Honda Ev: ಕಡಿಮೆ ಬೆಲೆಗೆ 50 Km ರೇಂಜ್ ಕೊಡುವ ಹೋಂಡಾ Ev ಲಾಂಚ್, ಓಲಾ ಸ್ಕೂಟರ್ ಗೆ ಭರ್ಜರಿ ಪೈಪೋಟಿ.

ಈ ನೂತನ ಎಲೆಕ್ಟ್ರಿಕ್ ಮಾದರಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ.

Honda EM1 Electric Scooter Price: ಮಾರುಕಟ್ಟೆಯಲ್ಲಿ ದಿನೇ ದಿನೇ ಹೊಸ ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಗಳು ಪರಿಚಯವಾಗುತ್ತಿದೆ. ಇತ್ತೀಚೆಗಂತೂ ಪೆಟ್ರೋಲ್ ಮಾದರಿಗಿಂತ ಎಲೆಕ್ಟ್ರಿಕ್ ಮಾದರಿಯ ಸ್ಕೂಟರ್ ಗಳು ಹೆಚ್ಚು ಬಿಡುಗಡೆಗೊಳ್ಳುತ್ತಿದೆ ಎಂದರೆ ತಪ್ಪಾಗಲಾರದು.

ಮಾರುಕಟ್ಟೆಯಲ್ಲಿ ಹೆಚ್ಚಾಗಿ ಓಲಾ (Ola) ಎಲೆಕ್ಟ್ರಿಕ್ ಸ್ಕೂಟರ್ ಗಳು ಹೆಚ್ಚಿನ ಬೇಡಿಕೆ ಪಡೆಯುತ್ತದೆ. ಇದೀಗ ಹೋಂಡಾ ಕಂಪನಿ ಓಲಾ ಎಲ್ಕ್ಟ್ರಿಕ್ ಮಾದರಿಯ ಬೇಡಿಕೆಯನ್ನು ತಗ್ಗಿಸಲು ಹೊಸ ವಿನ್ಯಾಸದ ಎಲೆಕ್ಟ್ರಿಕ್ ಮಾದರಿಯನ್ನು ಪರಿಚಯಿಸಲು ಸಜ್ಜಾಗಿದೆ. ಈ ನೂತನ ಎಲೆಕ್ಟ್ರಿಕ್ ಮಾದರಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ.

Honda EM1 Electric Scooter Price
Image Credit: Bikewale

ಹೋಂಡಾ EM1 ಎಲೆಕ್ಟ್ರಿಕ್ ಸ್ಕೂಟರ್
ಹೊಸ ಹೋಂಡಾ (Honda) ಇತ್ತೀಚಿನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅದರ ಹೆಸರಿನಲ್ಲಿ ‘EM’ ಸೇರಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ ಹೊಸ ದ್ವಿಚಕ್ರ ವಾಹನ ಹೋಂಡಾ EM1 ಅನ್ನು ಎಲೆಕ್ಟ್ರಿಕ್ ಮೊಪೆಡ್ ಎಂದು ಕರೆಯುತ್ತದೆ. ಇತ್ತೀಚಿನ ಎಲೆಕ್ಟ್ರಿಕ್ ಸ್ಕೂಟರ್ ಹೋಂಡಾ ಮೊಬೈಲ್ ಪವರ್ ಪ್ಯಾಕ್ ಇ ಅನ್ನು ಲಿಥಿಯಂ-ಐಯಾನ್ ಬ್ಯಾಟರಿಯೊಂದಿಗೆ ನೀಡಬಹುದು.

ಇದು 10.3 ಕೆಜಿ ತೂಕದ 1.47 kWh ಬ್ಯಾಟರಿಯಿಂದ ಚಾಲಿತವಾಗಲಿದೆ. ಬ್ಯಾಟರಿಯನ್ನು ಚಾರ್ಜ್ ಮಾಡಲು 270W AC ಚಾರ್ಜರ್ ಅನ್ನು ಒದಗಿಸಲಾಗಿದೆ. ಈ ಚಾರ್ಜರ್ ನ ಮೂಲಕ 6 ಗಂಟೆಗಳಲ್ಲಿ ಸ್ಕೂಟರ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿಕೊಳ್ಳಬಹುದು. ಕಂಪನಿಯು ಗ್ರಾಹಕರಿಗೆ ಪರಸ್ಪರ ಬದಲಾಯಿಸಬಹುದಾದ ಬ್ಯಾಟರಿಯನ್ನು ನೀಡುತ್ತಿದೆ.

Honda EV launch with 50 Km range at low price
Image Credit: Aajtak

ಕಡಿಮೆ ಬೆಲೆಗೆ 50 Km ರೇಂಜ್ ಕೊಡುವ ಹೋಂಡಾ EV ಲಾಂಚ್
ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಗಂಟೆಗೆ 45 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಹೋಂಡಾ EM1 ಸ್ಕೂಟರ್ ಒಂದೇ ಚಾರ್ಜ್‌ನಲ್ಲಿ 50 ಕಿಮೀ ದೂರವನ್ನು ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group

ಈ ವರ್ಷಾಂತ್ಯದಲ್ಲಿ ಈ ನೂತನ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ. ಇನ್ನು ವಿಭಿನ್ನ ಫೀಚರ್ ಗಳನ್ನೂ ಅಳವಡಿಸಲಾಗಿರುವ ಈ ನೂತನ EM1 ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ 77,000 ರೂ. ಗಳಲ್ಲಿ ಲಭ್ಯವಾಗಲಿದೆ. ಇನ್ನು ಕಂಪನಿಯು ಈ ಸ್ಕೂಟರ್ ನ ಬಗ್ಗೆ ಹೆಚ್ಚಿನ ಮಾಹಿತಿ ನೀಡುವರೆಗೂ ಕಾದು ನೋಡಬೇಕಿದೆ.

Join Nadunudi News WhatsApp Group