Vario: 47 Km ರೇಂಜ್ ಮತ್ತು ಆಕರ್ಷಕ ಲುಕ್, ಆಕ್ಟಿವಾ ಪೈಪೋಟಿ ಕೊಡಲು ಇನ್ನೊಂದು ಹೋಂಡಾ ಸ್ಕೂಟರ್.
ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೋಂಡಾ ವೇರಿಯೋ 160.
Honda Vario 160 Scooter: ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ (Honda) ಇತ್ತೀಚಿಗೆ ಹೊಚ್ಚ ಹೊಸ ಸ್ಕೂಟರ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ಹೋಂಡಾ ತನ್ನ ವಿವಿಧ ಮಾದರಿಯ ಎಲೆಕ್ಟ್ರಿಕ್ ಹಾಗೂ ಪೆಟ್ರೋಲ್ ಚಾಲಿತ ಸ್ಕೂಟರ್ ಗಳನ್ನೂ ಬಿಡುಗಡೆ ಮಾಡಿದೆ.
ಇನ್ನು ಹೋಂಡಾ ಕಂಪನಿಯ ಸ್ಕೂಟರ್ ಗಳು ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುತ್ತದೆ. ಹೋಂಡಾ ಸ್ಕೂಟರ್ ಗಳು ಹೆಚ್ಚಿನ ಮೈಲೇಜ್ ನೀಡುವ ಸ್ಕೂಟರ್ ಆಗಿದೆ. ಇದೀಗ ಹೋಂಡಾ ತನ್ನ ನೂತನ 160 ಸಿಸಿ ಸ್ಪೋರ್ಟಿ ಸ್ಕೂಟರ್ ಅನ್ನು ಬಿಡುಗಡೆ ಮಾಡಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ.
ಹೋಂಡಾದ MotoGP ಮೋಟಾರ್‌ಸೈಕಲ್‌ಗಳಿಂದ Repsol ಆವೃತ್ತಿಯ ಗ್ರಾಫಿಕ್ಸ್ ರೂಪವನ್ನು ಪಡೆಯುತ್ತದೆ. ಇನ್ನು ಡೆಕಾಲ್ ಸೆಟ್ ಕಿತ್ತಳೆ, ಬಿಳಿ, ಕಪ್ಪು ಮತ್ತು ಕೆಂಪು ಪಟ್ಟೆಗಳಿಂದ ಮಿಶ್ರಿತವಾದ ವಿಭಿನ್ನ ವಿನ್ಯಾಸವನ್ನು ಒಳಗೊಂಡಿದೆ. ಹೋಂಡಾ ವೇರಿಯೋ ನೂತನ ಆವೃತ್ತಿಯನ್ನು ಮಲೇಷಿಯಾ ಮರುಕಟ್ಟೆಟಿಯಲ್ಲಿ ಬಿಡುಗಡೆ ಮಾಡಲಾಗಿದೆ.
ಹೋಂಡಾ ವೇರಿಯೋ 160 (Honda Vario 160 Scooter)
ನೂತನ ಹೋಂಡಾ ವೇರಿಯೋ 160 ಸಿಸಿ ಎಂಜಿನ್ ಅಳವಡಿಸಲಾಗಿದ್ದು, 15 bhp ಮತ್ತು 13 .4 Nm ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೋಂಡಾ ವೇರಿಯೊ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳೊಂದಿಗೆ ಮತ್ತು ಹಿಂಭಾಗದಲ್ಲಿ ಹೆಚ್ಚಿನ ಸುರಕ್ಷಿತ ಫೀಚರ್ ಅನ್ನು ಅಳವಡಿಸಲಾಗಿದೆ.
ಇನ್ನು ಈ ಸ್ಕೊತಾರ್ 14 ಇಂಚಿನ ಮಿಶ್ರಲೋಹ ಚಕ್ರ, 90 /80 ವಿಭಾಗ ಮತ್ತು 10 /80 ವಿಭಾಗದ ಟೈರ್ ಗಳ್ನ್ನು ಹೊಂದಿದೆ. ಇನ್ನು ಬ್ರೆಕಿಂಗ್ ಗಾಗಿ ಎರಡು ತುದಿಗಳಲ್ಲಿ ಒಂದೇ ಡಿಸ್ಕ್ ಅನ್ನು ಅಳವಡಿಸಲಾಗಿದೆ.
ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಹೋಂಡಾ ವೇರಿಯೋ 160
ಪ್ರಸ್ತುತ ಹೋಂಡಾ ವೇರಿಯೋ 160 ಸ್ಕೂಟರ್ ಮಲೇಷ್ಯಾ ಮಾರುಕಟ್ಟೆಯಲ್ಲಿ ಬಿಡುಗಡೆ ಕಾಣುತ್ತಿದೆ. ಇನ್ನೇನು ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ಈ ಹೋಂಡಾ ವೇರಿಯೋ 160 ಸ್ಕೂಟರ್ ನ ಬೆಲೆಯ ಬಗ್ಗೆ ಹೇಳುವುದಾದರೆ, ಮಾರುಕಟ್ಟೆಯಲ್ಲಿ ಇದರ ಬೆಲೆ 1.31 ಲಕ್ಷ ನಿಗದಿಪಡಿಸಲಾಗಿದೆ. ಈ ಹೋಂಡಾ ವೇರಿಯೋ 160 ಸ್ಕೂಟರ್ 47 kmpl ಮೈಲೇಜ್ ನೀಡಲಿದೆ. ಕೀಲೆಸ್ ಇಗ್ನಿಷನ್ ಸಿಸ್ಟಮ್, ಆಂಟಿ-ಥೆಫ್ಟ್ ಅಲಾರ್ಮ್, ಡಿಜಿಟಲ್ ಕನ್ಸೋಲ್, ಯುಎಸ್‌ಬಿ ಚಾರ್ಜರ್, ಫುಲ್-ಎಲ್‌ಇಡಿ ಲೈಟಿಂಗ್ ಸೇರಿದಂತೆ ಇನ್ನು ಹತ್ತು ಹಲವು ಫೀಚರ್ ಗಳನ್ನೂ ಅಳವಡಿಸಲಾಗಿದೆ.