Huge discount on mobiles: Samsung Galaxy Flip ಮೊಬೈಲ್ ಗಳ ಮೇಲೆ ಭರ್ಜರಿ ರಿಯಾಯಿತಿ.
Huge discount on samsung galaxy flip mobiles: ಸದ್ಯ ಸ್ಯಾಮ್‌ಸಂಗ್ ಸಂಸ್ಥೆಯು ಭಿನ್ನ ವಿಭಿನ್ನ ಮಾದರಿಯ ಫೋನ್‌ಗಳ ಆಯ್ಕೆ ನೀಡಿದ್ದು ಅವುಗಳ ಪೈಕಿ ಫ್ಲಿಪ್(Flip) ಮತ್ತು ಫೋಲ್ಡ್(Fold) ಮಾದರಿಗಳು ಕೂಡ ಆಕರ್ಷಕ ಎನಿಸಿವೆ. ಹೌದು ಹಾಗೆಯೇ ಇತ್ತೀಚಿಗೆ ಸ್ಯಾಮ್‌ಸಂಗ್ ಕಂಪನಿಯು ಬಿಡುಗಡೆ ಮಾಡಿರುವ ಗ್ಯಾಲಕ್ಸಿ Z ಫ್ಲಿಪ್ 4 ಫೋನ್ ಕೂಡ ಇದೀಗಗ ಭರ್ಜರಿ ರಿಯಾಯಿತಿಯಲ್ಲಿ ಕಾಣಿಸಿಕೊಂಡಿದ್ದು ಕೊಡುಗೆಯು ಸ್ಯಾಮ್‌ಸಂಗ್‌ನ ಬ್ಲ್ಯಾಕ್ ಫ್ರೈಡೇ ಸೇಲ್‌ನಲ್ಲಿ ಮಾತ್ರ ಲಭ್ಯವಾಗಲಿದೆ.
ಸದ್ಯ ಸ್ಯಾಮ್‌ಸಂಗ್ ಕಂಪನಿಯ ಆಯೋಜಿಸಿರುವ ಬ್ಲ್ಯಾಕ್ ಫ್ರೈಡೇ ಸೇಲ್ ನಲ್ಲಿ(Black friday sale) ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 4 ಸ್ಮಾರ್ಟ್‌ಫೋನ್ ರಿಯಾಯಿತಿ ದರದಲ್ಲಿ ಲಭ್ಯವಾಗಲಿದ್ದು ಸ್ಯಾಮ್‌ಸಂಗ್ ಬ್ಲ್ಯಾಕ್ ಫ್ರೈಡೇ ಸೇಲ್ ನವೆಂಬರ್ 24 ರಿಂದ ಪ್ರಾರಂಭವಾಗಿ ನವೆಂಬರ್ 28 ರ ವರೆಗೂ ಚಾಲ್ತಿ ಇರಲಿದೆ.
ಇನ್ನು ಈ ಸೇಲ್‌ನಲ್ಲಿ ಗ್ರಾಹಕರು ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 4 ಫೋನ್ (128GB) ಅನ್ನು 80,999 ರೂ. ಗಳಿಗೆ ಖರೀದಿಸಬಹುದಾಗಿದ್ದು ಈ ಕೊಡುಗೆಯು ಎಲ್ಲಾ ಪ್ರಮುಖ ಬ್ಯಾಂಕ್ ಕಾರ್ಡ್‌ಗಳೊಂದಿಗೆ 7000ರೂ ತ್ವರಿತ ಕ್ಯಾಶ್‌ಬ್ಯಾಕ್ ಹಾಗೂ ಸ್ಯಾಮ್‌ಸಂಗ್ ಸ್ಮಾರ್ಟ್‌ಕ್ಲಬ್ ವೆಲ್‌ಕಮ್ ವೋಚರ್‌ನಂತೆ 2000ರೂ. ರಿಯಾಯಿತಿ ಸಿಗಲಿರುವುದು ವಿಶೇಷ.ಇನ್ನು ಈ ಫೋನಿನ ಫೀಚರ್ಸ್ ಬಗ್ಗೆ ಗೊತ್ತಾ?
ಈ ಸ್ಯಾಮ್‌ಸಂಗ್ ಗ್ಯಾಲಕ್ಸಿಯ Z ಫ್ಲಿಪ್ 4 ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 4 ಸ್ಮಾರ್ಟ್‌ಫೋನ್ ಮೇನ್ ಡಿಸ್‌ಪ್ಲೇ 6.7 ಇಂಚಿನ ಫಿಲ್ HD+ ಡೈನಾಮಿಕ್ ಅಮೋಲೆಡ್ ಡಿಸ್‌ಪ್ಲೇ ಆಗಿದ್ದು ಇದು 2X ಇನ್ಫಿನಿಟಿ ಫ್ಲೆಕ್ಸ್ ಡಿಸ್‌ಪ್ಲೇ ಆಗಿದ್ದು 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಜೊತೆಗೆ 22:9 ರಚನೆಯ ಅನುಪಾತವನ್ನು ಕೂಡ ಪಡೆದಿದೆ.
ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 4 ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ 4nm ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್ ಬಲವನ್ನು ಕೂಡ ಪಡೆದಿದ್ದು ಆಂಡ್ರಾಯ್ಡ್ 12 ನಲ್ಲಿ OneUI 4.1.1 ಮೂಲಕ ರನ್ ಆಗಲಿದೆ. ಇನ್ನು ಹಾಗೆಯೇ ಇದು 8GB RAM ಮತ್ತು 512GB ಇಂಟರ್ ಸ್ಟೋರೇಜ್ ಅನ್ನು ಒಳಗೊಂಡಿರುವುದು ವಿಶೇಷ.
ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 4 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಅನ್ನು ಹೊಂದಿದೆ. ಹೌದು ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ ಜೊತೆಗೆ f/1.8 ಲೆನ್ಸ್ 83-ಡಿಗ್ರಿ ಫೀಲ್ಡ್ ಆಫ್ ವ್ಯೂ ಹೊಂದಿದೆ. ಇದಲ್ಲದೆ 10 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು ಇದು 80-ಡಿಗ್ರಿ ಫೀಲ್ಡ್ ಆಫ್ ವ್ಯೂ ಹೊಂದಿದೆ.
ಇದರ ಜೊತೆಗೆ 3,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಹೌದು ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 4 ಸ್ಮಾರ್ಟ್‌ಫೋನ್ ಭಾರತದಲ್ಲಿ 128 GB ಮತ್ತು 8GB ಮತ್ತು 256 GB ಮತ್ತು 8GB ಸ್ಟೋರೇಜ್ ವೇರಿಯಂಟ್ ಮಾದರಿಗಳ ಆಯ್ಕೆ ಪಡೆದಿದ್ದು ಈ ಸ್ಮಾರ್ಟ್‌ಫೋನ್ ಬ್ಲೂ ಬೋರಾ ಪರ್ಪಲ್ ಗ್ರ್ಯಾಫೈಟ್ ಮತ್ತು ಪಿಂಕ್ ಗೋಲ್ಡ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.