Honda Monkey: ಹೋಂಡಾ ಚಿಕ್ಕ ಬೈಕ್ ಖರೀದಿಸಲು ಮುಗಿಬಿದ್ದ ಜನರು, 70 Km ಮೈಲೇಜ್ ಮತ್ತು ಕಡಿಮೆ ಬೆಲೆ.
ಬುಲೆಟ್ ನ ವಿನ್ಯಾಸ ಹೊಲಲಿರುವ ಹೋಂಡಾ ಕಂಪನಿಯ ಹೊಸ ಲೈಟ್ ವೈಟ್ ಬೈಕ್ ಬಿಡುಗಡೆಗೆ ತಯಾರಿ ನೆಡೆಸುತ್ತಿದೆ.
Honda Monkey Bike: ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ (Honda) ಕಂಪನಿಯ ಬೈಕ್ ಗಳು ಅತಿ ಹೆಚ್ಚು ಬೇಡಿಕೆಯನ್ನು ಪಡೆದಿವೆ. ಇನ್ನು ಹೋಂಡಾ ಕಂಪನಿಯು ವಿವಿಧ ವಿನ್ಯಾಸದ ಬೈಕ್ ಗಳನ್ನು ಬಿಡುಗಡೆ ಮಾಡುವ ಮೂಲಕ ತನ್ನ ಮಾರಾಟವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ.
ಇನ್ನು ಹೋಂಡಾ ಕಂಪನಿಯು ಈಗಾಗಲೇ ವಿವಿಧ ಮಾದರಿಯ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ಹೋಂಡಾ ಹೊಚ್ಚ ಹೊಸ ಬೈಕ್ ಅನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲಿದೆ.
ಹೊಚ್ಚ ಹೊಸ ಹೋಂಡಾ 125ಸಿಸಿ ಬೈಕ್ ಬಿಡುಗಡೆ
ಇದೀಗ ಹೋಂಡಾ ತನ್ನ ಹೊಚ್ಚ ಹೊಸ 125ಸಿಸಿ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಹೋಂಡಾ 125ಸಿಸಿ ಬೈಕ್ ಇನ್ನಿತರ ಹೊಸ ಮಾದರಿಯ ಬೈಕ್ ಗಳಿಗೆ ಬಾರಿ ಪೈಪೋಟಿ ನೀಡಲಿದೆ. ಇದೀಗ ಕಂಪನಿಯು ಹೋಂಡಾ ಮಂಕಿ ಹೆಸರಿನ ಲೈಟ್ ವೈಟ್ ಬೈಕ್ ಅನ್ನು ಬಿಡುಗಡೆ ಮಾಡಲಿದೆ. ಹೋಂಡಾ ಮಂಕಿ ಸ್ಪೆಷಲ್ ಎಡಿಷನ್ ಬೈಕ್ ಬುಲೆಟ್ ನ ವಿನ್ಯಾಸವನ್ನು ಹೊಲಲಿದೆ.
ಹೋಂಡಾ ಮಂಕಿ ಸ್ಪೆಷಲ್ ಎಡಿಷನ್ ಬೈಕ್ ನ ಬೆಲೆ
ಹೊಚ್ಚ ಹೊಸ ಹೋಂಡಾ ಮಂಕಿ ಸ್ಪೆಷಲ್ ಎಡಿಷನ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ 2 .59 ಲಕ್ಷ ರೂ. ಅನ್ನು ನಿಗದಿಪಡಿಸಲಾಗಿದೆ. ಇನ್ನು 125 ಸಿಸಿ ಎಂಜಿನ್ ಬೈಕ್ ಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ಇರುತ್ತದೆ. ಆದರೆ ಈ 125 ಸಿಸಿ ಎಂಜಿನ್ ಬೈಕ್ ಹೆಚ್ಚು ದುಬಾರಿಯಾಗಿದೆ.
ಹೋಂಡಾ ಮಂಕಿ ಸ್ಪೆಷಲ್ ಎಡಿಷನ್ ಬೈಕ್ 2 ವೆಲ್ಡ್,, ಏರ್ ಕೂಲ್ಡ್ ಮೋಟಾರ್ ಎಂಜಿನ್ ಹೊಂದಿದ್ದು, ಹೋಂಡಾ ಮಂಕಿ ಸ್ಪೆಷಲ್ ಎಡಿಷನ್ ಬೈಕ್ ಗರಿಷ್ಟ 9 .2 bhp ಮತ್ತು 11Nm ಗರಿಷ್ಟ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
70 Km ಮೈಲೇಜ್ ಕೊಡುವ ಹೋಂಡಾ ಸ್ಮಾರ್ಟ್ ಬೈಕಿಗೆ ಹೆಚ್ಚುತ್ತಿದೆ ಬೇಡಿಕೆ
ಹೋಂಡಾ ಮಂಕಿ ಸ್ಪೆಷಲ್ ಎಡಿಷನ್ ಬೈಕ್ 5.6 ಲೀಟರ್ ಇಂಧನ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಎಬಿಎಸ್ ಬ್ರೇಕ್, 12 ಇಂಚಿನ ವೀಲ್ ಹೊಂದಿದೆ. ಈ ಬೈಕ್ ಒಂದು ಲೀಟರ್ ಗೆ 70 ಕಿಲೋಮೀಟರ್ ಮೈಲೇಜ್ ನೀಡಲಿದೆ. ಈ ಬೈಕ್ 104 ಕೆಜಿ ತೂಕವನ್ನು ಹೊಂದಿದ್ದು ಸುಲಭವಾಗಿ ರೈಡಿಂಗ್ ಮಾಡಬಹುದಾಗಿದೆ. ಇನ್ನು ಭಾರತದಲ್ಲಿ ಈ ಬೈಕ್ ಬಿಡುಗಡೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭಿಸಿಲ್ಲ.