Honda Cars: ಹೊಸ ಕಾರ್ ಖರೀದಿಸುವವರಿಗೆ ಬಂಪರ್ ಆಫರ್, ಈ ಕಾರಿನ ಮೇಲೆ ಭರ್ಜರಿ 73 ಸಾವಿರ ಡಿಸ್ಕೌಂಟ್.  

ಹೋಂಡಾ ಕಂಪನಿಯ ಕಾರ್ ಖರೀದಿಯ ಮೇಲೆ ಆಕರ್ಷಕ ರಿಯಾಯಿತಿ.

Honda City Disucount Offer: ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ಹೋಂಡಾ ತನ್ನ ಮಾರಾಟವನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಗ್ರಾಹಕರು ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳ ಖರೀದಿಗೆ ಯೋಚಿಸುತ್ತಾರೆ.

ಕಾರ್ ಖರೀದಿಯ ಸಮಯದಲ್ಲಿ ಬೆಲೆ ಮತ್ತು ಮೈಲೇಜ್ ಮುಖ್ಯವಾಗಿರುತ್ತದೆ. ಇನ್ನು ಹೋಂಡಾ (Honda) ಕಂಪನಿಯ ಕಾರ್ ಗಳು ಮೈಲೇಜ್ ವಿಚಾರಕ್ಕೆ ಹೆಸರುವಾಸಿಯಾಗಿದೆ. ಹೆಚ್ಚಿನ ಮೈಲೇಜ್ ನೀಡುವ ಕಾರ್ ಎಂದರೆ ಹೋಂಡಾ ಎಂದರೆ ತಪ್ಪಾಗಲಾರದು.

Attractive discount on purchase of Honda City
Image Credit: Livemint

ಹೋಂಡಾ ಭರ್ಜರಿ ಆಫರ್
ಇನ್ನು ಮೈಲೇಜ್ ಮತ್ತು ಬಜೆಟ್ ವಿಚಾರವಾಗಿ ಹೋಂಡಾ ಗ್ರಾಹಕರನ್ನು ಸೆಳೆಯುತ್ತದೆ. ಹೋಂಡಾ ಹೊಸ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡಿದ್ದರು ಸಹ ಹಳೆಯ ಮಾದರಿಯ ಕಾರ್ ಗಳನ್ನೂ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಬಿಡುಗಡೆ ಮಾಡಿತ್ತದೆ.

ಗ್ರಾಹಕರಿಗಾಗಿ ಹೋಂಡಾ ವಿವಿಧ ಹಣಕಾಸು ಯೋಜನೆಯನ್ನು ಪರಿಚಯಿಸುತ್ತದೆ. ಇದೀಗ ಹೋಂಡಾ ಈ ಆಗಸ್ಟ್ ನಲ್ಲಿ ಕಾರ್ ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ. ಹೋಂಡಾ ಆಫರ್ ಅನ್ನು ಬಳಸಿಕೊಳ್ಳುವ ಮೂಲಕ ಗ್ರಾಹಕರು ಬರೋಬ್ಬರಿ 73 ಸಾವಿರ ರಿಯಾಯಿತಿಯನ್ನು ಪಡೆಯಬಹುದು.

ಹೋಂಡಾ ಸಿಟಿ ಖರೀದಿಯ ಮೇಲೆ ಆಕರ್ಷಕ ರಿಯಾಯಿತಿ (Honda City Offer) 
ಈ ಹೋಂಡಾ ಸಿಟಿ ಕಾರ್ ನಾಲ್ಕು ಸಿಲಿಂಡರ್ ಗಳೊಂದಿಗೆ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. 121 bhp ಗರಿಷ್ಟ ಮತ್ತು 145 Nm ನ ಗರಿಷ್ಟ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರ್ ನಲ್ಲಿ 6 ಸ್ಪೀಡ್ ಮ್ಯಾನುವಲ್ ಮತ್ತು CVT ಗೇರ್ ಬಾಕ್ಸ್ ಅನ್ನು ಪಡೆಯಬಹುದು. ಇನ್ನು ಈ ಹೋಂಡಾ ಸಿಟಿ ಕಾರ್ ನ ಆರಂಭಿಕ ಬೆಲೆ 11 .57 ಲಕ್ಷ ರೂ. ಆಗಿದೆ.

Join Nadunudi News WhatsApp Group

73 thousand discount on this car
Image Credit: Hindustantimes

ಈ ಕಾರಿನ ಮೇಲೆ ಭರ್ಜರಿ 73 ಸಾವಿರ ಡಿಸ್ಕೌಂಟ್
ಹೋಂಡಾ ಕಾರನ್ನು ವಿನಿಮಯ ಮಾಡಿಕೊಂಡರೆ ನಿಮಗೆ ರೂ 20,000 ಮತ್ತು ನೀವು ಬೇರೆ ಯಾವುದೇ ಕಂಪನಿಯ ಕಾರನ್ನು ವಿನಿಮಯ ಮಾಡಿಕೊಂಡರೆ ನೀವು ರೂ 10,000 ಎಕ್ಸ್ಚೇಂಜ್ ಬೋನಸ್ ಪಡೆಯಬವುದಾಗಿದೆ.

ಹಾಗೆಯೆ ರೂ. 10,000 ವರ್ಗೆ ನಗದು ರಿಯಾಯಿತಿ ಅಥವಾ ರೂ. 10,946 ವರ್ಗೆ ಉಚಿತ ಬಿಡಿಭಾಗಳನ್ನು ಪಡೆಯಬಹುದು. ಇದರ ಜೊತೆಗೆ ಕಂಪನಿಯು 5,000 ರೂ. ಲಾಯಲ್ಟಿ ಬೋನಸ್ ಮತ್ತು ರೂ. 20,000 ವರೆಗೆ ಕಾರ್ಪೊರೇಟ್ ರಿಯಾಯಿತಿಯನ್ನು ಪಡೆಯಬಹುದು.

Join Nadunudi News WhatsApp Group