Honda Shine 100 Bike: ಅತಿ ಕಡಿಮೆ ಬೆಲೆಯಲ್ಲಿ ಹೋಂಡಾ ಕಂಪನಿಯ ಹೊಸ ಬೈಕ್ ಬಿಡುಗಡೆ.
Honda Shine 100: ದೇಶದ ಲೆಜೆಂಡರಿ ದ್ವಿಚಕ್ರ ವಾಹನ ಕಂಪನಿ ಹೋಂಡಾ ಮೋಟಾರ್ ಸೈಕಲ್(Honda Motor Cycle) ಮತ್ತು ಸ್ಕೂಟರ್ಸ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಅಗ್ಗದ ಬೈಕ್ ಅನ್ನು ಬಿಡುಗಡೆ ಮಾಡಿದೆ. ಹೀರೊ ಸ್ಪಿಲಿಂಡರ್ ಗೆ ಕಠಿಣ ಸ್ಪರ್ಧೆಯನ್ನು ನೀಡಲು ಕಂಪನಿಯು ತನ್ನ 100 ಸಿಸಿ ಮೋಟಾರ್ ಸೈಕಲನ್ನು ಹೋಂಡಾ ಸೈನ್ 100 ಹೆಸರಿನಲ್ಲಿ ಬಿಡುಗಡೆ ಮಾಡಿದೆ.
65000 ಕ್ಕಿಂತ ಕಡಿಮೆ ಬೆಲೆಯಲ್ಲಿ ಹೋಂಡಾ ಶೈನ್ 100 ಮೋಟಾರ್ ಸೈಕಲ್
ಹೋಂಡಾ ಶೈನ್(Honda Shine) 100 ಹೆಸರಿನ ಈ ಹೊಸ ಮೋಟಾರ್ ಸೈಕಲ್ ಅನ್ನು ಈಗ 65 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಆರಂಭಿಕ ಬೆಲೆಯನ್ನು 64900 ರೂಪಾಯಿ ಗಳೆಂದು ನಿಗದಿಗೊಳಿಸಲಾಗಿದೆ. ಹೊಸ ಬೈಕ್ ಈಗ ಭಾರತದಲ್ಲಿ ಅತ್ಯಂತ ಕೈಗೆಟಕುವ ಹೋಂಡಾ ಬೈಕ್ ಆಗಲಿದೆ. ಹೋಂಡಾ ಶೈನ್ 100 ನಲ್ಲಿ 6 ವರ್ಷಗಳ ವಿಶೇಷ ವಾರಂಟಿ ಪ್ಯಾಕೇಜ್ ಸಹ ನೀಡಲಾಗುತ್ತದೆ.
ಅತಿ ಕಡಿಮೆ ಬೆಲೆಯಲ್ಲಿ ಹೋಂಡಾ ಕಂಪನಿ ಬೈಕ್
ಸಾಮಾನ್ಯವಾಗಿ ಎಲ್ಲರಿಗೂ ಬೈಕ್ ಖರೀದಿಸುವ ಆಸೆ ಇದ್ದೆ ಇರುತ್ತದೆ. ಇದೀಗ 65 ಸಾವಿರದ ಹೊಸ ಬೈಕ್ ಒಂದು ಮಾರುಕಟ್ಟೆಯಲ್ಲಿ ಲಭ್ಯವಿದೆ. ಗ್ರಾಹಕರು ಈಗಲೇ ಈ ಬೈಕ್ ಅನ್ನು ಖರೀದಿಸಬಹುದು. ಅತಿ ಅಗ್ಗದ ಬೆಲೆಯಲ್ಲಿ ಈ ಬೈಕ್ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಹೋಂಡಾ ಶೈನ್ ಬೈಕ್ 100 ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದು 8 ಬಿ ಎಚ್ ಪಿ ಪವರ್ ಮತ್ತು 8.05 ಏನ್ಎಂ ಪೀಕ್ ತಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು 4 ಸ್ಪೀಡ್ ಗೇರ್ ಬಾಕ್ಸ್ ಗೆ ಜೋಡಿಸಲಾಗಿದೆ. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸೆಡ್ ಸ್ಟಾಂಡ್ ತೆಗೆಯದಿದ್ದರೆ ಈ ಎಂಜಿನ್ ಪ್ರಾರಂಭವಾಗುವುದಿಲ್ಲ. ಹೊಸ 100 ಸಿಸಿ ಶೈನ್ ನೊಂದಿಗೆ ಹೋಂಡಾ ಗ್ರಾಮೀಣ ಮಾರುಕಟ್ಟೆಗಳತ್ತ ಗಮನ ಹರಿಸುತ್ತದೆ.