Honda Discount: ಕಾರ್ಡ್ ಖರೀದಿಸಲು ಇದು ಬೆಸ್ಟ್ ಟೈಮ್, ಈ ಹೋಂಡಾ ಕಾರಿನ ಮೇಲೆ ಭರ್ಜರಿ 75000 ರೂ ಡಿಸ್ಕೌಂಟ್.
ಹೋಂಡಾ ಕಾರಿನ ಮೇಲೆ ಭರ್ಜರಿ 75000 ರೂ ರಿಯಾಯಿತಿ.
Honda City And Honda Amaze Discount: ಮಾರುಕಟ್ಟೆಯಲ್ಲಿ Honda ಕಂಪನಿಯ SUV ಗಳಿಗೆ ಭರ್ಜರಿ ಬೇಡಿಕೆ ಇವೆ ಎನ್ನಬಹುದು. ಸದ್ಯ ಕಂಪನಿಯು ಇದೀಗ ಗ್ರಾಹಕರಿಗೆ ತನ್ನ SUV ಮಾದರಿಗಳ ಖರೀದಿಗೆ ಭರ್ಜರಿ ಡಿಸ್ಕೌಂಟ್ ಅನ್ನು ನೀಡುತ್ತಿದೆ. ನೀವು ಈ ಆಫರ್ ನ ಮೂಲಕ ಅತಿ ಕಡಿಮೆ ಬೆಲೆಯಲ್ಲಿ ಹೋಂಡಾ ಕಾರ್ ಗಳನ್ನೂ ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.
ಹೋಂಡಾ ಈ ಕಾರ್ ಗಳ ಖರೀದಿಯಲ್ಲಿ 75 ಸಾವಿರ ರೂ. ಉಳಿಸಬಹುದು
ಹೋಂಡಾ ಮೋಟಾರ್ಸ್ ಈ ಅಕ್ಟೋಬರ್ ನಲ್ಲಿ ತನ್ನ Petrol City ಮತ್ತು Amaze ಮೇಲೆ ಬಂಪರ್ ರಿಯಾಯಿತಿಯನ್ನು ಘೋಷಿಸಿದೆ. ಹೋಂಡಾದ ಈ ಎರಡು ಮಾದರಿಯ ಕಾರ್ ಗಳ ಖರೀದಿಯಲ್ಲಿ ನೀವು ಹೆಚ್ಚಿನ ಹಣವನ್ನು ಉಳಿಸಬಹುದಾಗಿದೆ. ನಗದು ರಿಯಾಯಿತಿಗಳು, ಕಾರ್ಪೊರೇಟ್ ರಿಯಾಯಿತಿಗಳು ಮತ್ತು ವಿನಿಮಯ ಕೊಡುಗೆಗಳ ಸೌಲಭ್ಯದ ಜೊತೆಗೆ Honda Petrol City ಮತ್ತು Amaze ಖರೀದಿಯ ಮೇಲೆ ಗ್ರಾಹಕರು 75000 ರೂ. ವರೆಗೆ ಉಳಿಸಬಹುದಾಗಿದೆ.
Honda City Car
Honda City Car ಖರೀದಿಯಲ್ಲಿ ಗ್ರಾಹಕರು ರೂ 25,000 ವರೆಗಿನ ನಗದು ರಿಯಾಯಿತಿ, ರೂ 26,000 ಮೌಲ್ಯದ ಪರಿಕರಗಳು ಮತ್ತು ಲಾಯಲ್ಟಿ ಬೋನಸ್ ಮತ್ತು ಕಾರ್ ಎಕ್ಸ್ಚೇಂಜ್ ರಿಯಾಯಿತಿಯಂತಹ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಈ ಮೂಲಕ ನೀವು Honda City Car ಖರೀದಿಯಲ್ಲಿ ಬರೋಬ್ಬರಿ 75,000 ರೂ. ಗಳನ್ನೂ ಉಳಿಸಬಹುದು.
ಮಾರುಕಟ್ಟೆಯಲ್ಲಿ Honda City ಕಾರ್ ಹುಂಡೈ ವೆರ್ನಾ, ವೋಕ್ಸ್‌ವ್ಯಾಗನ್ ವರ್ಟಸ್, ಸ್ಕೋಡಾ ಸ್ಲಾವಿಯಾ ಮತ್ತು ಮಾರುತಿ ಸುಜುಕಿ ಸಿಯಾಜ್ ಗಳಿಗೆ ಪೈಪೋಟಿ ನೀಡುತ್ತದೆ. ಇನ್ನು ಇದರಲ್ಲಿ 1.5-ಲೀಟರ್ ನಾಲ್ಕು ಸಿಲಿಂಡರ್ ಎಂಜಿನ್ ಅಳವಡಿಸಿದ್ದು, 121hp ಮತ್ತು 145Nm ಗರಿಷ್ಟ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೋಂಡಾ ಸಿಟಿ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ CVT ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಹೊಂದಿದೆ. ಇನ್ನು ಮಾರುಕಟ್ಟೆಯಲ್ಲಿ 11.63 ಲಕ್ಷದಿಂದ 18.89 ಲಕ್ಷ ಬೆಲೆಯಲ್ಲಿ ಈ ಕಾರ್ ಲಭ್ಯವಾಗಲಿದೆ.
Honda Amaze Discount
Honda Motors Amaze ಸೆಡಾನ್ ನಲ್ಲಿ ರೂ. 57,000 ವರೆಗಿನ ರಿಯಾಯಿತಿಯನ್ನು ನೀಡುತ್ತದೆ. ಈ ಕೊಡುಗೆಯ ಅಡಿಯಲ್ಲಿ, ಗ್ರಾಹಕರಿಗೆ 20,000 ರೂ.ವರೆಗೆ ವಿಶೇಷ ಕಾರ್ಪೊರೇಟ್ ರಿಯಾಯಿತಿ ಮತ್ತು 15,000 ರೂ. ವರೆಗಿನ ಕಾರ್ ಎಕ್ಸ್ಚೇಂಜ್ ಬೋನಸ್ ನೀಡಲಾಗುತ್ತಿದೆ.
ಹೋಂಡಾ ಅಮೇಜ್ 1.2-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ, ಇದು 90hp ಪವರ್ ಮತ್ತು 110Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಅಥವಾ CVT ಟ್ರಾನ್ಸ್ಮಿಷನ್ ಆಯ್ಕೆಯನ್ನು ಹೊಂದಿದೆ. ಇನ್ನು ಮಾರುಕಟ್ಟೆಯಲ್ಲಿ 7.09 ಲಕ್ಷದಿಂದ 9.70 ಲಕ್ಷ ಬೆಲೆಯಲ್ಲಿ ಈ ಕಾರ್ ಲಭ್ಯವಾಗಲಿದೆ.