HSRP Update: HSRP ನಂಬರ್ ಪ್ಲೇಟ್ ಕುರಿತಂತೆ ಇನ್ನೊಂದು ಬಿಗ್ ಅಪ್ಡೇಟ್, ದಂಡ ಕಟ್ಟಲು ತಯಾರಾಗಿ.

HSRP ನಂಬರ್ ಪ್ಲೇಟ್ ಕುರಿತಂತೆ ಇನ್ನೊಂದು ಬಿಗ್ ಅಪ್ಡೇಟ್

HSRP New Update: ಇನ್ನು 2019 ಏಪ್ರಿಲ್ 1 ರ ಮೊದಲು ನೋಂದಣಿಯಾಗಿರುವ ವಾಹನ ಮಾಲೀಕರು HSRP ಅಳವಡಿಕೆ ಮಾಡುವುದು ಅಗತ್ಯವಾಗಿದೆ. 2019 ರ ಏಪ್ರಿಲ್ 1 ಕ್ಕಿಂತ ಮೊದಲು ನೋಂದಣಿಯಾದ ವಾಹನಗಳು ನಿಗದಿಪಡಿಸಿದ ಸಮಯದೊಳಗೆ High Security Registration Plate (HSRP) ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ.

HSRP Booking ಗಾಗಿ ಸರ್ಕಾರ ಆನ್ಲೈನ್ ಮೂಲಕ ಅವಕಾಶವನ್ನು ನೀಡಿದೆ. ಸದ್ಯ ಎರಡು ಬಾರಿ ದಿನಾಂಕ ವಿಸ್ತರಣೆ ಮಾಡಿರುವ ಸರ್ಕಾರ ಇದೀಗ ಗಡುವು ಹತ್ತಿರವಾಗುತ್ತಿದ್ದಂತೆ ವಾಹನ ಮಾಲೀಕರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ.

HSRP New Update
Image Credit: Paytm

HSRP ನಂಬರ್ ಪ್ಲೇಟ್ ಕುರಿತಂತೆ ಇನ್ನೊಂದು ಬಿಗ್ ಅಪ್ಡೇಟ್
ದೇಶದಲ್ಲಿ 2019 ರ ಹಿಂದಿನ ವರ್ಷದಿಂದ 1.70 ಕೋಟಿ ವಾಹನಗಳು ನೋಂದಣಿಯಾಗಿವೆ. ಇಷ್ಟು ವಾಹನಗಳು ಇನ್ನು ಕೂಡ HSRP ಅಳವಡಿಕೆ ಮಾಡಿಕೊಂಡಿಲ್ಲ. ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆಯು ಫೆಬ್ರವರಿಯಿಂದ ಮತ್ತೆ ಮೂರು ತಿಂಗಳುಗಳು HSRP ಅಳವಡಿಕೆಗೆ ಸಮಯಾವಕಾಶವನ್ನು ನೀಡಿದೆ. ಆದರೂ ವಾಹನ ಮಾಲೀಕರು ಇದರ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ.

ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಸಾರಿಗೆ ಇಲಾಖೆ HSRP Number Plate ಇಲ್ಲದ ವಾಹನಗಳಿಗೆ ಬಾರಿ ದಂಡ ವಿಧಿಸಲು ತೀರ್ಮಾನಿಸಿದೆ. ಜೂನ್ 1 ರಿಂದ ಎಲ್ಲಾ ವಾಹನ ಸವಾರರಿಗೆ ಹೊಸ HSRP ನಿಯಮ ಅನ್ವಯವಾಗಲಿದೆ. HSRP ನೋಂದಣಿ ಫಲಕಗಳು ಹೆಚ್ಚು ಸುರಕ್ಷಿತವಾಗಿರುತ್ತವೆ ಮತ್ತು ಅವುಗಳನ್ನು ಬದಲಾಯಿಸಲು ಅಥವಾ ತಿದ್ದಲು ಸಾಧ್ಯವಾಗದ ಕಾರಣ ವಾಹನ ಮಾಲೀಕರು ತಮ್ಮ ವಾಹನಗಳಿಗೆ HSRP ಅಳವಡಿಸಿದರೆ ಹೆಚ್ಚು ಅನುಕೂಲವಾಗಲಿದೆ.

HSRP Fine
Image Credit: Hindustantimes

ದಂಡ ಕಟ್ಟಲು ತಯಾರಾಗಿ
HSRP Number Plate ಇಲ್ಲದ ವಾಹನ ರಸ್ತೆಗಿಳಿದರೆ 500 ರಿಂದ 1000 ರೂ. ದಂಡ ವಿಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. HSRP Number ಇಲ್ಲದೆ ನಿಮ್ಮ ವಾಹನವನ್ನು ರಸ್ತೆಗಿಳಿಸುವ ಮುನ್ನ ದಂಡದ ಬಗ್ಗೆ ಯೋಚಿಸುವುದು ಉತ್ತಮ. ಮೇ 31 ,  2024 ರವರೆಗೆ ಮಾಲೀಕರಿಗೆ HSRP ಅಳವಡಿಕೆಗೆ ಸಮಯಾವಕಾಶವನ್ನು ನೀಡಲಾಗಿದೆ. ಆದಷ್ಟು ಬೇಗ ನಿಮ್ಮ ವಾಹನಕ್ಕೆ HSRP ಅಳವಡಿಸಿಕೊಳ್ಳುವ ಮೂಲಕ ದಂಡ ಪಾವತಿಯಿಂದ ತಪ್ಪಿಸಿಕೊಳ್ಳಿ. ಜೂನ್ 1 ರಿಂದ ಎಲ್ಲಾ ವಾಹನ ಸವಾರರು HSRP Number Plate ಇಲ್ಲದೆ ಇದ್ದರೆ ದಂಡವನ್ನು ಪಾವತಿಸಬೇಕಾಗುತ್ತದೆ ಎನ್ನುವುದು ನಿಮಗೆ ತಿಳಿದಿರಲಿ.

Join Nadunudi News WhatsApp Group

HSRP Number Plate Update
Image Credit: Jagran

Join Nadunudi News WhatsApp Group