Honda SUV: 24 Km ಮೈಲೇಜ್ ಕೊಡುವ ಈ ಹೋಂಡಾ ಕಾರಿನ ಮುಂದೆ ಬೇಡಿಕೆ ಕಳೆದುಕೊಂಡ Nexon, ದಾಖಲೆಯ ಬುಕಿಂಗ್.
ಹೋಂಡಾ ಕಂಪನಿಯ ಈ ಕಾರ್ ದೇಶದಲ್ಲಿ ದಾಖಲೆಯ ಬುಕಿಂಗ್ ಕಾಣುತ್ತಿದೆ.
Honda Elevate SUV: ಈಗಾಗಲೇ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ, ಟಾಟಾ ನೆಕ್ಸಾನ್ ಮಾರಿಕಟ್ಟೆಯಲ್ಲಿ ಬಾರಿ ಸದ್ದು ಮಾಡುತ್ತಿವೆ. ಇತ್ತೀಚೆಗೆ ಬಿಡುಗಡೆಯಾದ ಈ ಕಾರು ಒಂದೇ ತಿಂಗಳಲ್ಲಿ 5,685 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಮುಂಬರುವ ದಿನಗಳಲ್ಲಿ ಈ ಮಾರಾಟಗಳು ವೇಗವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ದೇಶದಲ್ಲಿ Compact SUV ಮಾರುಕಟ್ಟೆ ವೇಗವಾಗಿ ಹೆಚ್ಚುತ್ತಿದೆ.
ಸದ್ಯ ಈ ಎರಡು ಮಾದರಿಗೆ ಪೈಪೋಟಿ ನೀಡಲು ಇದೀಗ ನೂತನ Honda SUV ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಪ್ರತಿಷ್ಠಿತ ವಾಹನ ತಯಾರಕ ಕಂಪನಿಯಾದ Honda Cars In India ಹೊಸ ಮಾದರಿಯ ಕಾರ್ ಅನ್ನು ಬಿಡುಗಡೆ ಮಾಡಲಿದೆ. ಹೋಂಡಾ ಕಂಪನಿ ಈಗಾಗಲೇ ಸಾಕಷ್ಟು ಹೊಸ ಮಾದರಿಯ SUV ಕಾರ್ ಗಳನ್ನೂ ಬಿಡುಗಡೆ ಮಾಡಿದೆ. ಆದರೆ ಇದೀಗ ಬಿಡುಗಡೆಗೊಳ್ಳಲಿರುವ ಹೊಸ ಮಾದರಿಯ SUV ಕಾರ್ ಬಹಳ ವಿಶೇಷವಾಗಿದೆ.
Honda Elevate SUV
Honda Elevate SUV ಶಕ್ತಿಶಾಲಿ ಎಂಜಿನ್ ಅನ್ನು ಹೊಂದಿದೆ. ಈ ಕಾರ್ 1.5 ಲೀಟರ್ DOHC ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, 6,600rpm ನಲ್ಲಿ 119.4 bhp ಯ ಗರಿಷ್ಠ ಶಕ್ತಿಯನ್ನು ಮತ್ತು 4,300rpm ನಲ್ಲಿ 145 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. SUV ಯೊಂದಿಗೆ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಮತ್ತು CVT ಗೇರ್ ಬಾಕ್ಸ್ ಅನ್ನು ನೀಡುತ್ತದೆ. ಹೋಂಡಾ ಎಲಿವೇಟ್ ಕಾರ್ 4,312 ಮಿಮೀ ಉದ್ದವಾಗಿದ್ದು, ಅಗಲ 1,790 ಎಂಎಂ ಮತ್ತು ಎತ್ತರ 1,650 ಎಂಎಂ. ಮತ್ತು ಇದರ ವ್ಹೀಲ್ ಬೇಸ್ 2650 ಎಂಎಂ. ಆಗಿದೆ.
Honda Elevate SUV Special Feature
ಇನ್ನು Elevate ಎಸ್ ಯುವಿ, 7-inch digital instrument cluster, 10.25-inch touchscreen infotainment unit with wireless smartphone integration, rear-view camera, lane-watch camera and Connect-Car ಮುಂತಾದ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಕಾರ್ ಚಲಾಯಿಸುವವರ ರಕ್ಷಣೆಗಾಗಿ 6 ಏರ್ ಬ್ಯಾಗ್ ಗಳನ್ನೂ ನೀಡಲಾಗಿದೆ. ಇನ್ನು ಮಾರುಕಟ್ಟೆಯಲ್ಲಿ ಈ Elevate SUV ಸರಿಸುಮಾರು 11 ರಿಂದ 16 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದ್ದು, ಪ್ರತಿ ಲೀಟರ್ ಗೆ 24 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.