Pension Scheme: ಗಂಡ ಮತ್ತು ಹೆಂಡತಿ ಇಬ್ಬರಿಗೂ 72000 ರೂ, ದೇಶದಲ್ಲಿ ಗಂಡ ಹೆಂಡತಿಗೆ ಬಂತು ಹೊಸ ಯೋಜನೆ.
ಗಂಡ ಮತ್ತು ಹೆಂಡತಿಗಾಗಿ ಉತ್ತಮವಾದ ಪಿಂಚಣಿ ಯೋಜನೆ ಜಾರಿಗೆ ಬಂದಿದೆ.
Pradhan Mantri Shram Yogi Mandhan Yojana: ಕೇಂದ್ರ ಸರ್ಕಾರ ಜನಸಾಮಾನ್ಯರಿಗಾಗಿ ವಿವಿಧ ಯೋಜನೆಯನ್ನು ಜಾರಿಗೊಳಿಸುತ್ತದೆ. ದೇಶದ ಬಡ ನಾಗರಿಕರು ಸರಕಾರದ ಯೋಜನೆಗಳ ಲಾಭವನ್ನು ಪಡೆಯುತ್ತಾರೆ. ಇನ್ನು ಹೆಣ್ಣು ಮಕ್ಕಳಿಗೆ, ಮಹಿಳೆಯರಿಗೆ, ಗರ್ಭಿಣಿಯರಿಗೆ ಹಾಗು ಹಿರಿಯನಾಗರೀಕರ ಅನುಕೂಲಕ್ಕಾಗಿ ಸರಕಾರ ಹೊಸ ಹೊಸ ಯೋಜನೆಯನ್ನು ಜಾರಿಗೊಳಿಸುತ್ತದೆ.
ಕೇಂದ್ರ ಸರ್ಕಾರವು ಕೆಲವು ಪಿಂಚಣಿ ಯೋಜನೆಗಳನ್ನು ಪರಿಚಯಿಸಿದೆ. ಇನ್ನು ಮದುವೆಯಾಗಿರುವ ದಾಪತಿಗಳಿಗೂ ಸರ್ಕಾರ ಪಿಂಚಣಿಯ ಲಾಭವನ್ನು ನೀಡುವ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಕೇಂದ್ರ ಕಾರ್ಮಿಕ ಇಲಾಖೆ ದಂಪತಿಗಳಿಗೆ ವಿಶೇಷ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಲ್ಲಿ ಪತಿ ಪತ್ನಿ ಇಬ್ಬರು ಕೂಡ ಹೆಚ್ಚಿನ ಪಿಂಚಣಿಯ ಲಾಭವನ್ನು ಪಡೆಯಬಹುದಾಗಿದೆ.
ದಂಪತಿಗಳಿಗೆ ವಿಶೇಷ ಪಿಂಚಣಿ ಯೋಜನೆ ಲಭ್ಯ
ನೀವು ಮದುವೆಯಾಗಿದ್ದು ಯಾವುದಾದರು ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಎನ್ನುವ ನಿರ್ಧಾರದಲ್ಲಿದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ. ಕಡಿಮೆ ಹೂಡಿಕೆಯೊಂದಿಗೆ ಈ ಪಿಂಚಣಿ ಯೋಜನೆಯ ಮೂಲಕ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ. ಅಸಂಘಟಿತ ವಲಯದ ಜನರಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಮೋದಿ ಸರ್ಕಾರ ಈ ಯೋಜನೆಯ ಜಾರಿಯ ಬಗ್ಗೆ ನಿರ್ಧಾರ ಕೈಗೊಂಡಿದೆ.
ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನಾ (Pradhan Mantri Shram Yogi Mandhan Yojana)
ಕೇಂದ್ರದ ಮೋದಿ ಸರ್ಕಾರವು ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆಯನ್ನು ವಿಶೇಷವಾಗಿ ದಂಪತಿಗಳಿಗೆ ಪಿಂಚಣಿಯ ಲಾಭ ನೀಡಲು ರೂಪಿಸಿದೆ. ನಿವೃತ್ತಿಯ ವಯಸ್ಸು ತಲುಪಿದ ನಂತರ ದಂಪತಿಗಳು ಈ ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ಹಣವನ್ನು ಪಡೆಯಬಹುದಾಗಿದೆ. 18 ರಿಂದ 40 ವರ್ಷದವರು ಈ ಯೋಜನೆಯ ಲಾಭವನ್ನು ಪಡೆಯಬಹುದು.
ಕೇವಲ 200 ರೂ. ಹೂಡಿಕೆಯಲ್ಲಿ ಸಿಗಲಿದೆ 72 ಸಾವಿರ
ರಾಷ್ಟ್ರೀಯ ಪಿಂಚಣಿ (ಎನ್‌ಪಿಎಸ್), ನೌಕರರ ರಾಜ್ಯ ವಿಮಾ ನಿಗಮ (ಇಎಸ್‌ಐ), ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಯೋಜನೆಗಳಿಗೆ ದಾಖಲಾದವರಿಗೆ ಈ ಯೋಜನೆಯ ಲಾಭ ದೊರೆಯುವುದಿಲ್ಲ. ಯೋಜನೆಯು ತೆರಿಗೆ ಪಾವತಿದಾರರಿಗೂ ಕೂಡ ಅನ್ವಯಿಸುವುದಿಲ್ಲ. ದಂಪತಿಗಳು 200 ರೂ. ಪಾವತಿಸಿದರೆ 60 ವರ್ಷಗಳ ನಂತರ ಮಾಸಿಕವಾಗಿ 3000 ಪಿಂಚಣಿ ಪಡೆಯಬಹುದು. ಇಬ್ಬರು ವಾರ್ಷಿಕವಾಗಿ 72000 ರೂ. ಪಿಂಚಣಿಯ ಲಾಭವನ್ನು ಪಡೆಯಬಹುದಾಗಿದೆ.