Honda N-Van: ದೊಡ್ಡ ಕುಟುಂಬಕ್ಕೆ 210 Km ಮೈಲೇಜ್ ಕೊಡುವ ವ್ಯಾನ್ ಲಾಂಚ್, ವ್ಯಾನ್ ನಲ್ಲಿ ಫ್ಯಾನ್ ಮತ್ತು ಲೈಟ್.

ಸಂಪೂರ್ಣ ಚಾರ್ಜ್ ನಿಂದ 210 ಕಿಲೋಮೀಟರ್ ಚಲಿಸುವ ಎಲೆಕ್ಟ್ರಿಕ್ ವ್ಯಾನ್.

Honda N-Van e Price In India: ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಎಲ್ಲ ಮಾದ್ರಿಯ ವಾಹನಗಳು ಹೆಚ್ಚಾಗಿ ಪರಿಚಯವಾಗುತ್ತಿದೆ. ಕಾರ್, ಬೈಕ್, ಸ್ಕೂಟರ್ ಗೀತೆಗೆ ವ್ಯಾನ್ ಗಳು ಕೂಡ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಪಡೆದುಕೊಂಡಿದೆ.

ಸದ್ಯ ದೇಶದ ಜನಪ್ರಿಯ ವಾಹನ ತಯಾರಕ ಕಂಪನಿಯಾದ Honda ತನ್ನ ಹೊಚ್ಚ ಹೊಸ ಮಾದರಿಯ Van ಅನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ. ಹೋಂಡಾದ ನೂತನ ಮಾದರಿಯ Van ನ ಬಗ್ಗೆ ಒಂದಿಷ್ಟು ಮಾಹಿತಿ ಲಭಿಸಿದೆ.

Honda N- Van e Price In India
Image Credit: Gizmochina

ಹೊಚ್ಚ ಹೊಸ Honda Electric Van
ಇದೀಗ ಮಾರುಕಟ್ಟೆಯಲ್ಲಿ Honda ತನ್ನ N -Van e ಯನ್ನು ಪರಿಚಯಿಸಲಿದೆ. ಹೋಂಡಾ ತನ್ನ N -Van e ನಲ್ಲಿ L4, FUN ಮತ್ತು L2 ಎಂಬ ಮೂರು ರೂಪಾಂತರಗಳನ್ನು ಪರಿಚಯಿಸಲಿದೆ. ಈ ವ್ಯಾನ್ ಲಘು ವಾಣಿಜ್ಯ ಕಂಪನಿ EV ವಾಹನದ ವರ್ಗದಲ್ಲಿರುತ್ತದೆ. ಜನರ ಅಗತ್ಯಗಳಿಗೆ ಅನುಗುಣವಾಗಿ N- VAN e ಅನ್ನು ಮಾರ್ಪಡಿಸಬಹುದು. ಈ ವ್ಯಾನ್ 1500 ವ್ಯಾಟ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದೆ. ವ್ಯಾನ್ ECON ಮೋಡ್ ಅನ್ನು ಹೊಂದಿದ್ದು ಅದು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಫ್ಯಾನ್ ಮತ್ತು ಬಲ್ಬ್ ಗಳನ್ನೂ ರನ್ ಮಾಡಬಹುದಾದ ಎಲೆಕ್ಟ್ರಿಕ್ ವ್ಯಾನ್
Honda N -Van e ಎಲೆಕ್ಟ್ರಿಕ್ ಮಾದರಿಯಲ್ಲಿ ಶಕ್ತಿಶಾಲಿ ಬ್ಯಾಟರಿಯನ್ನು ನೀಡಲಾಗಿದ್ದು, ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ ಸುಮಾರು 210 ಕಿಲೋಮೀಟರ್ ಓಡುತ್ತದೆ. ಈ ದೊಡ್ಡ ಗಾತ್ರದ ವ್ಯಾನ್ ಮನೆಗೆ ವಿದ್ಯುತ್ ಸರಬರಾಜು ಮಾಡಬಹುದು ಮತ್ತು ಫ್ಯಾನ್, ಬಲ್ಬ್ ಇತ್ಯಾದಿಗಳನ್ನು ಕೂಡ ಈ ವ್ಯಾನ್ ನ ಬ್ಯಾಟರಿಯ ಮೂಲಕ ಓಡಿಸಬಹುದಾಗಿದೆ.

Honda N -Van e Price
Image Credit: News24online

ವ್ಯಾನ್ ನ ಲಭ್ಯತೆ
ಈ ವ್ಯಾನ್‌ ನ ಉದ್ದ 3,395 ಎಂಎಂ, ಅಗಲ 1,475 ಮಿಮೀ ಮತ್ತು ಎತ್ತರ 1,950 ಮಿಮೀ ಆಗಿದ್ದು, ಫ್ರಂಟ್ ವೀಲ್ ಡ್ರೈವ್ ನೊಂದಿಗೆ 5 ಡೋರ್ ವ್ಯಾನ್ ಇದಾಗಿದೆ. ವ್ಯಾನ್ 2,520 ಎಂಎಂ ವ್ಹೀಲ್ ಬೇಸ್ ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಈ ವ್ಯಾನ್ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆಯಲಿದೆ. Honda N -Van e ಲೋಡ್ ಸಾಮರ್ಥ್ಯ 350 ಕೆಜಿ ಆಗಿದೆ.

Join Nadunudi News WhatsApp Group

Honda N -Van e Price
ಇನ್ನು N -Van e ನಲ್ಲಿ ಸೀಟುಗಳನ್ನು ಮಡಚುವ ಮೂಲಕ ಲಗೇಜ್ ಜಾಗವನ್ನು ಹೆಚ್ಚಿಸಬಹುದು. ಮಾಧ್ಯಮ ವರದಿಗಳ ಪ್ರಕಾರ, ಅಕ್ಟೋಬರ್ 28 ರಂದು ಜಪಾನ್‌ನಲ್ಲಿ ನಡೆಯಲಿರುವ ಮೊಬಿಲಿಟಿ ಶೋನಲ್ಲಿ ಈ ವ್ಯಾನ್‌ ನ ಮಾದರಿಯನ್ನು ಪರಿಚಯಸಲಾಗುತ್ತದೆ. ಇನ್ನು Honda N -Van e ಎಲೆಕ್ಟ್ರಿಕ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ 8.31 ಲಕ್ಷ ಎಕ್ಸ್ ಶೋರೂಂ ಆರಂಭಿಕ ಬೆಲೆಯಲ್ಲಿ ನೀಡಲಾಗುವುದು ಎಂದು ಅಂದಾಜಿಸಲಾಗಿದೆ.

Join Nadunudi News WhatsApp Group