HSRP Number Plate: ಈ ವಾಹನಗಳಿಗೆ HSRP ನಂಬರ್ ಪ್ಲೇಟ್ ಹಾಕಿಸುವ ಅಗತ್ಯ ಇಲ್ಲ, ಬಂತು ಹೊಸ ನಿಯಮ

ಯಾವ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಗತ್ಯವಿಲ್ಲ...?

HSRP Number Plate Not Mandatory For These Vehicles: ಸದ್ಯ ವಾಹನಗಳಿಗೆ HSRP Number Plate ಅಳವಡಿಸುವುದು ಮುಖ್ಯವಾಗಿದೆ. ಸರ್ಕಾರದಿಂದ HSRP ಅಳವಡಿಕೆಯ ಬಗ್ಗೆ ಹೊಸ ಹೊಸ ಅಪ್ಡೇಟ್ ಹೊರ ಬೀಳುತ್ತಲೇ ಇದೆ. ನಿಗದಿತ ಸಮಯದೊಳಗೆ ನಂಬರ್ ಪ್ಲೇಟ್ ಅಳವಡಿಸುವುದು ಅಗತ್ಯವಾಗಿದೆ. ಸರ್ಕಾರ ನಿಗದಿಪಡಿಸಿದ ಸಮಯದೊಳಗೆ HSRP ಅಳವಡಿಕೆ ಆಗದಿದ್ದರೆ ಸರ್ಕಾರ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ.

ಆನ್ಲೈನ್ ನಲ್ಲಿ ವಾಹನ ಮಾಲೀಕರು ತಮ್ಮ ವಾಹನಕ್ಕೆ HSRP Number Plate ಗೆ ಅಪ್ಲೈ ಮಾಡಬಹುದಾಗಿದೆ. ಅದಾಗ್ಯೂ, ಸರ್ಕಾರ ಇಂತಹ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಕೆಯನ್ನು ಕಡ್ಡಾಯಗೊಳಿಸಿಲ್ಲ.ಸರ್ಕಾರದ ನಿಯಮದ ಪ್ರಕಾರ ಇಂತಹ ವಾಹನ ಇರುವವರು HSRP ನಂಬರ್ ಪ್ಲೇಟ್ ಹಾಕಿಸಿಕೊಳ್ಳುವ ಅಗತ್ಯ ಇಲ್ಲ.

HSRP Number Plate Not Mandatory For These Vehicles
Image Credit: Paytm

HSRP ಅಳವಡಿಕೆಗೆ ಸೆಪ್ಟೆಂಬರ್ ತನಕ ಅವಕಾಶ
ಈಗಾಗಲೇ ಸರ್ಕಾರ ಸಾಕಷ್ಟು ಬಾರಿ HSRP ಅಳವಡಿಕೆಯ ಕೊನೆಯ ದಿನಾಂಕವನ್ನು ಸರ್ಕಾರ ನಿಗದಿ ಪಡಿಸಿತ್ತು. ಎರಡು ಬಾರಿ ಸರ್ಕಾರ ಗಡುವನ್ನು ವಿಸ್ತರಿಸಿದೆ. ನವೆಂಬರ್ 17, 2023 ರ ಕೊನೆಯ ದಿನಾಂಕವನ್ನು ವಿಸ್ತರಿಸುತ್ತ ಸದ್ಯ ಸರ್ಕಾರ ಸೆಪ್ಟೆಂಬರ್ 15, 2024 ನ್ನು ಕೊನೆಯ ದಿನಾಂಕವಾಗಿ ಘೋಷಿಸಿದೆ. ಇನ್ನು 1 .4 ಕೋಟಿ ವಾಹನ ಮಾಲೀಕರು HSRP ಅಳವಡಿಕೆಯಲ್ಲಿ ಯಶಸ್ಸಿಯಾಗದ ಕಾರಣ ಇದೀಗ ಮತ್ತೆ ಸಮಯಾವಕಾಶವನ್ನು ಸರ್ಕಾರ ವಿಸ್ತರಿಸಿದೆ.

ವಾಹನ ಮಾಲೀಕರು ಸೆಪ್ಟೆಂಬರ್ 15 ರೊಳಗೆ ತಮ್ಮ ವಾಹನಕ್ಕೆ HSRP Number Plate ಅನ್ನು ಅಳವಡಿಸಿಕೊಳ್ಳಲು ಸರ್ಕಾರ ಅವಕಾಶವನ್ನು ನೀಡಿದೆ. ಆದಾಗ್ಯೂ, ಇಂತಹ ವಾಹನಗಳಿಗೆ HSRP Number Plate ಅವಳವಡಿಕೆಯ ಅಗತ್ಯ ಇರುವುದಿಲ್ಲ ಎನ್ನುವುದು ನಿಮಗೆ ಗೊತ್ತೇ…? ಸದ್ಯ ರಾಜ್ಯ ಸರ್ಕಾರ ಯಾವ ವಾಹನಗಳಿಗೆ ನಂಬರ್ ಪ್ಲೇಟ್ ಕಡ್ಡಾಯಗೊಳಿಸಿಲ್ಲ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

HSRP Number Plate New Update
Image Credit: Spinny

ಯಾವ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಗತ್ಯವಿಲ್ಲ…?
ಸದ್ಯ ರಾಜ್ಯ ಸರ್ಕಾರ 2019 ಕಿಂತ ಮೊದಲು ನೋಂದಣಿಯಾಗಿರುವ ವಾಹನಗಳಿಗೆ HSRP Number ಅಳವಡಿಕೆಯನ್ನು ಕಡ್ಡಾಯಗೊಳಿಸಿದೆ. ಆದರೆ 2019 ರ ನಂತರ ನೋಂದಣಿಯಾಗಿರುವ ವಾಹನಗಳಿಗೆ HSRP Number Plate ಅಳವಡಿಸುವ ಅಗತ್ಯ ಇರುವುದಿಲ್ಲ. ಏಕೆಂದರೆ 2019 ರ ನಂತರ ನೋಂದಣಿಯಾದ ವಾಹನಗಳಲ್ಲಿ ಈಗಾಗಲೇ High Security Register Number ಅನ್ನು ಅಳವಡಿಸಲಾಗಿರುತ್ತದೆ. ಹೀಗಾಗಿ 2019 ರ ನಂತರ ಖರೀದಿಸಿದ ವಾಹನ ಮಾಲೀಕರು ತಮ್ಮ ವಾಹನದ ನಂಬರ್ ಪ್ಲೇಟ್ ಅನ್ನು ಬದಲಾಯಿಸುವ ಅಗತ್ಯ ಇರುವುದಿಲ್ಲ.

Join Nadunudi News WhatsApp Group

HSRP Number Plate Latest News
Image Credit: India TV News

Join Nadunudi News WhatsApp Group