Ads By Google

HSRP Fine: HSRP ನಂಬರ್ ಪ್ಲೇಟ್ ಹಾಕಿಸದಿದ್ದರೆ ಎಷ್ಟು ದಂಡ ಕಟ್ಟಬೇಕು, ಇಲ್ಲಿದೆ ದಂಡದ ಸಂಪೂರ್ಣ ವಿವರ

HSRP Number Plate Fine details

Image Credit: Original Source

Ads By Google

HSRP Number Plate Fine: ಸದ್ಯ ದೇಶದಲ್ಲಿ 2019 ರ ಏಪ್ರಿಲ್ 1 ಕ್ಕಿಂತ ಮೊದಲು ನೋಂದಣಿಯಾದ ವಾಹನಗಳು ಫೆಬ್ರವರಿ 17 ರೊಳಗೆ High Security Registration Plate (HSRP) ಅಳವಡಿಸಿಕೊಳ್ಳುವ ಬಗ್ಗೆ ಸುದ್ದಿ ವೈರಲ್ ಆಗುತ್ತಿದೆ.

ಜನರು 2019 ರ ಮೊದಲು ನೋಂದಣಿ ಮಾಡಿಕೊಂಡ ವಾಹನಗಳಿಗೆ HSRP ಅಳವಡಿಸುವುದು ಕಡ್ಡಾಯ. ಸದ್ಯ HSRP ಅಳವಡಿಕೆಯ ಬಗ್ಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ನೀವು ಇನ್ನು ಕೂಡ HSRP ಅಳವಡಿಸದಿದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ.

Image Credit: Sentinelassam

ವಾಹನ ಮಾಲೀಕರೇ ಎಚ್ಚರ…!
ಈ ಹಿಂದೆ HSRP ಅಳವಡಿಕೆಗೆ ನವೆಂಬರ್ 17 ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಆದರೆ ದೇಶದಲ್ಲಿರುವ ಎಲ್ಲ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಕೆ ಆಗದೆ ಇರುವ ಕಾರಣ ಸಾರಿಗೆ ಇಲಾಖೆ ಇನ್ನಷ್ಟು ಸಮಯಕ್ವಕಾಶವನ್ನು ನೀಡಿತ್ತು. ದಿನಾಂಕ ವಿಸ್ತರಸಿ ಮತ್ತೆ ಕೊನೆಯ ದಿನಾಂಕ ಹತ್ತಿರವಾಗುತ್ತಿದರು ಕೂಡ ವಾಹನ ಸವರಾರು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಇದನ್ನೆಲ್ಲಾ ಗಮನಿಸಿದ ಸಾರಿಗೆ ಇಲಾಖೆ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಲು ಮುಂದಾಗಿದೆ. ವಾಹನ ಮಾಲೀಕರು ಈ ತಪ್ಪು ಮಾಡಿದರೆ ಇಷ್ಟು ದಂಡ ಪಾವತಿಸುವುದು ಕಡ್ಡಾಯವಾಗಿದೆ.

HSRP ನಂಬರ್ ಪ್ಲೇಟ್ ಇಲ್ಲದಿದ್ದರೆ ಎಷ್ಟು ದಂಡ ಬೀಳುತ್ತೆ ಗೊತ್ತಾ..?
ದೇಶದಲ್ಲಿ 2019 ರ ಹಿಂದಿನ ವರ್ಷದಿಂದ 1.70 ಕೋಟಿ ವಾಹನಗಳು ನೋಂದಣಿಯಾಗಿವೆ. ಇಷ್ಟು ವಾಹನಗಳು ಇನ್ನು ಕೂಡ HSRP ಅಳವಡಿಕೆ ಮಾಡಿಕೊಂಡಿಲ್ಲ. ವಾಹನ ಮಾಲೀಕರು ಇದರ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ. ಇದಮ್ನ್ನು ಗಮನದಲ್ಲಿಟ್ಟುಕೊಂಡು ಸರಗೆ ಇಲಾಖೆ HSRP Number Plate ಇಲ್ಲದ ವಾಹನಗಳಿಗೆ ಬಾರಿ ದಂಡ ವಿಧಿಸಲು ತೀರ್ಮಾನಿಸಿದೆ.

HSRP Number Plate ಇಲ್ಲದ ವಾಹನ ಮೊದಲ ಬಾರಿಗೆ ರಸ್ತೆಗಿಳಿದರೆ 1000 ಹಾಗೂ ಎರಡನೇ ಬಾರಿ ರಸ್ತೆಗಿಳಿದರೆ 2000 ಹಾಗೂ ಪದೇ ಪದೇ ಇದೆ ತಪ್ಪಾದರೆ ಇನ್ ಹೆಚ್ಚಿನ ದಂಡ ವಿಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ನೀವು HSRP Number Plate ಅಳವಡಿಸದೇ ನಿಮ್ಮ ವಾಹನವನ್ನು ರಸ್ತೆಗಿಳಿಸುವ ಮುನ್ನ ಸ್ವಲ್ಪ ಯೋಚಿಸಿ. ಇಲ್ಲವಾದರೆ ಬಾರಿ ದಂಡವನ್ನು ಕಟ್ಟಬೇಕಾಗುತ್ತದೆ ಎಚ್ಚರ.

Image Credit: Deccanherald

HSRP Number Plate ಹೇಗಿರಲಿದೆ..?
ಎಚ್‌ಎಸ್‌ಆರ್‌ಪಿ ನೋಂದಣಿ ಫಲಕಗಳು ಹೆಚ್ಚು ಸುರಕ್ಷಿತವಾಗಿರುತ್ತವೆ ಮತ್ತು ಅವುಗಳನ್ನು ಬದಲಾಯಿಸಲು ಅಥವಾ ತಿದ್ದಲು ಸಾಧ್ಯವಿಲ್ಲ. ನಂಬರ್ ಪ್ಲೇಟ್‌ ನ ಒಂದು ಬದಿಯು ನೀಲಿ ಚಕ್ರವನ್ನು ಹೋಲುವ ಹೋಲೋಗ್ರಾಮ್ ಹೊಂದಿದೆ. ಇದರ ಕೆಳಗೆ 10-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆ ಇರಲಿದೆ. HSRP ಅಲ್ಯೂಮಿನಿಯಂ ಲೋಹದಿಂದ ಮಾಡಲ್ಪಟ್ಟಿದೆ ಮತ್ತು ವಾಹನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಲು ಸ್ಕ್ಯಾನ್ ಮಾಡಬಹುದಾದ ಲೇಸರ್ ಕೋಡ್ ಅನ್ನು ಹೊಂದಿದೆ. ನೀವು https:transport.karnataka.gov.in ಅಥವಾ www.siam.in ಗೆ ಭೇಟಿ ನೀಡುವ ಮೂಲಕ HSRP Number Plate ಅನ್ನು ಬುಕ್ ಮಾಡಿಕೊಳ್ಳಬಹುದು.

Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in