Ads By Google

Fake Pan Card: ನಿಮ್ಮ ಪಾನ್ ಕಾರ್ಡ್ ನಕಲಿ ಆಗಿರಹುದು, ಈ ವಿಧಾನದ ಮೂಲಕ ಇಂದೇ ಪರಿಶೀಲಿಸಿಕೊಳ್ಳಿ.

fake pan card identification
Ads By Google

Fake pan Card Identification: ಈಗಾಗಲೇ ಆಧಾರ್ ಕಾರ್ಡ್ (Aadhar Card) ಜೊತೆ ಪಾನ್ ಕಾರ್ಡ್ (Pan Card) ಲಿಂಕ್ ಮಾಡಲು ಸರ್ಕಾರ ದಂಡ ವಿಧಿಸಿದೆ. ಹೆಚ್ಚಿನ ಪ್ರಮಾಣದ ದಂಡ ಕಟ್ಟಬೇಕು ಎನ್ನುವ ಭೀತಿಯಲ್ಲಿ ಜನಸಾಮಾನ್ಯರು ಇದೀಗ ಪ್ಯಾನ್ ಆಧಾರ್ ಲಿಂಕ್ ಮಾಡುತ್ತಿದ್ದಾರೆ.

ಈಗಾಗಲೇ ಪ್ಯಾನ್ ಆಧಾರ್ ಜೋಡಣೆಗೆ 1.000 ದಂಡ ಕಟ್ಟಬೇಕಾಗುತ್ತಿದೆ. ಇತ್ತೀಚಿಗೆ ನಕಲಿ ಪ್ಯಾನ್ ಕಾರ್ಡ್ ಗಳು ಬೆಳಕಿಗೆ ಬಂದಿವೆ. ನೀವು ಬಳಸುತ್ತಿರುವ ಪ್ಯಾನ್ ಕಾರ್ಡ್ ಅಸಲಿಯೋ ನಕಲಿಯೋ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳಿ. ಈ ಕೆಳಗಿನ ಹಂತಗಳನ್ನು ಮಾಡುವ ಮೂಲಕ ನಿಮ್ಮ ಪ್ಯಾನ್ ಕಾರ್ಡ್ ಅಸಲಿಯೋ ನಕಲಿಯೋ ಎಂದು ಪರಿಶೀಲಿಸಿಕೊಳ್ಳಬಹುದು.

Image Credit: abplive

ಪ್ಯಾನ್ ಕಾರ್ಡ್ ಅಸಲಿಯೋ ನಕಲಿಯೋ ಎನ್ನುದನ್ನು ಪರಿಶೀಲಿಸುವ ಹಂತಗಳು 

*ಆದಾಯ ತೆರಿಗೆ ಇಲಾಖೆಯ ಇ- ಫೈಲಿಂಗ್ ಪೋರ್ಟಲ್ (ಪ್ಯಾನ್ ಕಾರ್ಡ್ ಇ- ಫೈಲಿಂಗ್) ಗೆ ಭೇಟಿ ನೀಡಬೇಕು.

*ಅಲ್ಲಿ ಮೇಲ್ಭಾಗದಲ್ಲಿರುವ ನಿಮ್ಮ ಪ್ಯಾನ್ ವಿವರಗಳನ್ನು ಪರಿಶೀಲಿಸಿ ಲಿಂಕ್ ಅನ್ನು ಕ್ಲಿಕ್  ಮಾಡಬೇಕು.

*ನಂತರ ಬಳಕೆದಾರರು ಪ್ಯಾನ್ ಕಾರ್ಡ್ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ.

*ಅಲ್ಲಿ ನಿಮಗೆ ಪ್ಯಾನ್ ಸಂಖ್ಯೆ, ಪ್ಯಾನ್ ನ ಹೆಸರು, ಹುಟ್ಟಿದ ದಿನಾಂಕ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.

Image Credit: news18

*ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿದ ನಂತರ ಭರ್ತಿ ಮಾಡಿದ ಮಾಹಿತಿಯು ನಿಮ್ಮ ಪ್ಯಾನ್ ಕಾರ್ಡ್ ಗೆ ಹೊಂದಿಕೆ ಆಗುತ್ತದೆಯೇ ಅಥವಾ ಇಲ್ಲವೇ ಎಂಬ ಸಂದೇಶವು ಪೋರ್ಟಲ್ ನಲ್ಲಿ ಕಾಣಿಸುತ್ತದೆ.

ಈ ರೀತಿಯಾಗಿ ಮಾಡುವ ಮೂಲಕ ನೀವು ನಿಮ್ಮ ಪ್ಯಾನ್ ಕಾರ್ಡ್ ಅಸಲಿಯೋ ನಕಲಿಯೋ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು. ಕೇವಲ ಒಂದೇ ನಿಮಿಷದಲ್ಲಿ ನಿಮ್ಮ ಪ್ಯಾನ್ ಕಾರ್ಡ್ ನ ಅಸಲೀಯತ್ತನ್ನು ಪರಿಶೀಲಿಸಿಕೊಳ್ಳಬಹುದು.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in