Wife Property Rights: ಆಸ್ತಿ ವಿಚಾರಕ್ಕಾಗಿ ಕುಟುಂಬಗಳ ಮಧ್ಯೆ ನೆಡೆಯುವ ಜಗಳ, ಗಲಾಟೆ, ಮನಸ್ತಾಪಗಳಿಗಾಗಿ ಭಾರತೀಯ ಕಾನೂನು ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಭಾರತದ ಕಾನೂನು ನಿಯಮದ ಪ್ರಕಾರ, ಕೆಲವು ಸಂದರ್ಭದಲ್ಲಿ ಗಂಡನ ಆಸ್ತಿಯಲ್ಲಿ ಹೆಂಡತಿಗೆ ಪಾಲು ಸಿಗಲ್ಲ. ಹಿಂದೂ ಉತ್ತರಾಧಿಕಾರ ಕಾಯ್ದೆ 2005 ರ ತಿದ್ದುಪಡಿಯ ಪ್ರಕಾರ, ಗಂಡನ ಆಸ್ತಿಯಲ್ಲಿ ಹೆಂಡತಿಗೆ ಸಂಪೂರ್ಣ ಹಕ್ಕು ಸಿಗುತ್ತದೆ. ಆದರೆ ಕೆಲವು ಸಂದರ್ಭದಲ್ಲಿ ಹೆಂಡತಿಗೆ ಗಂಡನ ಆಸ್ತಿಯಲ್ಲಿ ಹಕ್ಕು ಇರುವುದಿಲ್ಲ. ಇದೀಗ ನಾವು ಯಾವ 5 ಸಂದರ್ಭದಲ್ಲಿ ಹೆಂಡತಿಗೆ ಗಂಡನ ಆಸ್ತಿಯಲ್ಲಿ ಹಕ್ಕು ಸಿಗುವುದಿಲ್ಲ ಅನ್ನುವ ಬಗ್ಗೆ ಮಾಹಿತಿಯನ್ನ ತಿಳಿದುಕೊಳ್ಳೋಣ.
ಈ 5 ಸಂದರ್ಭದಲ್ಲಿ ಹೆಂಡತಿಗೆ ಗಂಡನ ಆಸ್ತಿಯಲ್ಲಿ ಹಕ್ಕು ಇರುವುದಿಲ್ಲ
* ಗಂಡನ ಸ್ವಂತ ಆಸ್ತಿ ಮತ್ತು ತಂದೆ ತಾಯಿ ಜೀವಂತ ಇರುವಾಗ
ಗಂಡ ತಾನೇ ದುಡಿದು ಸಂಪಾದಿಸಿದ ಆಸ್ತಿ ಅಥವಾ ಆತನಿಗೆ ಗಿಫ್ಟ್ ಮೂಲಕ ಬಂದಿರುವ ಆಸ್ತಿ ಆಗಿರಬಹುದು, ಆತನ ತಂದೆ ಮತ್ತು ತಾಯಿ ಜೀವಂತ ಇರುವಾಗ ಹೆಂಡತಿಗೆ ಯಾವುದೇ ಹಕ್ಕು ಇರುವುದಿಲ್ಲ. ಗಂಡ ಸಾಯುವ ಮೊದಲು ತನ್ನ ಹೆಂಡತಿಗೆ ಸೇರಬೇಕು ಎಂದು ವಿಲ್ ಬರೆದಿಟ್ಟಿದ್ದರೆ ಮಾತ್ರ ಹೆಂಡತಿಗೆ ಗಂಡನ ಆಸ್ತಿಯಲ್ಲಿ ಸಂಪೂರ್ಣ ಹಕ್ಕು ಇರುತ್ತದೆ.
* ಗಂಡ ವಿಲ್ ಬರೆದಿಟ್ಟಿದ್ದರೆ?
