ಬೈಕ್ ನಲ್ಲಿ ವರ್ಧಿತ ಸ್ಮಾರ್ಟ್ ಪವರ್ ತಂತ್ರಜ್ಞಾನದೊಂದಿಗೆ ಎಂಜಿನ್ ಅನ್ನು ರೂಪಿಸಲಾಗಿದೆ. ಈ ಎಂಜಿನ್ 109.51cc ಏರ್-ಕೋಲ್ಡ್ ಎಂಜಿನ್ 7500 rpm ನಲ್ಲಿ 8 .67 bhp ಮತ್ತು 5500 rpm ನಲ್ಲಿ 9 .30 Nm ಟಾರ್ಕ್ ಉತ್ಪದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಎಂಜಿನ್ ಅನ್ನು 4 -ಸ್ಪೀಡ್ ಗೇರ್ ಬಾಕ್ಸ್ ಜೊತೆಗೆ ಜೋಡಿಸಲಾಗಿದೆ. ಈ ಬೈಕ್ ಕಿಕ್ ಸ್ಟಾರ್ಟರ್ ಜೊತೆಗೆ ಆಟೋ ಸ್ಟಾರ್ಟರ್ ಅನ್ನು ಪಡೆದಿದೆ. ಇನ್ನು ಹೋಂಡಾ ಕಂಪನಿಯ ಈ ಬೈಕ್ ಸುಮಾರು 65 ಕಿಲೋ ಮೀಟರ್ ಮೈಲೇಜ್ ಕೂಡ ನೀಡಲಿದೆ.
ಹೋಂಡಾ ಸಿಡಿ 110 ಡ್ರೀಮ್ ಡಿಲಕ್ಸ್ ಬೈಕ್ ಬೆಲೆ
ಹೋಂಡಾ ಸಿಡಿ 110 ಡ್ರೀಮ್ ಡಿಲಕ್ಸ್ ಬೈಕ್ ನಲ್ಲಿ ಸವಾರರ ಸುರಕ್ಷತೆಗಾಗಿ ಉತ್ತಮ ಬ್ರೇಕಿಂಗ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ. ಮುಂದೆ ಮತ್ತೆ ಹಿಂದೆ 130 ಎಂಎಂ ಡ್ರಮ್ ಬ್ರೇಕ್ ಅನ್ನು ಹೊಂದಿದೆ. ಸಿಡಿ 110 ಡ್ರೀಮ್ ಡಿಲಕ್ಸ್ ಬೈಕ್ 18 ಇಂಚಿನ ಅಲಾಯ್ ವೀಲ್ ಗಳನ್ನ ಹೊಂದಿದೆ. ಹಾಗೆ ಈ ಬೈಕ್ ಸೈಡ್ ಸ್ಟಾಂಡ್ ಎಂಜಿನ್ ಕಟ್ ಅಪ್ ವೈಶಿಷ್ಟ್ಯವನ್ನು ಪಡೆದುಕೊಂಡಿದ್ದು, ಬೈಕ್ ನ ಎಕ್ಸ್ ಶೋರೂಂ ಬೆಲೆ 73,400 ಆಗಿದೆ.