Honda: ಬಜೆಟ್ ಬೆಲೆಗೆ ಇನ್ನೊಂದು ಶಕ್ತಿಶಾಲಿ ಬೈಕ್ ಲಾಂಚ್ ಮಾಡಿದ ಹೋಂಡಾ, 60 Km ಮೈಲೇಜ್.
ಈ ಬೈಕ್ ಪ್ರತಿ ಲೀಟರ್ ಗೆ ಬರೋಬ್ಬರಿ 60 ಕಿಲೋಮೀಟರ್ ಮೈಲೇಜ್ ನೀಡಲಿದೆ.
Honda Hornet 2.0 Bike: ಮಾರುಕಟ್ಟೆಯಲ್ಲಿ ಹೋಂಡಾ (Honda) ಕಂಪನಿಯು ಹೆಚ್ಚಿನ ಬೇಡಿಕೆ ಪಡೆಯುತ್ತಿದೆ. ವಿಭಿನ್ನ ಮಾದರಿಯ ಬೈಕ್ ಬಿಡುಗಡೆಗೊಳಿಸುವ ಮೂಲಕ ಕಂಪನಿಯು ಹೆಚ್ಚಿನ ಮಾರಾಟ ಕಂಡುಕೊಂಡಿದೆ. ಈಗಾಗಲೇ ಹೋಂಡಾ ವಿಭಿನ್ನ ಮಾದರಿಯ ಬೈಕ್ ಪರಿಚಯಿಸಿದ್ದು ಇದೀಗ ನೂತನ ಮಾದರಿಯ ಬೈಕ್ ಅನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಲಿದೆ.
ಬಜೆಟ್ ಬೆಲೆಗೆ ಇನ್ನೊಂದು ಶಕ್ತಿಶಾಲಿ ಬೈಕ್ ಲಾಂಚ್ ಮಾಡಿದ ಹೋಂಡಾ
ಹೋಂಡಾ ಕಂಪನಿಯು ತನ್ನ ಹೊಸ ಬೈಕ್ 2023 ಹಾರ್ನೆಟ್ 2.0 ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಬೈಕ್ OBD2 ಕಂಪ್ಲೈಂಟ್ ಆಗಿದ್ದು ಅತ್ಯಂತ ಆಕರ್ಷಕ ನೋಟದಲ್ಲಿ ಗ್ರಾಹಕರನ್ನು ಸೆಳೆಯಲಿದೆ. ಈ ಹೊಸ ಬೈಕ್‌ನಲ್ಲಿ ಕಂಪನಿಯು BS-VI ಹಂತ-2 ಮತ್ತು OBD2 ಕಂಪ್ಲೈಂಟ್ ಎಂಜಿನ್ ಅನ್ನು ನೀಡಿದೆ. ಈ ಬೈಕ್ ಅನ್ನು ವಿಶೇಷ 10 ವರ್ಷಗಳ ವಾರಂಟಿ ಪ್ಯಾಕೇಜ್ ನೊಂದಿಗೆ ಕಂಪನಿಯು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.
ಹೋಂಡಾ ಹಾರ್ನೆಟ್ 2.0 ಬೈಕ್ ಬೆಲೆ
ಕಂಪನಿಯು ಈ ಹೊಸ 2023 ಹಾರ್ನೆಟ್ 2.0 ಬೈಕ್ ಅನ್ನು 1.39 ಲಕ್ಷ ರೂಪಾಯಿಗಳ ಎಕ್ಸ್ ಶೋ ರೂಂ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಬೈಕ್ ನಲ್ಲಿLED lighting system, New body graphics, LED winkers and X-shaped LED tail lamps , Split seat and key lock on the tank ಫೀಚರ್ ಲಭ್ಯವಿದೆ. 10-ಸ್ಪೋಕ್ ಅಲಾಯ್ ಚಕ್ರಗಳು ಮತ್ತು ಅಲ್ಯೂಮಿನಿಯಂ ಫಿನಿಶ್ ಫುಟ್ ಪೆಗ್ ನಲ್ಲಿ ಬರಲಿದೆ.
ಹೋಂಡಾ ಹಾರ್ನೆಟ್ 2.0 ಬೈಕ್ ಮೈಲೇಜ್
ಈ ಬೈಕ್‌ನಲ್ಲಿ ಕಂಪನಿಯು 184.4 ಸಿಸಿ 4-ಸ್ಟ್ರೋಕ್, ಸಿಂಗಲ್-ಸಿಲಿಂಡರ್ BS-VI, OBD2 ಕಂಪ್ಲೈಂಟ್ PGM-FI ಎಂಜಿನ್ ಅನ್ನು ನೀಡಿದೆ. ಈ ಎಂಜಿನ್ 17.03 bhp ಗರಿಷ್ಠ ಶಕ್ತಿಯನ್ನು ಮತ್ತು 15.9Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಸ್ಪೀಡೋಮೀಟರ್, ಓಡೋಮೀಟರ್, ಟ್ಯಾಕೋಮೀಟರ್, ಬ್ಯಾಟರಿ ವೋಲ್ಟ್ಮೀಟರ್, ಟ್ವಿನ್ ಟ್ರಿಪ್ ಮೀಟರ್, ಗೇರ್ ಪೊಸಿಷನ್ ಇಂಡಿಕೇಟರ್ ಮತ್ತು ಸರ್ವಿಸ್ ಡ್ಯೂ ಇಂಡಿಕೇಟರ್ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದ್ದು ಈ ಬೈಕ್ ಪ್ರತಿ ಲೀಟರ್ ಗೆ ಬರೋಬ್ಬರಿ 60 ಕಿಲೋಮೀಟರ್ ಮೈಲೇಜ್ ನೀಡಲಿದೆ.