Motocompacto: ಸೂಟ್ಕೇಸ್ ರೀತಿಯ ಹೊಸ ಎಲೆಕ್ಟ್ರಿಕ್ ಬೈಕ್ ಲಾಂಚ್ ಮಾಡಿದ ಹೋಂಡಾ, ಕೆಡಿಮೆ ಬೆಲೆ ಕಡಿಮೆ ಮೈಲೇಜ್.
ಕಡಿಮೆ ಬೆಲೆ ಮತ್ತು ಕಡಿಮೆ ಮೈಲೇಜ್ ಕೊಡುವ ಸ್ಕೂಟರ್ ಲಾಂಚ್ ಮಾಡಿದ ಹೋಂಡಾ.
Motocompacto Electric Scooter: ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚಿಗೆ Electric ವಾಹನಗಳ ಮಾರಾಟ ಹೆಚ್ಚಾಗುತ್ತಿದೆ ಎನ್ನಬಹುದು. ಇಂಧನ ಚಾಲಿತ ವಾಹನಗಳಿಗಿಂತ ಅನೇಕ ಪ್ರತಿಷ್ಠಿತಾ ಕಂಪನಿಗಳು ಸದ್ಯ Electric ವಾಹನ ತಯಾರಿಕೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಭವಿಷ್ಯದಲ್ಲಿ ರಸ್ತೆಗಳಲ್ಲಿ Electric ವಾಹನಗಳ ಸಂಚಾರವೇ ಹೆಚ್ಚಾಗಲಿದೆ ಎಂದರೆ ತಪ್ಪಾಗಲಾರದು.
Petrol , Diesel ಬೆಲೆಯ ಏರಿಕೆ ಒಂದು ರೀತಿಯಲ್ಲಿ ಇಂಧನ ಚಾಲಿತ ವಾಹನಗಳ ಬೇಡಿಕೆಯನ್ನು ಕಡಿಮೆ ಮಾಡಿ Electric ವಾಹನಗಳ ಬೇಡಿಕೆಯನ್ನು ಹೆಚ್ಚಿಸುತ್ತಿದೆ. ಇನ್ನು ಮಾರುಕಟ್ಟೆಯಲ್ಲಿ ನೀವು ವಿಭಿನ್ನ ವಿನ್ಯಾಸದ ಸಾಕಷ್ಟು Electric Scooter , Bike ಗಳನ್ನೂ ನೋಡಬಹುದು. ಇದೀಗ ಭಾರತೀಯ ಆಟೋ ವಲಯದಲ್ಲಿ HONDA ವಿಭಿನ್ನ ವಿನ್ಯಾಸದ ಅತಿ ಚಿಕ್ಕ ಗಾತ್ರದ, ಕಡಿಮೆ ತೂಕದ Electric Bike ಅನ್ನು ಲಾಂಚ್ ಮಾಡಲಿದೆ. ಈ ಹೊಸ ವಿನ್ಯಾಸದ ಬೈಕ್ ನೋಡುಗರ ಗಮನ ಸಂಪೂರ್ಣವಾಗಿ ಸೆಳೆಯಲಿದೆ.
ಲಾಂಚ್ ಆಗಲಿದೆ ಸೂಟ್ಕೇಸ್ ಗಾತ್ರದ Electric Bike
Honda ಇದೀಗ ಸೂಟ್ಕೇಸ್ ಗಾತ್ರದ Motocompacto Electric Scooter ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸ್ಕೂಟರ್ ಸೂಟ್ಕೇಸ್ ನ ಗಾತ್ರವನ್ನು ಹೊಂದಿರುವುದು ವಿಶೇಷವಾಗಿದೆ. Motocompacto Electric Scooter ಸಂಪೂರ್ಣ ಬಿಳಿ ಬಣ್ಣದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. Motocompacto Electric Scooter 3.7 ಇಂಚು ಅಗಲ, 21.1 ಇಂಚು ಎತ್ತರ, 29.2 ಇಂಚು ಉದ್ದವನ್ನು ಹೊಂದಿದೆ.
ಕೇವಲ ಒಂದೇ ಚಾರ್ಜ್ ನಲ್ಲಿ 19 ಕಿಲೋಮೀಟರ್ Mileage
ಈ ವಿಭಿನ್ನ ವಿನ್ಯಾಸದ ಸೂಟರ್ ಕೇವಲ 18.7 kg ತೂಕವಾಗಿದ್ದು, 120kg ಭಾರವನ್ನು ಹೊರುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಯಾವುದೇ ವಯಸ್ಸಿನವರು ಕೂಡ ಈ ಸ್ಕೂಟರ್ ಅನ್ನು ಸುಲಭವಾಗಿ ಚಲಾಯಿಸಬಹುದು. ಇನ್ನು ಈ Motocompacto Electric Scooter ನಲ್ಲಿ 6.8Ah ಶಕ್ತಿಶಾಲಿ ಬ್ಯಾಟರಿಯನ್ನು ಅಳವಡಿಸಿದ್ದು, ಕೇವಲ ಒಂದೇ ಚಾರ್ಜ್ ನಲ್ಲಿ ನೀವು 19 ಕಿಲೋಮೀಟರ್ ಪ್ರಯಾಣಿಸಬಹುದಾಗಿದೆ.
Motocompacto Electric Scooter Price
ಇನ್ನು ನೀವು ಈ ಸ್ಕೂಟರ್ ಅನ್ನು ಕೇವಲ 2 .5 ರಿಂದ 3 ಗಂಟೆಗಳಲ್ಲಿ ಚಾರ್ಜ್ ಮಾಡಿಕೊಳ್ಳಬಹುದು. ಇನ್ನು ವಾಹನ ಸವಾರರ ಸುರಕ್ಷತೆಗಾಗಿ ಹಿಂಭಾಗದ ಚಕ್ರದಲ್ಲಿ ಡ್ರಮ್ ಬ್ರೇಕ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ. Motocompacto Electric Scooter ಮೊಟ್ಟ ಮೊದಲುಅಮೆರಿಕ ಮಾರುಕಟ್ಟೆಯನ್ನು ಪ್ರವೇಶಿಸಲಿದ್ದು, ಭಾರತೀಯ ಮಾರುಕಟ್ಟೆಗೆ 82,458 ರೂ. ಗಳಲ್ಲಿ ಎಂದು ಮೂಲಗಳಿಂದ ತಿಳಿದುಬಂದಿದೆ.