HHB Movie: ಬಿಡುಗಡೆಯಾದ 12 ದಿನದಲ್ಲಿ ದಾಖಲೆ ನಿರ್ಮಾಣ ಮಾಡಿದ ಹಾಸ್ಟೆಲ್ ಹುಡುಗರು, ಭರ್ಜರಿ ಕಲೆಕ್ಷನ್.

ರಾಜ್ಯದಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಬಹಳ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ.

HHB Movie Collection: ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ಬಿಡುಗಡೆಗೊಂಡ ಅನೇಕ ಚಿತ್ರಗಳು ಹಿಟ್ ಆಗುತ್ತಿದೆ. ಸಿನಿಪ್ರಿಯರು ಪ್ರತಿಯೊಂದು ಚಿತ್ರವನ್ನು ಕೂಡ ಮೆಚ್ಚಿಕೊಳ್ಳುತ್ತಾದ್ದಾರೆ. ಇನ್ನು ಚಿತ್ರರಂಗಕ್ಕೆ ಹೊಸ ಹೊಸ ಪ್ರತಿಭೆಗಳು ಎಂಟ್ರಿ ಕೊಡುತ್ತಿದ್ದಾರೆ.

ಹೊಸ ನಾಯಕರು ನಟಿಸಿರುವ ಚಿತ್ರಗಳು ಬಹುತೇಕ ಸೋಲು ಕಾಣುತ್ತವೆ. ಆದರೆ ಇದೀಗ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಇದನ್ನು ಸುಳ್ಳು ಮಾಡಿದೆ. ಹೊಸ ಪರಿಚಯದ ನಟರು ನಟಿಸಿರುವ ಈ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಸದ್ದು ಮಾಡಿದೆ.

Hostel Hudugaru Bekagiddare movie is doing very good collection in the state.
Image Credit: Indiatoday

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ (Hostel Hudugaru Bekagiddaare Movie) 
ಇತ್ತೀಚೆಗಷ್ಟೇ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ವಿವಾದಕ್ಕೆ ಒಳಗಾಗಿತ್ತು. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ತಂಡಕ್ಕೆ ನಟಿ ರಮ್ಯಾ ಲೀಗಲ್ ನೋಟಿಸ್ ಕಳುಹಿಸಿ ಒಂದು ಕೋಟಿ ಹಣ ಪರಿಹಾರವನ್ನು ಕೇಳಿದ್ದರು. ಇದರಿಂದ ಚಿತ್ರದ ಬಿಡುಗಡೆಗೆ ತೊಂದರೆ ಉಂಟಾಗಿತ್ತು.

ಆದರೆ ಕೋರ್ಟ್ ರಮ್ಯಾ ಅವರ ನೋಟಿಸ್ ಅನ್ನು ತಿರಸ್ಕರಿಸಿ ಚಿತ್ರ ತಂಡದ ಮೇಲಿದ್ದ ಆರೋಪವನ್ನು ತೆಗೆದುಹಾಕಿದೆ. ಹೀಗಾಗಿ ಜುಲೈ 21 ರಂದು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಭರ್ಜರಿಯಾಗಿ ಬಿಡುಗಡೆಗೊಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇನ್ನು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಭರ್ಜರಿ ಯಶಸ್ಸು ಕಾಣುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ವಿಶೇಷ ಗಳಿಕೆ ಮಾಡಿದೆ.

HHB Movie Collection updates
Image Credit: News9live

ಬಿಡುಗಡೆಯಾದ ಹತ್ತೇ ದಿನದಲ್ಲಿ ದಾಖಲೆ ನಿರ್ಮಾಣ ಮಾಡಿದ ಹಾಸ್ಟೆಲ್ ಹುಡುಗರು
ಹಾಸ್ಟೆಲ್ ನಲ್ಲಿ ನಡೆಯುವ ತಮಾಷೆ , ಜಗಳ ಎಲ್ಲ ಕಾನ್ಸೇಫ್ಟ್ ಗಳ ಆಧಾರಿತ ಚಿತ್ರ ಇದಾಗಿದ್ದು ಹಾಸ್ಟೆಲ್ ನಲ್ಲಿಯೇ ಬಹುತೇಕ ಚಿತ್ರದ ಚಿತ್ರೀಕರಣ ನಡೆದಿದೆ. ಹಾಸ್ಟೆಲ್ ಹುಡುಗರು ಹೇಗೆ ಇರುತ್ತಾರೆ, ಯಾವ ರೀತಿ ಕೀಟಲೆ ಮಾಡುತ್ತಾರೆ ಹಾಗು ಹಾಸ್ಟೆಲ್ ವಾರ್ಡನ್ ಹಾಗು ಹುಡುಗರ ನಡುವಿನ ಜಗಳ ಇವೆಲ್ಲದರ ಬಗ್ಗೆ ಚಿತ್ರದಲ್ಲಿ ಬಹಳ ತಮಾಷೆಯಾಗಿ ತೋರಿಸಲಾಗಿದೆ.

Join Nadunudi News WhatsApp Group

ಬಿಡುಗಡೆಗೊಂಡ ಈ ಚಿತ್ರ ಕೇವಲ 13 ದಿನಗಳಲ್ಲಿ ದಾಖಲೆಯ ಕಲೆಕ್ಷನ್ ಮಾಡಿದೆ. ಬರೋಬ್ಬರಿ 15 ರಿಂದ 18 ಕೋಟಿ ಹಣ ಗಳಿಸುವ ಮೂಲಕ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ವಿಶೇಷ ದಾಖಲೆ ಬರೆದಿದೆ. ಚಿತ್ರತಂಡ ಯಶಸ್ಸಿನ ಕುಶಿಯಲ್ಲಿದ್ದು, ಈಗಲೂ  ಕೂಡ ಚಿತ್ರ ತೆರೆಕಾಣುತ್ತಿದೆ.

ಇನ್ನು ಚಿತ್ರ ಬಿಡುಗಡೆಗೂ ಮುನ್ನ ಸಣ್ಣ ವಿವಾದಕ್ಕೆ ಸಿಲಿಕಿದ್ದರು ಕೂಡ ತೆರೆಕಂಡು ಭರ್ಜರಿ ಯಶಸ್ಸು ಗಳಿಸಿದೆ. ಇನ್ನು ಕೂಡ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಪ್ರದರ್ಶನಗೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕಲೆಕ್ಷನ್ ಮಾಡಲಿದೆ.

Join Nadunudi News WhatsApp Group