ಗಂಡ ತಾನು ಸಾಯುವ ಮೊದಲು ಹೆಂಡತಿಯನ್ನು ಬಿಟ್ಟು ತಾಯಿ, ತಂದೆ, ಸಹೋದರ, ಸ್ನೇಹಿತ ಅಥವಾ ಬೇರೆ ಯಾರಿಗಾದರೂ ಆಸ್ತಿ ಸೇರಬೇಕೆಂದು ವಿಲ್ ಬರೆದಿಟ್ಟಿದ್ದರೆ, ಅದರಲ್ಲಿ ಹೆಂಡತಿಗೆ ಪಾಲು ಇರುವುದಿಲ್ಲ. ಆತ ಸ್ವಂತ ಸಂಪಾದನೆಯಲ್ಲಿ ಮಾಡಿಕೊಂಡ ಆಸ್ತಿಯನ್ನು ಆತ ಯಾರಿಗೆ ಬೇಕಾದರೂ ನೀಡಬಹುದಾಗಿದೆ.
* ವಿಚ್ಛೇದನ ಪಡೆದ ನಂತರ
ವಿಚ್ಛೇದನ ಪಡೆದ ಹೆಂಡತಿಗೆ ಮಾಜಿ ಗಂಡನ ಆಸ್ತಿಯಲ್ಲಿ ಯಾವುದೇ ಪಾಲು ಸಿಗುವುದಿಲ್ಲ. ಕೇವಲ ನ್ಯಾಯಾಲಯ ನೀಡಿದ ಶಾಶ್ವತ ಜೀವನಾಂಶ (permanent alimony) ಅಥವಾ ಸ್ತ್ರೀ ಧನ ಮಾತ್ರ ಅವಳಿಗೆ ಸಿಗುತ್ತದೆ.
* ಗಂಡನ ಹೆಸರಲ್ಲಿ ಆಸ್ತಿ ಇಲ್ಲದಿರುವಾಗ ಮತ್ತು ಆತ ಸಾಲದಲ್ಲಿ ಇದ್ದಾಗ
ಗಂಡ ಸಾಯುವ ಸಮಯದಲ್ಲಿ ಅವನ ಹೆಸರಿನಲ್ಲಿ ಯಾವುದೇ ಆಸ್ತಿ ಇಲ್ಲದಿದ್ದರೆ ಅಥವಾ ಬ್ಯಾಂಕ್ ಸಾಲ, ಕ್ರೆಡಿಟ್ ಕಾರ್ಡ್ ಸಾಲ ಇತ್ಯಾದಿಗಳಿಂದ ಆಸ್ತಿ ಸಂಪೂರ್ಣ ಮಾರಾಟವಾಗಿ ಹೋಗಿದ್ದರೆ, ಹೆಂಡತಿಗೆ ಪಾಲು ಹಂಚಿಕೊಳ್ಳಲು ಏನೂ ಉಳಿದಿರುವುದಿಲ್ಲ.
* ಎರಡನೇ ಅಥವಾ ಮೂರನೇ ಮದುವೆ ಆಗಿದ್ದಾಗ
ಹಿಂದೂ ಕಾಯ್ದೆಯಡಿ ಅಲ್ಲಿ ಎರಡನೇ ಮದುವೆ ಕಾನೂನು ಬಾಹಿರವಾಗಿದೆ. ಒಂದು ವೇಳೆ ಗಂಡ ಎರಡನೇ ಮದುವೆ ಮಾಡಿಕೊಂಡಿದ್ದಲ್ಲಿ ಎರಡನೇ ಹೆಂಡತಿಗೆ ಮೊದಲನೇ ಹೆಂಡತಿಯಷ್ಟೇ ಹಕ್ಕು ಇರುತ್ತದೆ. ಆದರೆ ಮೊದಲನೇ ಹೆಂಡತಿ ಜೀವಂತವಾಗಿದ್ದರೆ, ಎರಡನೇ ಮದುವೆಯನ್ನು ನ್ಯಾಯಾಲಯ ಅಸಿಂಧು ಎಂದು ಘೋಷಣೆ ಮಾಡಿದರೆ, ಎರಡನೇ ಹೆಂಡತಿಗೆ ಆಸ್ತಿಯಲ್ಲಿ ಯಾವುದೇ ಪಾಲು ಸಿಗುವುದಿಲ್ಲ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

