HSRP Update: ಎಲ್ಲಾ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್, HSRP ನಂಬರ್ ಪ್ಲೇಟ್ ನಿಯಮ ಚೇಂಜ್

HSRP ನಂಬರ್ ಪ್ಲೇಟ್ ನಿಯಮ ಚೇಂಜ್

HSRP Number Plate New Date: ಸದ್ಯ ದೇಶದಲ್ಲಿ HSRP Number Plate ಗೆ ಸಂಬಂಧಿಸಿದಂತೆ ಹೊಸ ಹೊಸ ಅಪ್ಡೇಟ್ ಹೊರಬೀಳುತ್ತಿದೆ. ವಾಹನ ಸವಾರರು ಈ HSRP ಅಳವಡಿಕೆಯ ಬಗ್ಗೆ ಹೆಚ್ಚು ಚಿಂತಿಸುವಂತಾಗಿದೆ.

ನಿಗದಿತ ಸಮಯದೊಳಗೆ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿದೆ. ಈ ಕಾರಣಕ್ಕೆ ಎಲ್ಲ ವಾಹನ ಮಾಲೀಕರು ಕೂಡ HSRP Registration ಮಾಡಿಸುವಲ್ಲಿ ಬ್ಯುಸಿ ಆಗಿದ್ದಾರೆ. ಸದ್ಯ HSRP ರಿಜಿಸ್ಟ್ರೇಷನ್ ಗೆ ಸಂಬಂಧಿಸಿದಂತೆ ಸರ್ಕಾರ ವಾಹನ ಸವಾರರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ.

HSRP Number Plate New Date
Image Credit: Paytm

ಎಲ್ಲಾ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್
ಈಗಾಗಲೇ ಸರ್ಕಾರ ಸಾಕಷ್ಟು ಬಾರಿ HSRP ಅಳವಡಿಕೆಯ ಕೊನೆಯ ದಿನಾಂಕವನ್ನು ಸರ್ಕಾರ ನಿಗದಿ ಪಡಿಸಿತ್ತು. ಎರಡು ಬಾರಿ ಸರ್ಕಾರ ಗಡುವನ್ನು ವಿಸ್ತರಿಸಿದೆ. ನವೆಂಬರ್ 17, 2023 ರ ಕೊನೆಯ ದಿನಾಂಕವನ್ನು ವಿಸ್ತರಿಸುತ್ತ ಸದ್ಯ ಸರ್ಕಾರ ಸೆಪ್ಟೆಂಬರ್ 15, 2024 ನ್ನು ಕೊನೆಯ ದಿನಾಂಕವಾಗಿ ಘೋಷಿಸಿದೆ. ಇನ್ನು 1.4 ಕೋಟಿ ವಾಹನ ಮಾಲೀಕರು HSRP ಅಳವಡಿಕೆಯಲ್ಲಿ ಯಶಸ್ಸಿಯಾಗದ ಕಾರಣ ಇದೀಗ ಮತ್ತೆ ಸಮಯಾವಕಾಶವನ್ನು ಸರ್ಕಾರ ವಿಸ್ತರಿಸಿದೆ. ವಾಹನ ಮಾಲೀಕರು ಸೆಪ್ಟೆಂಬರ್ 15 ರೊಳಗೆ ತಮ್ಮ ವಾಹನಕ್ಕೆ HSRP Number Plate ಅನ್ನು ಅಳವಡಿಸಿಕೊಳ್ಳಲು ಸರ್ಕಾರ ಅವಕಾಶವನ್ನು ನೀಡಿದೆ.

HSRP ನಂಬರ್ ಪ್ಲೇಟ್ ನಿಯಮ ಚೇಂಜ್
ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಮತ್ತೆ ಸರ್ಕಾರ ದಿನಾಂಕ ವಿಸ್ತರಣೆ ಮಾಡುತ್ತದೆ ಎಂದು ವಾಹನ ಮಾಲೀಕರು ನಿರಾಳಗುವಂತಿಲ್ಲ. ಸರ್ಕಾರ ಮತ್ತೆ ಗಡುವು ವಿಸ್ತರಿಸುವ ಯೋಜನೆ ಹಾಕಿಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ಸೆಪ್ಟೆಂಬರ್ 15 ರ ನಂತರ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. ಸೆಪ್ಟೆಂಬರ್ 15 ರ ನಂತರ HSRP ನಂಬರ್ ಪ್ಲೇಟ್ ಇಲ್ಲದ ವಾಹನಗಳು ರಸ್ತೆಗಿಳಿದರೆ 1000 ದಂಡ ವಿಧಿಸುವುದಾಗಿ ಸರ್ಕಾರ ಘೋಷಿಸಿದೆ. ದಂಡದ ಮೊತ್ತ ಇನ್ನು ಹೆಚ್ಚಾಗುವ ಸಾಧ್ಯತೆ ಇದೆಯೇ ಹೊರತು ನಿಯಮ ಉಲ್ಲಂಘನೆಗೆ ಯಾವುದೇ ವಿನಾಯಿತಿ ಇಲ್ಲ ಎಂದು ಸರ್ಕಾರ ವಾಹನ ಮಾಲೀಕರಿಗೆ ಎಚ್ಚರಿಕೆಯನ್ನು ನೀಡಿದೆ.

HSRP Number Plate Update
Image Credit: Economic Times

HSRP ನಂಬರ್ ಪ್ಲೇಟ್ ಹಾಕಿಸುವುದು ಹೇಗೆ…?
*https:transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ ಬುಕ್ HSRP ಕ್ಲಿಕ್ ಮಾಡಿ.

Join Nadunudi News WhatsApp Group

*ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ.

*ವಾಹನದ ಮೂಲ ವಿವರವನ್ನು ಭರ್ತಿ ಮಾಡಬೇಕು.

*ನಿಮಗೆ ಅನುಕೂಲವಾಗುವ ಡೀಲರ್ಸ್ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ.

*ಶುಲ್ಕ ವನ್ನು ಆನ್ಲೈನ್ ಮೂಲಕ ಪಾವತಿಸಬೇಕು.

*ನಂತರ ಮಾಲೀಕರ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.

*ನಿಮಗೆ ಬೇಕಾದ ದಿನಾಂಕ, ಸ್ಥಳ, ಸಮಯವನ್ನು ಆಯ್ಕೆ ಮಾಡಿಕೊಳ್ಳಬೇಕು.

*ಮಾಲೀಕರು HSRP ಯನ್ನು ಅಂಟಿಸಲು ವಾಹನ ತಯಾರಕರು ಅಥವಾ ಡೀಲರ್ ಗೆ ಭೇಟಿ ನೀಡಬೇಕು.

HSRP Number Plate Last Date
Image Credit: Deshgujarat

Join Nadunudi News WhatsApp Group