Honor 5G: 48 ಘಂಟೆ ಬ್ಯಾಟರಿ ಸಾಮರ್ಥ್ಯ ಮತ್ತು 256 GB ಸ್ಟೋರೇಜ್, ಹೊಸ ಅಗ್ಗದ ಮೊಬೈಲ್ ಖರೀದಿಗೆ ಜನರ ಕ್ಯೂ.
ನೂತನ ಮಾದರಿಯ 5G ಸ್ಮಾರ್ಟ್ ಫೋನ್ ಪರಿಚಯಿಸಿದ Honor.
Honor Play 8T Smartphone: ಸದ್ಯ ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಫೋನ್ ಗಳು ಬಿಡುಗಡೆಯಾಗುತ್ತಿದ್ದಂತೆ ಇದೀಗ ದೇಶದ ಜನಪ್ರಿಯ ಮೊಬೈಲ್ ತಯಾರಕ ಕಂಪೆನಿಯಾದ Homor ತನ್ನ ನೂತನ ಮಾದರಿಯ ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಸದ್ಯ ದೇಶದಲ್ಲಿ 5G ಕ್ರಾಂತಿ ಸೃಷ್ಟಿಯಾಗಿದೆ. ವಿವಿಧ ಟೆಲಿಕಾಂ ನೆಟ್ವರ್ಕ್ ಗಳು ಗ್ರಾಹಕರಿಗೆ 5G ಸೇವೆಯನು ನೀಡುತ್ತಿದೆ. ಈ ನಿಟ್ಟಿನಲ್ಲಿ ಮೊಬೈಲ್ ತಯಾರಕ ಕಂಪನಿಗಳು 5G ಸೆಟ್ ಅನ್ನು ಪರಿಚಯಿಸಲು ಸಜ್ಜಾಗಿದೆ. ಸದ್ಯ ಮಾರುಕಟ್ಟೆಯಲ್ಲಿ 5G ಸೆಟ್ ಸ್ಮಾರ್ಟ್ ಫೋನ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನಬಹುದು. ಹೀಗಾಗಿ Honor ಇದೀಗ ನೂತನ ಮಾದರಿಯ 5G ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದೆ.
Honor Play 8T Smartphone
ಹೊನೋರ ಇದೀಗ ತನ್ನ ಹೊಚ್ಚ ಹೊಸ Honor Play 8T Smartphone ಅನ್ನು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಇನ್ನು ಸದ್ಯದಲ್ಲೇ ವಿಭಿನ್ನ ಫೀಚರ್ ಗಳಿರುವ ಈ Honor Play 8T Smartphone ಭಾರತೀಯ ಮಾರುಕಟ್ಟೆಗೆಗೂ ಲಗ್ಗೆ ಇಡಲಿದೆ. ಈ ಸ್ಮಾರ್ಟ್ ಫೋನ್ ನಲ್ಲಿ ಉತ್ತಮ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ನೀವು Honor Play 8T Smartphone ನಲ್ಲಿ 12GB RAM ಹಾಗೂ 256GB ಸ್ಟೋರೇಜ್ ಆಯ್ಕೆಯನ್ನು ನೋಡಬಹುದಾಗಿದೆ.
48 ದಿನ ಬ್ಯಾಟರಿ ಸಾಮರ್ಥ್ಯ ಮತ್ತು 50MP ಕ್ಯಾಮರಾ
Honor Play 8T Smartphone ಬರೋಬ್ಬರಿ 35W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂನಲಿಸಿದ್ದು 6000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇನ್ನು 50MP+ 2MP ಡ್ಯುಯೆಲ್ ಕ್ಯಾಮೆರಾ ಸೆಟಪ್ ನೊಂದಿಗೆ ಬರಲಿದ್ದು, ಉತ್ತಮ ಗುಣಮಟ್ಟದ ಸೆಲ್ಫಿಗಾಗಿ ಮುಂಭಾಗದಲ್ಲಿ 8MP ಸೆನ್ಸಾರ್ ಕ್ಯಾಮರಾವನ್ನು ಅಳವಡಿಸಲಾಗಿದೆ. ಈ ನೂತನ ಸ್ಮಾರ್ಟ್ ಫೋನ್ 3 ವರ್ಷದ ಬಳಿಕೆಯೊಂದಿಗೆ 48 ಘಂಟೆ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವುದು ವಿಶೇಷವಾಗಿದೆ. ಇನ್ನು ಈ ಸ್ಮಾರ್ಟ್ ಫೋನ್ ಬಳಕೆದಾರರ ಸುರಕ್ಷತೆಗಾಗಿ ಸೈಡ್ ನಲ್ಲಿ ಫಿಂಗರ್ ಫ್ರಿನ್ಟ್ ಸ್ಕ್ಯಾನರ್ ಅನ್ನು ಒಳಗೊಂಡಿದೆ.
Honor Play 8T Smartphone ಬೆಲೆ ಮತ್ತು ವಿಶೇಷತೇ
ಇನ್ನು Honor Play 8T Smartphone 6.8 ಇಂಚಿನ FHD ಡಿಸ್ಪ್ಲೇ ಹೊಂದಿದ್ದು, 90Hz ರಿಫ್ರೆಶ್ ರೆಟ್ ಪ್ಯಾನೆಲ್ ಅನ್ನು ಹೊಂದಿದೆ. ಇನ್ನು Honor Play 8T ಸ್ಮಾರ್ಟ್ಫೋನ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. ಸದ್ಯ 8GB RAM ಮತ್ತು 256GB Storage ಆಯ್ಕೆಯ ಸ್ಮಾರ್ಟ್ ಫೋನ್ ಗೆ ಮಾರುಕಟ್ಟೆಯಲ್ಲಿ 12,612 ರೂ. ಇದ್ದು, 12GB RAM ಮತ್ತು 256GB Storage ಆಯ್ಕೆಯ ಸ್ಮಾರ್ಟ್ ಫೋನ್ ಗೆ ಮಾರುಕಟ್ಟೆಯಲ್ಲಿ 14,786 ರೂ. ಆಗಿದೆ. ಕಡಿಮೆ ಬೆಲೆಯಲ್ಲಿ ಹೆಚ್ಚಿನ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವ ಬೆಸ್ಟ್ ಫೋನ್ ಇದಾಗಿದೆ.