Actress Ramya: ಕೇಸ್ ಹಾಕಿ ಸೋತ ರಮ್ಯಾಗೆ ಮುಲಾಜಿಲ್ಲದೆ ಟಾಂಗ್ ಕೊಟ್ಟ ಹಾಸ್ಟೆಲ್ ಹುಡುಗರು, ಸಿಕ್ಕಾಪಟ್ಟೆ ವೈರಲ್.
ಹಾಸ್ಟೆಲ್ ಹುಡುಗರು ಸಿನಿಮಾ ತಂಡಕ್ಕೆ ಲೀಗಲ್ ನೋಟಿಸ್ ನೀಡುವ ಮೂಲಕ ಮತ್ತೆ ವಿವಾದಕ್ಕೆ ಒಳಗಾದ ನಟಿ ರಮ್ಯಾ.
Ramya Case On Hostel Hudugaru Bekagiddare: ನಟಿ ರಮ್ಯಾ (Ramya) ಇತ್ತೀಚಿಗೆ ಹೆಚ್ಚಾಗಿ ಟ್ರೊಲ್ ಗೆ ಒಳಗಾಗುತ್ತಿದ್ದಾರೆ. ವೀಕೆಂಡ್ ವಿಥ್ ರಮೇಶ್ ಸೀಸನ್ 5 ರಲ್ಲಿ ಮೊದಲನೇ ಅತಿಥಿಯಾಗಿ ಬಂದ ನಟಿ ರಮ್ಯಾ ಇಂಗ್ಲಿಷ್ ನಲ್ಲಿಯೇ ಮಾತನಾಡಿ ಸಾಕಷ್ಟು ಟ್ರೊಲ್ ಗೆ ಒಳಗಾಗಿದ್ದರು. ಇದೀಗ ಹಾಸ್ಟೆಲ್ ಹುಡುಗರು ಸಿನಿಮಾ ತಂಡಕ್ಕೆ ಲೀಗಲ್ ನೋಟಿಸ್ ನೀಡುವ ಮೂಲಕ ಮತ್ತೆ ವಿವಾದಕ್ಕೆ ಒಳಗಾಗಿದ್ದಾರೆ.
ಇಂದು ರಿಲೀಸ್ ಆದ ಹಾಸ್ಟೆಲ್ ಹುಡುಗರು ಸಿನಿಮಾ
ಬಹುನಿರೀಕ್ಷಿತ ಹಾಸ್ಟೆಲ್ ಹುಡುಗರು ಸಿನಿಮಾ ಇಂದು ರಿಲೀಸ್ ಆಗಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದ ರಮ್ಯಾ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸುವ ಮೂಲಕ ಬಿಡುಗಡೆಯ ಸನಿಹದಲ್ಲಿರುವ ಚಿತ್ರತಂಡಕ್ಕೆ ಶಾಕ್ ನೀಡಿದ್ದರು.
ರಮ್ಯಾ ತನ್ನ ದೃಶ್ಯಗಳ ವಿಡಿಯೋ ಹಾಗು ಫೋಟೋಗಳನ್ನು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡ ಅನುಮತಿ ಇಲ್ಲದೆ ಬಳಸಿಕೊಂಡಿದೆಯೆಂದು ಆರೋಪಿಸಿ ಒಂದು ಕೋಟಿ ರೂಪಾಯಿ ಪರಿಹಾರ ನೀಡುವಂತೆ ಒತ್ತಾಯಿಸಿ ನೋಟಿಸ್ ಕಳುಹಿಸಿದ್ದರು.
ರಮ್ಯಾಗೆ ಟಾಂಗ್ ಕೊಟ್ಟ ಹಾಸ್ಟೆಲ್ ಹುಡುಗರು ಚಿತ್ರತಂಡ
ಈ ಕಾರಣದಿಂದ ನಿನ್ನೆ ಸಂಜೆಯೇ ನಡೆಯಬೇಕಿದ್ದ ಚಿತ್ರದ ಸೆಲಬ್ರೆಟಿ ಪ್ರೀಮಿಯರ್ ಶೋ ಸಹ ಕ್ಯಾನ್ಸಲ್ ಆಗಿ ಚಿತ್ರ ಬಿಡುಗಡೆಯಾಗುವುದರಲ್ಲಿ ಗೊಂದಲ ಮೂಡಿತ್ತು. ಈ ಗೊಂದಲಕ್ಕೆ ಕೋರ್ಟ್ ಉತ್ತರವನ್ನು ನೀಡಿದ್ದು ನಿನ್ನೆ ಮಧ್ಯಾಹ್ನದ ವೇಳೆಗೆ ಹಾಸ್ಟೆಲ್ ಹುಡುಗರು ಚಿತ್ರವನ್ನು ರಮ್ಯಾ ದೃಶ್ಯಗಳಿಗೆ ಕತ್ತರಿ ಹಾಕದೆ ಬಿಡುಗಡೆ ಮಾಡಬಹುದು ಎಂದು ತೀರ್ಪನ್ನು ನೀಡಿ ಹಾಸ್ಟೆಲ್ ಹುಡುಗರ ಕೈ ಹಿಡಿದಿದೆ.
ಇನ್ನು ಕೇಸ್ ಹಾಕಿದ್ದ ರಮ್ಯಾಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೊಲ್ ಆಗುತ್ತಿದೆ. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡ ಸಹ ತಮ್ಮ ಚಿತ್ರದ ಬಿಡುಗಡೆಗೆ ತೊಂದರೆ ಮಾಡಿದ ರಮ್ಯಾಗೆ ರಾಜ್ ಕುಮಾರ್ ನಟನೆಯ ಬಹಾದ್ದೂರ್ ಗಂಡು ಸಿನಿಮಾ ಮುತ್ತಿನಂಥ ಮಾತೊಂದು ಗೊತ್ತೇನಮ್ಮ ಹಾಡನ್ನು ಹಾಡುವ ಮೂಲಕ ಟಾಂಗ್ ನೀಡಿದ್ದಾರೆ.