Honda Shine: 10 ವರ್ಷ ವಾರೆಂಟಿ ಮತ್ತು 65 ಕೀ ಮೀ ಮೈಲೇಜ್, ಸಕತ್ ಕಡಿಮೆ ಬೆಲೆಗೆ ಬಂತು ಹೋಂಡಾ ಬೈಕ್.
ಲೀಟರ್ ಗೆ 65 ಕೀಲೊಮೀಟರ್ ಮೈಲೇಜ್ ನೀಡುವ, 10 ವರ್ಷ ವಾರಂಟಿಯ ಹೋಂಡಾ ಶೈನ್ 125 ಬೈಕ್ ಬಿಡುಗಡೆ.
Honda Shine 125 Bike: ಇತ್ತೀಚಿಗೆ ದೇಶಿಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳು ಬಿಡುಗಡೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಹೋಂಡಾ (Honda)ಕಂಪನಿ ಹೊಸ ಹೊಸ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡುತ್ತಿದೆ. ಹೋಂಡಾ ಕಂಪನಿಯ ಬೈಕ್ ಗಳು ಹೆಚ್ಚು ಸೆಲ್ ಕಾಣುತ್ತಿದೆ. ಇದೀಗ 10 ವರ್ಷ ವಾರಂಟಿಯ ಹೋಂಡಾ ಶೈನ್ 125 ಬೈಕ್ ಬಿಡುಗಡೆ ಆಗಿದೆ.
ಹೋಂಡಾ ಶೈನ್ 125 ಬೈಕ್
ಇದೀಗ ಹೋಂಡಾ ಕಂಪನಿಯಿಂದ ಹೋಂಡಾ ಶೈನ್ ಬೈಕ್ ಒಂದು ಬಿಡುಗಡೆಯಾಗಿದ್ದು ಖರೀದಿದಾರರಿಗೆ ಈ ಬೈಕ್ ಖರೀದಿಸಲು ಉತ್ತಮವಾಗಿದೆ.
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕಂಪನಿಗಳು ಹೊಸ ಹೊಸ ಬಗೆಯ ಬೈಕ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಹೋಂಡಾ ಕಂಪನಿಯಿಂದ ಇತ್ತೀಚಿಗೆ ಹೊಸ ಬೈಕುಗಳು ಬಿಡುಗಡೆಯಾಗಿದ್ದು, ಅತ್ತ್ಯುತ್ತಮ ರೀತಿಯಲ್ಲಿ ಸೇಲ್ ಕಾಣುತ್ತಿದೆ. ಇದೀಗ ಹೋಂಡಾ ಕಂಪನಿಯಿಂದ ಹೋಂಡಾ ಶೈನ್ ಬಿಡುಗಡೆಯಾಗಿದ್ದು, ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದೆ ಎನ್ನಬಹುದು.
ಹೋಂಡಾ ಶೈನ್ 125 ಬೈಕ್ ನ ಬೆಲೆ ಮತ್ತು ವಿಶೇಷತೆ
ಹೋಂಡಾ ಶೈನ್ 125 ಬೈಕ್ ಅತ್ತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಬೈಕ್ ನಲ್ಲಿ ಏರ್ ಕೋಲ್ಡ್, ಫ್ಯುಯಲ್ ಇಂಜೆಕ್ಟೇಡ್ ತಂತ್ರಜ್ಞಾನವನ್ನು ಆಧರಿಸಿ ಪಡೆಯಬಹುದು. ಇದು 123.94 ಸಿಸಿ ಎಂಜಿನ್ ಆಗಿದ್ದು ಗರಿಷ್ಠ 10.5 ಬಿಎಚ್ ಪಿ ಪವರ್ ಜೊತೆಗೆ 11 ಏನ್ ಎಂ ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಇದರಲ್ಲಿ ಕಂಪನಿಯು 5 ಸ್ಪೀಡ್ ಗೇರ್ ಬಾಕ್ಸ್ ಅನ್ನು ಬಳಸಿದೆ. ಇನ್ನು ಈ ಬೈಕ್ ಪ್ರತಿ ಲೀಟರ್ ಗೆ 65 ಕೀಲೊಮೀಟರ್ ಮೈಲೇಜ್ ನೀಡುತ್ತದೆ. ಹೋಂಡಾ ಶೈನ್ ಬೈಕಿನ ಆರಂಭಿಕ ಬೆಲೆ ರೂಪಾಯಿ 79,800. ಇನ್ನು ಇದರ ಉನ್ನತ ರೂಪಾಂತರಕ್ಕೆ 83,800 ರೂಪಾಯಿ. ಇನ್ನು ಈ ಬೈಕ್ ಅನ್ನು 10 ವರ್ಷದ ವಾರೆಂಟಿ ಪ್ಯಾಕೇಜ್ ನಲ್ಲಿ ಸಹ ಖರೀದಿಸಬಹುದು.