Hostel Hudugaru Collection: ಭರವಸೆ ಮೂಡಿಸಿದ್ದ ಹಾಸ್ಟೆಲ್ ಹುಡುಗರು ಸಿನೆಮಾದ ಕಲೆಕ್ಷನ್ ಎಷ್ಟಾಗಿದೆ ಗೊತ್ತಾ?

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ ಎನ್ನುವುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

Hostel Hudugaru Bekagiddare Movie Collection: ರಾಜ್ಯದ್ಯಂತ ಈಗಾಗಲೇ ಹೊಸ ಹುಡುಗರ ಸಿನಿಮಾಗಳ ಸುದ್ದಿ ಜೋರಾಗಿ ನಡೆಯುತ್ತಿದೆ ಹೌದು ನಾವು ಮಾತನಾಡುತ್ತಿರುವುದು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ(Hostel Hudugaru Bekagiddare) ಸಿನಿಮಾದ ಬಗ್ಗೆ. ಈ ಸಿನಿಮಾ ಈಗಾಗಲೇ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆ ಕಂಡು ಸಖತ್ ಸದ್ದು ಮಾಡುತ್ತಿದ್ದು ಇದರ ಕಲೆಕ್ಷನ್ ವಿಚಾರದ ಬಗ್ಗೆ ಇಂದಿನ ಆರ್ಟಿಕಲ್ ನಲ್ಲಿ ನಾವು ನಿಮಗೆ ಮಾತನಾಡಲು ಹೊರಟಿದ್ದೇವೆ. ಹಾಗಿದ್ದರೆ ಬನ್ನಿ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ ಎನ್ನುವುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

Hostel hudugaru collection
Image Source: Filmibeat

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ

ನಿತಿನ್ ಕೃಷ್ಣಮೂರ್ತಿಯವರ ನಿರ್ದೇಶನದಲ್ಲಿ ಮೂಡಿ ಬಂದಿರುವಂತಹ ಈ ಸಿನಿಮಾ ಈಗಾಗಲೇ ದೇಶ ವಿದೇಶಗಳಲ್ಲಿ ಕೂಡ ಬಿಡುಗಡೆಯಾಗಿದ್ದು ಚಿಕ್ಕ ಬಜೆಟ್ ಸಿನಿಮಾ ಆಗಿದ್ದರೂ ಕೂಡ ದೊಡ್ಡ ಮನರಂಜನೆ ನೀಡುವಂತಹ ಕಂಟೆಂಟ್ ಸಿನಿಮಾ ಆಗಿದೆ ಎಂದು ಹೇಳಬಹುದು. ಒಂದು ಸಮಯದಲ್ಲಿ ಬಿಡುಗಡೆಯಾಗಿದ್ದ ಕಿರಿಕ್ ಪಾರ್ಟಿ(Kirik Party) ಸಿನಿಮಾ ಕೂಡ ಇದೇ ರೀತಿ ನಿಮಗೆಲ್ಲರಿಗೂ ತಿಳಿದಿರಬಹುದು ಯುವಕರು ಎಂಜಾಯ್ ಮಾಡುವಂತಹ ಕಥೆಯನ್ನು ನೀಡಿ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆಗಿತ್ತು. ಸಿನಿಮಾ ಬಿಡುಗಡೆಗು ಮುನ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರಿಂದ ಪ್ರಾರಂಭವಾಗಿ ರಕ್ಷಿತ್ ಶೆಟ್ಟಿ ರವರೆಗೂ ಕೂಡ ಪ್ರತಿಯೊಬ್ಬರು ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ಭಾಗವಹಿಸಿದ್ದರು.

ಈ ಸಿನಿಮಾದ ಪ್ರಮೋಷನ್ ವಿಡಿಯೋಗಳು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಯಾವ ಸಿನಿಮಾಗೂ ಕೂಡ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಪ್ರಮೋಷನ್ ನೀಡಿರಲಿಲ್ಲ ಎಂದು ಹೇಳಬಹುದಾಗಿದೆ. ಇತ್ತೀಚೆಗೆ ಬಿಡುಗಡೆಗೊ ಮುನ್ನ ರಮ್ಯಾ ಅವರು ಸಿನಿಮಾದ ಕ್ರೋಮೋ ದಲ್ಲಿ ಮಾತ್ರ ನಟಿಸಿದ್ದರು ಆದರೆ ತನ್ನ ದೃಶ್ಯಗಳನ್ನು ಸಿನಿಮಾದಲ್ಲಿ ಕೂಡ ಬಳಸಲಾಗಿದೆ ಎಂಬುದಾಗಿ ಕೋರ್ಟ್ ಆರ್ಡರ್ ಅನ್ನು ಕೂಡ ತರುವಂತಹ ಪ್ರಯತ್ನವನ್ನು ಮಾಡಿದ್ರು ಆದ್ರೆ ಕೋರ್ಟಿನಲ್ಲಿ ಕೂಡ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ತಂಡ ಗೆದ್ದು ಸಿನಿಮಾವನ್ನು ನಿಗದಿತ ದಿನಾಂಕದಂದು ಬಿಡುಗಡೆ ಮಾಡಿತು. ರಕ್ಷಿತ್ ಶೆಟ್ಟಿ(Rakshit Shetty) ಅವರು ಈ ಸಿನಿಮಾವನ್ನು ಪ್ರೆಸೆಂಟ್ ಮಾಡಿದ್ದರು. ಒಂದಲ್ಲ ಸದ್ದು ಮಾಡಿರುವಂತಹ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

Hostel hudugaru collection
Image Source: Filmibeat

ಹಾಸ್ಟೆಲ್ ಹುಡುಗರು ಸಿನೆಮಾದ ಕಲೆಕ್ಷನ್

Join Nadunudi News WhatsApp Group

ಹೌದು ಮಿತ್ರರೇ, ಜುಲೈ 21 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕೊಂಡಿರುವಂತಹ ಈ ಸಿನಿಮಾ ಈಗಾಗಲೇ ಲಾಭದಲ್ಲಿದೆ ಎಂಬುದಾಗಿ ಕೂಡ ಸಿನಿಮಾ ತಂಡದ ಮೂಲಗಳಿಂದ ತಿಳಿದುಬಂದಿದ್ದು ಮೂರು ದಿನಗಳ ಅವಧಿಯಲ್ಲಿ ಸರಿಸುಮಾರು 5 ಕೋಟಿಗಳ ಗ್ರಾಸ್ ಕಲೆಕ್ಷನ್ ಮಾಡಿದೆ ಎಂಬುದಾಗಿ ತಿಳಿದು ಬಂದಿದೆ. ಎಲ್ಲಾ ಕಡೆ ಸಿನಿಮಾದ ಬಗ್ಗೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದ್ದು ಖಂಡಿತವಾಗಿ ಕಿರಿಕ್ ಪಾರ್ಟಿ ರೇಂಜ್ ನಲ್ಲಿ ಬ್ಲಾಕ್ಬಸ್ಟರ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಎಲ್ಲರೂ ಕೂಡ ಮಾತನಾಡಿಕೊಳ್ಳುತ್ತಿದ್ದಾರೆ. ನೀವು ಕೂಡ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ನೋಡಿದ್ರೆ ಸಿನಿಮಾ ನಿಮ್ಮ ಪ್ರಕಾರ ಹೇಗಿದೆ ಎಂಬ ಪ್ರಾಮಾಣಿಕ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Join Nadunudi News WhatsApp Group