Marriage Law: ಮದುವೆಯಾಗುವ ಎಲ್ಲಾ ಗಂಡು ಹೆಣ್ಣಿಗೆ ಹೊಸ ನಿಯಮ ಹೊರಡಿಸಿದ ಕೋರ್ಟ್, ಮಹತ್ವದ ತೀರ್ಪು ಪ್ರಕಟ.
ಮದುವೆಯವಾಗುವ ಗಂಡು ಹೆಣ್ಣಿಗೆ ಮಹತ್ವದ ಆದೇಶ ಹೊರಡಿಸಿದ ಹೈಕೋರ್ಟ್.
Husband And Wife Responsibilities: ಭಾರತೀಯ ಕಾನೂನಿನಲ್ಲಿ (Indian Law) ವಿವಿಧ ನಿಯಮಗಳಿವೆ. ಪತಿ ಪತ್ನಿಯ ವಿವಾಹಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ವಿವಿಧ ನಿಯಮವನ್ನು ಜಾರಿಗೊಳಿಸಿದೆ. ಇನ್ನು ಪತಿ ಪತ್ನಿಯ ನಡುವಿನ ದಾಂಪತ್ಯ ಜೀವನ ಸರಿ ಇಲ್ಲದಿದ್ದಾಗ ಅವರು ವಿಚ್ಛೇದನ ಪಡೆಯಲು ಬಯಸುವುದು ಸಾಮಾನ್ಯ. ಆದರೆ ವಿಚ್ಛೇದನ ಪಡೆಯುವ ಸಮಯದಲ್ಲಿ ಕಾನೂನಿನ ನಿಯಮಗಳನ್ನು ಅನುಸರಿಸಬೇಕಾಗುತ್ತದೆ.
ಕಾನೂನು ಯಾವ ರೀತಿಯ ತೀರ್ಪನ್ನು ನೀಡುತ್ತದೋ ಹಾಗೆಯೆ ವಿಚ್ಛೇದನ ಪಡೆಯಬೇಕಾಗುತ್ತದೆ. ಕ್ಷುಲ್ಲಕ ಕಾರಣಗಳಿಗೆ ವಿಚ್ಛೇದನ ಪ್ರಕರಣಗಳು ಸಾಕಷ್ಟು ಕೋರ್ಟ್ ಮೆಟ್ಟಿಲೇರಿವೆ. ಇನ್ನು ನ್ಯಾಯಾಲಯವು ಎಲ್ಲ ಪ್ರಕರಣಗ ತನಿಖೆ ನಡೆಸಿ ವಿಚ್ಛೇದನವನ್ನು ನೀಡುತ್ತದೆ. ಸದ್ಯ ದೇಶದಲ್ಲಿ ವಿಚ್ಛೇದನದ ಪ್ರಕರಣಗಳು ಸಾಕಷ್ಟಿವೆ. ಮದುವೆ ಆಗಿ ಕೇವಲ ಒಂದು ವರ್ಷದಲ್ಲೇ ದಾಂಪತ್ಯ ಜೀವನ ಸಾಕೆನಿಸಿ ಸಾಕಷ್ಟು ಜನರು Divorce ಪಡೆಯಲು ಕೋರ್ಟ್ ಮೆಟ್ಟಿಲೇರುತ್ತಾರೆ.
ಮನೆಯ ಜವಾಬ್ದಾರಿ ಯಾರು ಹೊರಬೇಕು ಎನ್ನುವ ಬಗ್ಗೆ ಕೋರ್ಟ್ ಆದೇಶ
ಇದೀಗ ನ್ಯಾಯಾಲಯ ಪತಿ ಪತ್ನಿಗೆ ಸಂಬಂಧಿಸಿದಂತೆ ಮಹತ್ವದ ಆದೇಶವನ್ನು ಹೊರಡಿಸಿದೆ. ಮನೆ ಕೆಲಸ ಮಾಡುವ ಕುರಿತಾಗಿ ಇತ್ತೀಚೆಗಷ್ಟೇ ವಿಚ್ಛೇದನದ ಅರ್ಜಿಯೊಂದು ಕೋರ್ಟ್ ಗೆ ತಲುಪಿದೆ. ಪತ್ನಿ ಮನೆ ಕೆಲಸವನ್ನು ಮಾಡುತ್ತಿಲ್ಲ ಎನ್ನುವ ಕಾರಣಕ್ಕೆ ತಮ್ಮ 13 ವರ್ಷದ ವಿವಾಹ ಸಂಬಂಧವನ್ನು ಮುರಿಯುವಂತೆ ಕೋರಿ ವ್ಯಕ್ತಿಯೊಬ್ಬರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಪ್ರಕರಣದ ತನಿಖೆ ನಡೆಸಿದ ನ್ಯಾಯಾಲಯ ಮನೆ ಜವಾಬ್ದಾರಿಯನ್ನು ಯಾರು ಹೊರಬೇಕು ಎನ್ನುವ ಬಗ್ಗೆ ಮಹತ್ವದ ಆದೇಶವನ್ನು ಹೊರಡಿಸಿದೆ.
ದಂಪತಿಗಳು ಇಬ್ಬರು ಮನೆ ಕೆಲಸವನ್ನು ಸಮಾನವಾಗಿ ಹಂಚಿಕೊಳ್ಳಬೇಕು
ತನ್ನ ಹೆಂಡತಿ ಯಾವಾಗಲು ಫೋನ್ ನಲ್ಲಿಯೇ ಮುಳುಗಿರುತ್ತಾಳೆ, ಮನೆ ಕೆಲಸಗಳನ್ನು ಮಾಡುತ್ತಿಲ್ಲ ಎಂದು ದೂರು ನೀಡಿ ಪತಿಯೊರ್ವ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಕಾರಣಕ್ಕೆ ವಿವಾಹ ವಿಚ್ಛೇದನ ನೀಡಿ ಎಂದು ಅರ್ಜಿ ಸಲ್ಲಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿ ನ್ಯಾಯಾಧೀಶರು, “ಪುರುಷ ಮತ್ತು ಮಹಿಳೆ ಇಬ್ಬರು ಉದ್ಯೋಗದಲ್ಲಿದ್ದರೆ ಮನೆಯ ಎಲ್ಲ ಕೆಲಸಗಳನ್ನು ಹೆಂಡತಿಯೇ ಮಾಡಬೇಕು ಏನು ನಿರೀಕ್ಷಿಸುವುದು ತಪ್ಪು.
ಇದು ಪುರುಷರ ಹಿಂಜರಿಕೆ ಮನೋಭಾವವನ್ನು ಸೂಚಿಸುತ್ತದೆ. ಆಧುನಿಕ ಸಮಾಜದಲ್ಲಿ ಮನೆ ಜವಾಬ್ದಾರಿ ಹಾಗೂ ಕುಟುಂಬದ ಭಾರವನ್ನು ಪತಿ ಪತ್ನಿ ಇಬ್ಬರು ಸಮನಾಗಿ ಹೊರಬೇಕು” ಎಂದು ಆದೇಶ ಹೊರಡಿಸಿದ್ದಾರೆ. ಈ ಮೂಲಕ ಪತಿ ನೀಡಿದ ವಿಚ್ಛೇದನದ ಅರ್ಜಿಯನ್ನು ವಜಾಗೊಳಿಸಿ ದಂಪತಿಗಳು ಇಬ್ಬರು ಮನೆ ಕೆಲಸವನ್ನು ಸಮಾನವಾಗಿ ಹಂಚಿಕೊಳ್ಳಬೇಕು ಎಂದು ತೀರ್ಪನ್ನು ನೀಡಿದ್ದಾರೆ.