Hness 350: ಹೊಸ ಹೋಂಡಾ 350 ಬೈಕಿಗೆ ಯುವಕರು ಫುಲ್ ಫಿದಾ, ಕಡಿಮೆ ಬೆಲೆ ಮತ್ತು 40 Km ಮೈಲೇಜ್.
ಹೊಸ ಹೋಂಡಾ 350 ಬೈಕಿಗೆ ಯುವಕರು ಫುಲ್ ಫಿದಾ
Honda Hness 350 Bike: ಮಾರುಕಟ್ಟೆಯಲ್ಲಿ ಬುಲೆಟ್ ಬೈಕ್ ಎಂದ ತಕ್ಷಣ ಎಲ್ಲರ ಯೋಚನೆಗೆ ಬರುವುದು Royal Enfield ಬೈಕ್. ಸದ್ಯ ಮಾರುಕಟ್ಟೆಯಲ್ಲಿ ರಾಯಲ್ ಏನ್ ಫೀಲ್ಡ್ ಬೈಕ್ ಗಳ ಮೇಲಿನ ಕ್ರೇಜ್ ಹೆಚ್ಚಿದೆ ಎನ್ನಬಹುದು.
ಇದೀಗ ಭಾರತೀಯ ಆಟೋ ವಲಯದಲ್ಲಿ ರಾಯಲ್ ಏನ್ ಫೀಲ್ಡ್ ಬುಲೆಟ್ ಬೈಕ್ ಗಳಿಗೆ ಭರ್ಜರಿ ಪೈಪೋಟಿ ನೀಡಲು ಇದೀಗ ಜನಪ್ರಿಯ ಬೈಕ್ ತಯಾರಕ ಕಂಪೆನಿಯಾದ HONDA ಸಜ್ಜಾಗಿದೆ. ಹೌದು, ಸದ್ಯದಲ್ಲೇ ಹೋಂಡಾ ತನ್ನ ಜನಪ್ರಿಯ ಬುಲೆಟ್ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.
ಹೊಸ ಬುಲೆಟ್ 350 ಬೈಕಿಗೆ ಯುವಕರು ಫುಲ್ ಫಿದಾ
ಉತ್ತಮ ಕಾರ್ಯಕ್ಷಮತೆಯೊಂದಿಗೆ ವಿಭಿನ್ನ ಲುಕ್ ಹೊಂದಿರುವ ಬಹುನಿರೀಕ್ಷತ Honda Hness 350 ಬೈಕ್ ಸದ್ಯದಲ್ಲೇ ಮಾರುಕಟ್ಟೆಯಲ್ಲಿ ದೂಳೆಬ್ಬಿಸಲಿದೆ. ಹೋಂಡಾ HNess 348 cc 4 ಸ್ಟ್ರೋಕ್ SI ಎಂಜಿನ್ ಹೊಂದಿದ್ದು, ಈ ಎಂಜಿನ್ ತುಂಬಾ ಶಕ್ತಿಶಾಲಿಯಾಗಿದೆ. ಇದು 3000 rpm ನಲ್ಲಿ 30 ನ್ಯೂಟನ್ ಮೀಟರ್ ಟಾರ್ಕ್ ಮತ್ತು 5500 rpm ನಲ್ಲಿ 21 PS ನ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಕಡಿಮೆ ಬೆಲೆ ಮತ್ತು 40 Km ಮೈಲೇಜ್
Honda Hness 350 ಬೈಕ್ ನ ಎಕ್ಸ್ ಶೋ ರೂಂ ಬೆಲೆ ರೂ. 2.10 ಲಕ್ಷದಿಂದ ಆರಂಭವಾಗಲಿದೆ. 5 ಸ್ಪೀಡ್ ಗೇರ್ ಬಾಕ್ಸ್ ಅನ್ನು ಎಂಜಿನ್ ನಲ್ಲಿ ಅಳವಡಿಸಲಾಗಿದ್ದು ಉತ್ತಮ ಕಾರ್ಯಕ್ಷಮತೆ ನೀಡಲಿದೆ. ಮುಂಭಾಗದಲ್ಲಿ ದೂರದರ್ಶಕ ಮತ್ತು ಹಿಂಭಾಗದಲ್ಲಿ ಅವಳಿ ಹೈಡ್ರಾಲಿಕ್ ಸಸ್ಪೆನ್ಷನ್ ಹೊಂದಿದ್ದು, ಸುರಕ್ಷತೆಯ ದೃಷ್ಟಿಯಿಂದ ಈ ಬೈಕ್ ನಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ಮತ್ತು ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಅಳವಡಿಸಲಾಗಿದೆ. ವಿಶಿಷ್ಟ ಫೀಚರ್ ಹೊಂದಿರುವ Honda Hness 350 ಬೈಕ್ ಭರ್ಜರಿ 40km ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.
Honda Hness 350 Bike Feature
*Honda Selectable Torque Control
*Battery Voltage Meter
*Gear Position Indicator
*engine inhibitor
*Side stand with hydraulic
*Honda Smartphone Voice Control System, Dual Horn
*Volume adjustment