Honda Navi: ಕುಳ್ಳಗಿರುವವರಿಗಾಗಿ ಈ ಬೈಕ್, 45 km ಮೈಲೇಜ್ ಜೊತೆಗೆ ಶೋ ರೂಮ್ ಗೆ ಎಂಟ್ರಿ ಕೊಟ್ಟ ಹೋಂಡಾ ಬೈಕ್.
ಹೋಂಡಾ ಕಂಪನಿಯ ಈ ಬೈಕ್ 18 ರಿಂದ 25 ವರ್ಷ ದವರಿಗೆ ಹೇಳಿ ಮಾಡಿಸಿದಂತಿದೆ.
Honda Navi Bike: ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಬೈಕ್ ಮತ್ತು ಕಾರುಗಳು ಬಿಡುಗಡೆಯಾಗುತ್ತಿದೆ. ದಿನೇ ದಿನೇ ದೇಶದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಅದೇ ರೀತಿ ವಾಹನ ಖರೀದಿಯಲ್ಲೂ ಸಹ ಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಬಹುದು.
ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ (Honda) ಕಂಪನಿಯ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ಕಂಪನಿ ಭಾರತದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದ್ದು, ಹೊಸ ಹೊಸ ಬೈಕ್ ಕಾರುಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ.
ಹೋಂಡಾ ನವಿ ಬೈಕ್ ನ ವಿಶೇಷತೆ
ಇದೀಗ ಹೋಂಡಾ ಕಂಪನಿಯ ಬೈಕ್ ಒಂದು ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಹೋಂಡಾ ಕಂಪನಿಯ ಇದೀಗ ಕುಳ್ಳಗಿರುವವರಿಗೆಗಾಗಿಯೇ ವಿಶೇಷವಾಗಿ ನವಿ ಬೈಕ್ ಅನ್ನು ಬಿಡುಗಡೆ ಮಾಡಿದೆ. ಈ ಬೈಕ್ ಉತ್ತಮ ಮೈಲೇಜ್ ಸಾಮರ್ಥ್ಯವನ್ನು ಹೊಂದಿದ್ದು, ಟ್ರಾವೆಲ್ ಮಾಡಲು ಸಹ ತುಂಬಾ ಸಹಕಾರಿಯಾಗಲಿದೆ.
ಈ ಬೈಕ್ 18 ರಿಂದ 25 ವರ್ಷ ವಯಸ್ಸಿನವರಿಗೆ ಹೇಳಿ ಮಾಡಿದಂತಿದೆ. ಹೋಂಡಾ ನವಿ ಬೈಕ್ ನೋಡಲು ಮೋಟಾರ್ ಸೈಕಲ್ ನಂತೆ ಇದೆ. ಇನ್ನು ಈ ಬೈಕ್ 110 cc ಎಂಜಿನ್ ನಿಂದ ಚಾಲಿತವಾಗಿದೆ. ಈ ಎಂಜಿನ್ 8 bhp ಪವರ್ ಮತ್ತು 9 nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ನವಿ ಬೈಕ್ ಮುಂಭಾಗದಲ್ಲಿ ಟೆಲಿಸ್ಕೊಪಿಕ್ ಪೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಒಳಗೊಂಡಿದೆ.
ಹೋಂಡಾ ನವಿ ಬೈಕ್ ನ ಬೆಲೆ
ಇನ್ನು ಹೊಂಡದ ನವಿ ಬೈಕ್ 156 ಎಂ ಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 765 ಎಂ ಎಂ ಸೀಟ್ ಎತ್ತರವನ್ನು ಹೊಂದಿದೆ. ಇದು 101 ಕೆಜಿ ಕಾರ್ಬ್ ತೂಕ ಮತ್ತು 3 .8 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ. ಹೋಂಡಾದ ಈ ಬೈಕ್ ಐದು ಬಣ್ಣಗಳಲ್ಲಿ ಲಭ್ಯವಿದೆ.
ಕೆಂಪು, ಬಿಳಿ, ಕಪ್ಪು, ಹಸಿರು, ಕಿತ್ತಳೆ ಮತ್ತು ಕಂದು ಬಣ್ಣದಲ್ಲಿ ಈ ಬೈಕ್ ಲಭ್ಯವಿದೆ. ಇನ್ನು ಈ ಬೈಕ್ ನ ಎಕ್ಸ್ ಶೋ ರೂಮ್ ಬೆಲೆ 45,632 ರೂಪಾಯಿಯಿಂದ 47,602 ರೂಪಾಯಿವರೆಗೆ ಆಗಿದೆ. ಈ ಬೈಕ್ 45 kmpl ಮೈಲೇಜ್ ಅನ್ನು ಹೊಂದಿದೆ.