Honda Bike: 65 Km ಮೈಲೇಜ್ ಮತ್ತು ಕಡಿಮೆ ಬೆಲೆ, ದೇಶದಲ್ಲಿ 30 ಲಕ್ಷಕ್ಕೂ ಅಧಿಕ ಮಾರಾಟವಾದ ಈ ಹೋಂಡಾ ಬೈಕ್.
ಪ್ರತಿ ಲೀಟರ್ ಗೆ 65 ಕೀಲೊಮೀಟರ್ ಮೈಲೇಜ್ ನೀಡುವ ಹೋಂಡಾ ಬೈಕಿಗೆ ಹೆಚ್ಚಾದ ಬೇಡಿಕೆ.
Honda Shine Sales In India: ಜನರು ಹೆಚ್ಚಾಗಿ ಇತ್ತೀಚಿಗೆ ಹೊಸ ಹೊಸ ಬೈಕ್ ಗಳ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಲು ವಿವಿಧ ಮಾದರಿಯ ಬೈಕ್ ಗಳು ಲಗ್ಗೆ ಇಡುತ್ತಲೇ ಇವೆ.
ಇನ್ನು ದೇಶದ ಜನಪ್ರಿಯ ಬೈಕ್ ತಯಾರಾಕ ಕಂಪನಿಯಾದ Honda ಇತ್ತೀಚಿಗೆ ಗ್ರಹಕರಿಗಾಗಿ ವಿಭಿನ್ನ ಮಾದರಿಯ ಬೈಕ್ ಗಳನ್ನು ಪರಿಚಯಿಸುತ್ತಿವೆ. ಮಾರುಕಟ್ಟೆಯಲ್ಲೂ ಹೋಂಡಾ ಬೈಕ್ ಗಳು ಮೈಲೇಜ್ ವಿಚಾರವಾಗಿ ಹೆಚ್ಚು ಜನಪ್ರಿಯವಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ ಹೋಂಡಾ ಬೈಕ್ ಒಂದು ಪರಿಚಯವಾಗಿದೆ. ಗ್ರಾಹಕರ ಆಯ್ಕೆಗೆ ಮತ್ತೊಂದು ಮೈಲೇಜ್ ಬೈಕ್ ಸೇರಿಕೊಂಡಿದೆ.
Honda Shine New
ಸದ್ಯ ಮಾರುಕಟ್ಟೆಯಲ್ಲಿ Honda Shine Bike ಪರಿಚಯವಾಗಿದೆ. ಮಾರುಕಟ್ಟೆಯಲ್ಲಿ ಈಗಾಗಲೇ Hero Honda Glamour, Hero Honda Super Splendor, Yamaha Gladiator ಸೇರಿದಂತೆ ಇನ್ನು ಹತ್ತು ಹಲವು ಮೋಟಾರ್ ಸೈಕಲ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೀಗ ಈ ಎಲ್ಲಾ ಮಾದರಿಯ ಬೈಕ್ ಗಳಿಗೆ ಪೈಪೋಟಿ ನೀಡಲು Honda Shine ಸಿದ್ಧವಾಗಿದೆ ಎನ್ನಬಹುದು.
ಮಾರಾಟದಲ್ಲಿ ದಾಖಲೆ ಸ್ರಷ್ಟಿಸಿದ ಹೋಂಡಾ
ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ 125cc ಮೋಟಾರ್ ಸೈಕಲ್ ಎಂಬ ಹೆಗ್ಗಳಿಕೆಯನ್ನು ಹೋಂಡಾ ಶೈನ್ ಪಡೆದುಕೊಂಡಿದೆ. ಭಾರತದಲ್ಲಿ 3 ಮಿಲಿಯಂಗಿಂತಲೂ ಹೆಚ್ಚು Honda shine Bike ಗಳನ್ನೂ ಮಾರಾಟ ಮಾಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
11 ವರ್ಷಗಳಲ್ಲಿ ಹೋಂಡಾ ಭಾರತದಲ್ಲಿ 15 ಲಕ್ಷ ಯುನಿಟ್ Honda Shine ಮೋಟಾರ್ ಸೈಕಲ್ ಅನ್ನು ಮಾರಾಟ ಮಾಡಿದೆ. ಇದೆ ಅಂಕಿ ಅಂಶಗಳಲ್ಲಿ ಕಂಪನಿಯು ತನ್ನ ಮಾರಾಟವನ್ನು ಮುಂದುವರೆಸಿದ್ದು, ಒಟ್ಟು 17 ವರ್ಷಗಲ್ಲಿ 30 ಲಕ್ಷ ಯುನಿಟ್ ಗಳಷ್ಟು ಬೈಕ್ ಗಳನ್ನೂ ಮಾರಾಟ ಮಾಡುವ ಮೂಲಕ ಅತಿ ಹೆಚ್ಚು ಮಾರಾಟವಾದ ಬೈಕ್ ಗಳ ಪಟ್ಟಿಯಲ್ಲಿ Honda Shine ಸೇರಿಕೊಂಡಿದೆ.
ಹೋಂಡಾ ಶೈನ್ 125 ಬೈಕ್ ನ ಬೆಲೆ ಮತ್ತು ವಿಶೇಷತೆ
ಹೋಂಡಾ ಶೈನ್ 125 ಬೈಕ್ ಅತ್ತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಬೈಕ್ ನಲ್ಲಿ ಏರ್ ಕೋಲ್ಡ್, ಫ್ಯುಯಲ್ ಇಂಜೆಕ್ಟೇಡ್ ತಂತ್ರಜ್ಞಾನವನ್ನು ಆಧರಿಸಿ ಪಡೆಯಬಹುದು. ಇದು 123.94 ಸಿಸಿ ಎಂಜಿನ್ ಆಗಿದ್ದು ಗರಿಷ್ಠ 10.5 ಬಿಎಚ್ ಪಿ ಪವರ್ ಜೊತೆಗೆ 11 ಏನ್ ಎಂ ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಇದರಲ್ಲಿ ಕಂಪನಿಯು 5 ಸ್ಪೀಡ್ ಗೇರ್ ಬಾಕ್ಸ್ ಅನ್ನು ಬಳಸಿದೆ. ಇನ್ನು ಈ ಬೈಕ್ ಪ್ರತಿ ಲೀಟರ್ ಗೆ 65 ಕೀಲೊಮೀಟರ್ ಮೈಲೇಜ್ ನೀಡುತ್ತದೆ. ಹೋಂಡಾ ಶೈನ್ ಬೈಕಿನ ಆರಂಭಿಕ ಬೆಲೆ ರೂಪಾಯಿ 79,800. ಇನ್ನು ಇದರ ಉನ್ನತ ರೂಪಾಂತರಕ್ಕೆ 83,800 ರೂಪಾಯಿ. ಇನ್ನು ಈ ಬೈಕ್ ಅನ್ನು 10 ವರ್ಷದ ವಾರೆಂಟಿ ಪ್ಯಾಕೇಜ್ ನಲ್ಲಿ ಸಹ ಖರೀದಿಸಬಹುದು.