Street Vendors: ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ಗುಡ್ ಕೊಟ್ಟ ಮೋದಿ ಸರ್ಕಾರ, ಸ್ವಂತ ಮನೆಗೆ ಈಗಲೇ ಅರ್ಜಿ ಸಲ್ಲಿಸಿ.
ಬೀದಿ ಬದಿ ವ್ಯಾಪಾರಸ್ಥರಿಗೆ ವಸತಿ ಸೌಲಭ್ಯ, ಅರ್ಜಿದಾರರ ಅರ್ಹತೆಗಳೇನು..?
Housing Scheme For Street Vendors: ದೇಶದಲ್ಲಿ ಬಡ ಜನರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ (Central Government) ಸಾಕಷ್ಟು ಯೋಜನೆನ್ನು ಪರಿಚಯಿಸುತ್ತಿದೆ. ದೇಶದಾ ಬಡ ಜನರನ್ನು, ನಿರ್ಗತಿಕರನ್ನು ಆರ್ಥಿಕವಾಗಿ ಸಬಲರನ್ನಗಿಸುವುದು ಸರ್ಕಾರದ ಉದ್ದೇಶವಾಗಲಿದೆ ಎನ್ನಬಹುದು. ಬಡವರ ಆರ್ಥಿಕ ನೆರವಿಗಾಗಿ ಕೇಂದ್ರ ಸರ್ಕಾರ ಈಗಾಗಲೇ ವಿವಿಧ ಯೋಜನೆಯನ್ನು ಪರಿಚಯಿಸುತ್ತಿದೆ.
ಆರ್ಥಿಕವಾಗಿ ಹಿಂದುಳಿದವರಿಗೆ ಸ್ವಂತ ವ್ಯಾಪಾರಕ್ಕಾಗಿ ಸಾಲ ಸೌಲಭ್ಯ, ನಿರ್ಗತಿಕರಿಗೆ PMAY ಯೋಜನೆಯಡಿ ಮನೆ ನಿರ್ಮಾಣ ಹೀಗೆ ಇನ್ನಿತ ಸೌಲಭ್ಯವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಸದ್ಯ ಕೇಂದ್ರ ಸರಕಾರ ಬೀದಿ ಬದಿ ವ್ಯಾಪಾರಿಗಳಿಗಾಗಿ ಹೊಸ ಯೋಜನೆಯನ್ನು ಪರಿಚಯಿಸಲು ಮುಂದಾಗಿದೆ.
ಬೀದಿ ಬದಿ ವ್ಯಾಪಾರಿಗಳಿಗಾಗಿ ಕೇಂದ್ರದ ಹೊಸ ಯೋಜನೆ
ಸದ್ಯ ಕೇಂದ್ರ ಸರ್ಕಾರ ಬೀದಿ ಬದಿಯ ವ್ಯಪಾರಿಗಳಿಗೆ ಸಹಾಯಧನ ನೀಡಲು ಮುಂದಾಗಿದೆ. ವಸತಿ ರಹಿತ ಬೀದಿ ಬದಿ ವ್ಯಾಪಾರಿಗಳಿಗೆ ವಸತಿ ಸೌಲಭ್ಯ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. NMDC ಹಾಗೂ CSR ಅನುದಾನದಡಿ ಪ್ರೋತ್ಸಹಧನ ಹಾಗೂ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ವಸತಿ ರಹಿತ ಬೀದಿ ಬದಿ ವ್ಯಾಪಾರಿಗಳಿಗೆ ವಸತಿ ಸೌಲಭ್ಯ ಕಲ್ಪಿಸಿ ಕೊಡಲು ಸರ್ಕಾರ ಯೋಜನೆ ಹೂಡಿದೆ.
ಬೀದಿ ಬದಿ ವ್ಯಾಪಾರಸ್ಥರಿಗೆ ವಸತಿ ಸೌಲಭ್ಯ
ವಸತಿ ಇಲ್ಲದೆ ಬೀದಿ ಬಾಡಿ ವ್ಯಾಪಾರವನ್ನು ನಡೆಸುತ್ತಿರುವವರಿಗೆ ಕೇಂದ್ರ ಸರ್ಕಾರ ಇದೀಗ ವಸತಿ ಸೌಲಭ್ಯ ನೀಡಲು ಮುಂದಾಗಿದೆ. ವಸತಿ ಯೋಜನೆಯಡಿ ಅರ್ಹರಿಗೆ ಸರ್ಕಾರ ಅರ್ಜಿ ಅಹ್ವಾನ ಮಾಡಿದೆ. ವಸತಿ ಸೌಲಭ್ಯ ಪಡೆಯಲು ಇಚ್ಛಿಸುವವರು November 6 ರೊಳಗೆ ಅಗತ್ಯ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬಹುದು. ಸದ್ಯ ಕೇಂದ್ರ ಈ ಯೋಜನೆಯ ಲಾಭ ಪಡೆಯಲು ಯಾರು ಅರ್ಹರು? ಎನ್ನುವ ಬಗ್ಗೆ ವಿವರ ಇಲ್ಲಿದೆ.
ಯೋಜನೆಯ ಅರ್ಜಿದಾರರ ಅರ್ಹತೆಗಳೇನು..?
*ಅರ್ಜಿದಾರರು ವಸತಿ ರಹಿತರಾಗಿರಬೇಕು ಹಾಗು ನಗರಪ್ರದೇಶ ನಿವಾಸಿ ಆಗಿರಬೇಕು.
*ಬೀದಿ ಬದಿಯ ವ್ಯಾಪಾರಸ್ಥ ಗುರುತಿನ ಚೀಟಿ ಹೊಂದಿರಬೇಕು ಅಥವಾ ಪಾಲಿಕೆಯಿಂದ ಪಡೆಯಲಾದ LOR ಪ್ರಮಾಣಪತ್ರ ಹೊಂದಿರಬೇಕು.
*ವಾರ್ಷಿಕ ಆದಾಯ ಮೂರು ಲಕ್ಷ ಮೀರಿರಬಾರದು.
*ಫಲಾನುಭವಿಗಳು ಬ್ಯಾಂಕ್ ಸಾಲ ಪಾವತಿಸುವುದು ಹಾಗೂ ಬ್ಯಾಂಕ್ ಸಾಲ ಮರುಪಾವತಿ ಮಾಡಲು ಅರ್ಹರಾಗಿರಬೇಕು.
*ಇನ್ನು ರೂ. 90 ಸಾವಿರ ಆದಾಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು.