Honda SUV: 18 Km ಮೈಲೇಜ್ ಕೊಡುವ ಈ ಹೋಂಡಾ ಕಾರಿನ ಮುಂದೆ ಮಂಕಾದ ಮಾರುತಿ, ದಾಖಲೆಯ ಬುಕಿಂಗ್.

ಹೋಂಡಾ ಈ ಕಾರಿನ ಮುಂದೆ ಬೇಡಿಕೆ ಕಳೆದುಕೊಂಡ ಟೊಯೋಟಾ ಮತ್ತು ಮಾರುತಿ.

Honda Elevate SUV Mileage: ದೇಶಿಯ ಮಾರುಕಟ್ಟೆಯಲ್ಲಿ Car ಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಗ್ರಾಹಕರ ಬೇಡಿಕೆ ಹೆಚ್ಚುತ್ತಿದ್ದಂತೆ ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಮಾರುಕಟ್ಟೆಯಲ್ಲಿ ಪರಿಚಯಿಸಲಾಗುತ್ತಿದೆ. ಇದೀಗ Honda Cars compony ತನ್ನ ಹೊಸ SUV ಅನ್ನು ಭಾರತಿಯ ಮಾರುಕಟ್ಟೆಯಲ್ಲಿ ಕಳೆದ ತಿಂಗಳು ಬಿಡುಗಡೆ ಮಾಡಿದೆ.

Honda Elevate SUV
Image Credit: Cartrade

Honda Elevate SUV Engine Capacity
Honda Elevate SUV ಶಕ್ತಿಶಾಲಿ ಎಂಜಿನ್ ಅನ್ನು ಹೊಂದಿದೆ. ಈ ಕಾರ್ 1.5 ಲೀಟರ್ DOHC ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, 6,600rpm ನಲ್ಲಿ 119.4 bhp ಯ ಗರಿಷ್ಠ ಶಕ್ತಿಯನ್ನು ಮತ್ತು 4,300rpm ನಲ್ಲಿ 145 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. SUV ಯೊಂದಿಗೆ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ ಮಿಷನ್ ಮತ್ತು CVT ಗೇರ್‌ ಬಾಕ್ಸ್ ಅನ್ನು ನೀಡುತ್ತದೆ.

Honda Elevate SUV Special Feature
Honda Elevate SUV ಮಾದರಿಯ ವಿನ್ಯಾಸವು ನ್ಯೂ ಜನರೇಷನ್ CR-V ಮತ್ತು WR-V ಎಸ್‍ಯುವಿಗಳಿಂದ ಸ್ಫೂರ್ತಿ ಪಡೆದುಕೊಂಡಿದೆ. ಈ ಹೊಸ ಎಸ್‍ಯುವಿಯ V ರೂಪಾಂತರದಲ್ಲಿ 8 ಇಂಚಿನ ಟಚ್‌ ಸ್ಕ್ರೀನ್ ಡಿಸ್ಪ್ಲೇ, ವೈರ್‌ಲೆಸ್ ಆಪಲ್ ಕಾರ್ಪ್ಲೇ, 8 ಸ್ಪೀಕರ್ ಆಡಿಯೊ ಸಿಸ್ಟಮ್, ಸ್ಟೀರಿಂಗ್ ಮೌಂಟೆಡ್ ಆಡಿಯೊ ಮತ್ತು HFT ಸ್ವಿಚ್‌ಗಳು ಹಾಗೂ ಇನ್ನಿತರ ಫೀಚರ್ಸ್ ಗಳನ್ನು ಹೊಂದಿವೆ.

ಈ Honda Elevate ಎಸ್‍ಯುವಿಯ VX ರೂಪಾಂತರದಲ್ಲಿ 7 ಇಂಚಿನ HD ಬಣ್ಣದ TFT ಮೀಟರ್ ಕ್ಲಸ್ಟರ್, ವೈರ್‌ಲೆಸ್ ಸ್ಮಾರ್ಟ್‌ ಫೋನ್ ಚಾರ್ಜರ್, 6 ಸ್ಪೀಕರ್ ಆಡಿಯೊ ಸಿಸ್ಟಮ್ ಇತ್ಯಾದಿ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

Honda Elevate SUV Mileage
Image Credit: Livemint

Honda Elevate SUV Mileage
Honda Elevate SUV ಮ್ಯಾನುವಲ್ ರೂಪಾಂತರವು 15 .31 ಕಿಲೋಮೀಟರ್ ಮೈಲೇಜ್ ಹಾಗೆ CVT ರೂಪಾಂತರ 16 .92 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ನಗರ ಪ್ರದೇಶದಲ್ಲಿ Elevate ಪೆಟ್ರೋಲ್ ಮಾದರಿ 11 .36 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇನ್ನು ಹೆದ್ದಾರಿಯಲ್ಲಿ 18.50 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.

Join Nadunudi News WhatsApp Group

Join Nadunudi News WhatsApp Group