HSRP Scam: HSRP ಹಾಕಿಸದವರಿಗೆ ಸರ್ಕಾರದಿಂದ ಎಚ್ಚರಿಕೆ, ಯಾರು ಕೂಡ ಈ ತಪ್ಪು ಮಾಡುವಂತಿಲ್ಲ.

HSRP ಹಾಕಿಸದವರಿಗೆ ಸರ್ಕಾರದಿಂದ ಎಚ್ಚರಿಕೆ

HSRP Scam Alert: ಸದ್ಯ ದೇಶದಲ್ಲಿ HSRP Number Plate ಗೆ ಸಂಬಂಧಿಸಿದಂತೆ ಹೊಸ ಹೊಸ ಅಪ್ಡೇಟ್ ಹೊರಬೀಳುತ್ತಿದೆ. ವಾಹನ ಸವಾರರು ಈ HSRP ಅಳವಡಿಕೆಯ ಬಗ್ಗೆ ಹೆಚ್ಚು ಚಿಂತಿಸುವಂತಾಗಿದೆ. ನಿಗದಿತ ಸಮಯದೊಳಗೆ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿದೆ.

ಈ ಕಾರಣಕ್ಕೆ ಎಲ್ಲ ವಾಹನ ಮಾಲೀಕರು ಕೂಡ HSRP Registration ಮಾಡಿಸುವಲ್ಲಿ ಬ್ಯುಸಿ ಆಗಿದ್ದಾರೆ. ಸದ್ಯ HSRP ರಿಜಿಸ್ಟ್ರೇಷನ್ ಗೆ ಸಂಬಂಧಿಸಿದಂತೆ ಸರ್ಕಾರ ವಾಹನ ಸವಾರರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ. HSRP ನಂಬರ್ ಪ್ಲೇಟ್ ಹಾಕಿಸುವ ಸಮಯದಲ್ಲಿ ಈ ತಪ್ಪನ್ನು ಮಾಡದಂತೆ ಸರ್ಕಾರ ಎಚ್ಚರಿಸಿದೆ.

HSRP New Update
Image Credit: Paytm

HSRP ಹಾಕಿಸದವರಿಗೆ ಸರ್ಕಾರದಿಂದ ಎಚ್ಚರಿಕೆ
ಇನ್ನು HSRP Number Plate ಯಾವುದೇ ಅಂಗಡಿಗಳಲ್ಲಿ ಪಡೆಯಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿಯೇ ಸಾರಿಗೆ ಇಲಾಖೆ ಪ್ರತ್ಯೇಕ ವೆಬ್ ಸೈಟ್ ಅನ್ನು ಪರಿಚಯಿಸಿದೆ. ಆನ್ಲೈನ್ ನಲ್ಲಿ ಮಾತ್ರ ವಾಹನ ಸವಾರರು ನಂಬರ್ ಪ್ಲೇಟ್ ಗೆ ಅಪ್ಲೈ ಮಾಡಲು ಸಾಧ್ಯವಾಗುತ್ತದೆ. ಸದ್ಯ ಸೈಬರ್ ಕ್ರಿಮಿನಲ್ ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಹೌದು HSRP Number Plate ಅಳವಡಿಕೆಯ ಹೆಸರಿನಲ್ಲಿ ಈಗಾಗಲೇ ದೇಶದಲ್ಲಿ ಸ್ಕ್ಯಾಮ್ ಆರಂಭವಾಗಿದೆ. HSRP ಹೆಸರನ್ನು ಬಳಸಿಕೊಂಡು ಇದೀಗ ವಂಚಕರು ಜನಸಾಮಾನ್ಯರ ಖಾತೆಗೆ ಖನ್ನಾ ಹಾಕಲು ಹೊಸ ಪ್ಲಾನ್ ಹಾಕುತ್ತಿದ್ದಾರೆ.

