XL750 Transalp: ಆಕರ್ಷಕ ಲುಕ್ ಮತ್ತು ಅಧಿಕ ಮೈಲೇಜ್, ಹೋಂಡಾದ ಹೊಸ ಸ್ಪೋರ್ಟ್ಸ್ ಬೈಕಿಗೆ ಯುವಕರು ಫಿದಾ.

ಹೋಂಡಾದ ಹೊಸ ಬೈಕ್ ಬಿಡುಗಡೆ, ಅಧಿಕ ಮೈಲೇಜ್.

Honda XL750 Transalp Bike: ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಲು ವಿವಿಧ ಮಾದರಿಯ ಬೈಕ್ ಗಳು ಲಗ್ಗೆ ಇಡುತ್ತಲೇ ಇವೆ. ಜನರು ಹೆಚ್ಚಾಗಿ ಇತ್ತೀಚಿಗೆ ಹೊಸ ಹೊಸ ಬೈಕ್ ಗಳ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ. ಇನ್ನು ದೇಶದ ಜನಪ್ರಿಯ ಬೈಕ್ ತಯಾರಾಕ ಕಂಪನಿಯಾದ HONDA ಇತ್ತೀಚಿಗೆ ಗ್ರಹಕರಿಗಾಗಿ ವಿಭಿನ್ನ ಮಾದರಿಯ ಬೈಕ್ ಗಳನ್ನು ಪರಿಚಯಿಸುತ್ತಿವೆ.

ಮಾರುಕಟ್ಟೆಯಲ್ಲೂ ಹೋಂಡಾ ಬೈಕ್ ಗಳು ಮೈಲೇಜ್ ವಿಚಾರವಾಗಿ ಹೆಚ್ಚು ಜನಪ್ರಿಯವಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ ಹೋಂಡಾ ಬೈಕ್ ಒಂದು ಪರಿಚಯವಾಗಿದೆ. ಗ್ರಾಹಕರ ಆಯ್ಕೆಗೆ ಮತ್ತೊಂದು ಮೈಲೇಜ್ ಬೈಕ್ ಸೇರಿಕೊಂಡಿದೆ. ಹೋಂಡಾದ ನೂತನ ಅಡ್ವೆಂಚರ್ ಬೈಕ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.

Honda XL750 Transalp Bike
Image Credit: Motorcyclenews

Honda XL750 Transalp
ಹೋಂಡಾ ಮೋಟಾರ್ಸ್ ಇಂಡಿಯಾ ತನ್ನ ನೂತನ Honda XL750 Transalp ಬೈಕ್ ಅನ್ನು ನವೆಂಬರ್ ನಲ್ಲಿಯೇ ಗ್ರಾಹಕರಿಗೆ ವಿತರಿಸಲು ನಿರ್ಧರಿಸಿದೆ. ರಾಸ್ ವೈಟ್ ಮತ್ತು ಮ್ಯಾಟರ್ ಬ್ಯಾಲಿಸ್ಟಿಕ್ ಬ್ಲಾಕ್ ಎನ್ನುವ ಎರಡು ಬಣ್ಣದ ಆಯ್ಕೆಯಲ್ಲಿ ನೀವು Honda XL750 Transalp ಬೈಕ್ ಅನ್ನು ಖರೀದಿಸಬಹುದು.

ಇನ್ನು ಕಂಪನಿಯು ಈ ಅಡ್ವೆಂಚರ್ ಬೈಕ್ ನಲ್ಲಿ 755cc ಟ್ವಿನ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ನೊಂದಿಗೆ 270 ಡಿಗ್ರಿ ಕ್ರ್ಯಾಕ್ ನಿಂದ ಚಲವಾಗುವ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ ಅನ್ನು 6 ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇನ್ನು ನೂತನ Honda XL750 Transalp ಬೈಕ್ ಪ್ರತಿ ಲೀಟರ್ ಗೆ ಸರಿಸುಮಾರು 23 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

Honda XL750 ಬೈಕ್ ನ ಬೆಲೆ ಎಷ್ಟಿದೆ..?
ಈ ಎಂಜಿನ್‌ನ ವೈಶಿಷ್ಟ್ಯಗಳಲ್ಲಿ ನಿಕಲ್-ಸಿಲಿಕಾನ್ ಕಾರ್ಬೈಡ್ ಕೋಟಿಂಗ್, ವೋರ್ಟೆಕ್ಸ್ ಫ್ಲೋ ಡಕ್ಟ್‌ಗಳು, ಥ್ರೊಟಲ್-ಬೈ-ವೈರ್ ಟೆಕ್, ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ (HSTC), ಎಂಜಿನ್ ಬ್ರೇಕಿಂಗ್ ಮತ್ತು ಮಲ್ಟಿಪಲ್ ರೈಡ್ ಮೋಡ್‌ಗಳು ಸೇರಿವೆ. ಹೊಸ ಹೋಂಡಾ XL750 Transalp ಬೈಕ್ ಸ್ಪೋರ್ಟ್, ಸ್ಟ್ಯಾಂಡರ್ಡ್, ರೈನ್, ಗ್ರಾವೆಲ್ ಮತ್ತು ಯೂಸರ್ ಎಂಬ ರೈಡ್ ಮೋಡ್‌ಗಳನ್ನು ಹೊಂದಿದೆ. ಹತ್ತು ಹಲವು ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ Honda XL750 Transalp ಬೈಕ್ ಗೆ 10.99 ಲಕ್ಷ ಎಕ್ಸ್ ಶೋ ರೂಮ್ ಬೆಲೆಯಾಗಿದೆ.

Join Nadunudi News WhatsApp Group

Honda XL750 Transalp Feature
Image Credit: Gaadiwaadi

Honda XL750 Transalp Feature
*5.0-inch TFT display
*Honda Smart Voice Control System (HSVCs)
*Emergency stop signal
*Automatic turn signal cancellation
*TFT display speedometer
*Tachometer
*Gear-position indicator
*Fuel gauge

Join Nadunudi News WhatsApp Group