Honda Sustain: ಪರಿಸರ ಸಂರಕ್ಷಣೆಯ ಕಾರ್ ಲಾಂಚ್ ಮಾಡಿದ ಹೋಂಡಾ, ಪೆಟ್ರೋಲ್ ಡೀಸೆಲ್ ಅಗತ್ಯವೇ ಇಲ್ಲ.
ಜಪಾನ್ ಮೊಬಿಲಿಟಿ ಶೋ 2023 ರಲ್ಲಿ ಮಿಂಚುತ್ತಿರುವ ಹೋಂಡಾ ಸಸ್ಟೈನಾ ಸಿ ಕಾನ್ಸೆಪ್ಟ್.
Honda Sustain -C: ಸದ್ಯ ಜಪಾನಿನಲ್ಲಿ ಮೊಬಿಲಿಟಿ ಶೋ 2023 ಬಹಳ ಅದ್ದೂರಿಯಾಗಿ ನಡೆಯುತ್ತಿದೆ. ಈ ವೇಳೆ ವಿಭಿನ್ನ ಮಾದರಿಯ ಸಾಕಷ್ಟು ವಾಹನಗಳು ಪ್ರದರ್ಶನಗೊಂಡಿವೆ. ಈ ಪ್ರದರ್ಶನದಲ್ಲಿ ದೇಶದ ಜನಪ್ರಿಯ ಕಾರ್ ತಯಾರಕ ಕಂಪನಿಯಾದ HONDA ತನ್ನ ಹೊಸ ವರ್ಷನ್ ಕಾರ್ ಅನ್ನು ಗ್ರಾಹಕರಿಗೆ ಪರಿಚಯಿಸಿದೆ.
ಮೊಬಿಲಿಟಿ ಷೋನಲ್ಲಿ ಹೋಂಡಾ ನೂತನ ಮಾದರಿ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಜಪಾನ್ ಮೊಬಿಲಿಟಿ ಶೋ 2023 ರಲ್ಲಿ, ಹೋಂಡಾ ಮೋಟಾರ್ ತನ್ನ ಭವಿಷ್ಯದ ಹೊಸ ಮಾದರಿಯನ್ನು ಪರಿಚಯಿಸಿದೆ. ಹೋಂಡಾ ಕಂಪನಿಯ ಈ ಕಾರ್ ಮುಂದಿನ ದಿನಗಳಲ್ಲಿ ಸಾಕಷ್ಟು ದಾಖಲೆಯ ಮಾರಾಟ ಆಗುವುದರಲ್ಲಿ ಎರಡು ಮಾತಿಲ್ಲ ಎಂದು ಜನರು ಅಭಿಪ್ರಾಯವನ್ನ ಕೂಡ ಹೊರಹಾಕಿದ್ದಾರೆ.
Honda Sustain -C
ಜನಪ್ರಿಯ ವಾಹನ ತಯಾರಕ ಕಂಪನಿಯಾದ Honda ಜಪಾನಿನಲ್ಲಿ ಮೊಬಿಲಿಟಿ ಶೋ 2023 ರಲ್ಲಿ ತನ್ನ ಹೊಚ್ಚ ಹೊಸ Honda Sustain -C ಮಾದರಿಯನ್ನು ಗ್ರಾಹಕರಿಗೆ ಪರಿಚಯಿಸಿದೆ. ತನ್ನ ಉತ್ಪನ್ನಗಳ ಮಧ್ಯಭಾಗದಲ್ಲಿ, ಹೋಂಡಾ ಸುಸ್ಥಿರತೆ ಮತ್ತು ತಂತ್ರಜ್ಞಾನದ ವಿಷಯಗಳನ್ನು ಪ್ರದರ್ಶಿಸಿದೆ. ಸ್ವಯಂ ಪ್ರದರ್ಶನದಲ್ಲಿ ಹೋಂಡಾ ಪ್ರದರ್ಶಿಸಿದ ಮುಂದಿನ ಹಂತತ ಒಂದು ಪರಿಕಲ್ಪನೆಯ ಕಾರು Honda Sustain -C ಕಾನ್ಸೆಪ್ಟ್ ಆಗಿದೆ.
ಇದು ಮರುಬಳಕೆಯ ಅಕ್ರಿಲಿಕ್ ರಾಳದಿಂದ ಮಾಡಿದ ದೇಹದ ಫಲಕಗಳನ್ನು ಒಳಗೊಂಡಿದೆ. ಲೋಹಗಳು, ರಾಳಗಳು ಮತ್ತು ಬಟ್ಟೆಗಳು ಸೇರಿದಂತೆ ವಾಹನಗಳ ತಯಾರಿಕೆಯಲ್ಲಿ ವಿವಿಧ ವಸ್ತುಗಳನ್ನು ಬಳಸಲಾಗುತ್ತದೆ. ಹೋಂಡಾ ಪ್ರಕಾರ, ಮುಂದಿನ ದಿನಗಳಲ್ಲಿ ವಾತಾವರಣದಲ್ಲಿ ಸಿಗ ಕೆಲವು ಸಂಪನ್ಮೂಲಗಳು ಸಂಪೂರ್ಣವಾಗಿ ನಾಶ ಆಗಲಿದ್ದು ಮುಂದಿನ ದಿನಗಳಲ್ಲಿ ಸಂಪನ್ಮೂಲಗಳ ಕೊರತೆ ಉಂಟಾಗಯುತ್ತದೆ ಎಂದು ಹೇಳಿದೆ ಮತ್ತು ನಾವು ಅದನ್ನ ಉಳಿಸಿಕೊಳ್ಳಲು ಕಷ್ಟಪಡಬೇಕಾಗುತ್ತದೆ ಎಂದು ಪ್ರದರ್ಶನದಲ್ಲಿ ಹೇಳಿದೆ.
ಹೀಗಾಗಿ, ಸಸ್ಟೈನಾ-ಸಿ ಪರಿಕಲ್ಪನೆಯು ಸಂಪನ್ಮೂಲ ಪರಿಚಲನೆಯು ಹೇಗೆ ಹೋಗಬೇಕು ಎಂಬುದನ್ನು ತೋರಿಸುತ್ತದೆ. Honda Sustain -C ಪರಿಸರ ಸುಸ್ಥಿರತೆ ಮತ್ತು ಭವಿಷ್ಯಕ್ಕಾಗಿ ಚಲನಶೀಲತೆಯ ಸ್ವಾತಂತ್ರ್ಯ ಎರಡನ್ನು ಸಾಧಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಕಂಪನಿಯು ತನ್ನ ನೂತನ ಮಾದರಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಕಂಪನಿ ಅಧಿಕೃತವಾಗಿ ಕಾರ್ ನ ಬಗ್ಗೆ ಮಾಹಿತಿ ನೀಡುವವರೆಗೂ ಕಾದು ನೋಡಬೇಕಿದೆ.