ವಾಹನ ಮಾಲೀಕರಿಗೆ ಜುಲೈ ವರೆಗೆ HSRP ಅಳವಡಿಕೆಗೆ ಸಮಯವನ್ನು ನೀಡಿದೆ. ಸದ್ಯ ಈ HSRP ಅಳವಡಿಕೆಯು Online Scam ಗೆ ಒಳಗಾಗುತ್ತಿದೆ. ಸೈಬರ್ ಕ್ರಿಮಿನಲ್ ಗಳು ಈ HSRP ಅನ್ನು ಬಳಸಿಕೊಂಡು ವಾಹನ ಮಾಲೀಕರನ್ನು ವಂಚಿಸಲು ಒಂದೊಂದು ಸ್ಕೀಮ್ ಗಳನ್ನೂ ಹಾಕುತ್ತಿದ್ದಾರೆ. HSRP ಅಳವಡಿಕೆಯ ಹೆಸರಿನಲ್ಲಿ ಇದೀಗ ಆನ್ಲೈನ್ ಫ್ರಾಡ್ ಆರಂಭವಾಗಿದೆ. ಈ ಬಗ್ಗೆ ಸರ್ಕಾರ ಜನಸಮಾನ್ಯರಿಗೆ ಎಚ್ಚರಿಕೆಯನ್ನು ನೀಡಿದೆ.

HSRP Mandatory In Karnataka
Image Credit: Team BHP

ಯಾರು ಕೂಡ ಈ ತಪ್ಪು ಮಾಡುವಂತಿಲ್ಲ
ಆನ್ಲೈನ್ ನಲ್ಲಿ HSRP ನೋಂದಣಿಗೆ ನಕಲಿ ಲಿಂಕ್ ಗಳನ್ನೂ OQ Code ಗಳನ್ನೂ ಶೇರ್ ಮಾಡಲಾಗುತ್ತಿದೆ. ವಾಹನ ಮಾಲೀಕರು HSRP ನೋಂದಣಿ ಮಾಡುವ ಬರದಲ್ಲಿ ಫೇಕ್ ಲಿಂಕ್ ನಲ್ಲಿ ನೋಂದಣಿ ಮಾಡಿಕೊಂಡರೆ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ. RTO ಅಧಿಕೃತ Website ನ ಹೊರತಾಗಿ ಸರ್ಕಾರ ಇನ್ನಿತರ ಯಾವುದೇ ಲಿಂಕ್ ಅನ್ನು HSRP Registration ಗಾಗಿ ಬಿಡುಗಡೆ ಮಾಡಿಲ್ಲ.

Join Nadunudi News WhatsApp Group

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವಂತಹ ನಕಲಿ ಲಿಂಕ್ ಗಳ ಬಗ್ಗೆ ಜನರು ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ. ನೀವು ಯಾವುದೇ ಲಿಂಕ್ ನಲ್ಲಿ HSRP Registration ಮಾಡುವ ಮುನ್ನ ಅದರ ಬಗ್ಗೆ ಹೆಚ್ಚು ಗಮನ ಹರಿಸುವುದು ಉತ್ತಮ. ನಕಲಿ website ಗಳಲ್ಲಿ Order ಮಾಡಿ ವಾಹನಗಳಿಗೆ HSRP ಅಳವಡಿಸಿದರೆ ಅದರಿಂದ ಹೆಚ್ಚಿನ ಸಮಸ್ಯೆಗೆ ಒಳಗಾಗಬೇಕಾಗುತ್ತದೆ. ನಕಲಿ HSRP ಅಳವಡಿಸಿಕೊಂಡರೆ ನೀವು ದಂಡ ಕಟ್ಟಬೇಕಾದ ಪರಿಸ್ಥಿತಿ ಬಂದೊದಗಬಹುದು ಎಚ್ಚರ.

HSRP Online Scam Alert
Image Credit: Asianetnews

Join Nadunudi News WhatsApp Group