Hyundai Offer: 1 ಲಕ್ಷಕ್ಕೆ ಮನೆಗೆ ತನ್ನಿ ಹೊಸ ಹುಂಡೈ ಕಾರ್, ದೀಪಾವಳಿ ಹಬ್ಬದ ಈ ಆಫರ್ ಮಿಸ್ ಮಾಡಿದರೆ ಸಿಗಲ್ಲ.

ದೀಪಾವಳಿ ಹಬ್ಬಕ್ಕೆ ಕಾರ್ ಖರೀದಿ ಮಾಡುವವರಿಗೆ ಆಫರ್ ನೀಡಿದ ಹುಂಡೈ.

Hyundai Aura Financial Plan: ಸದ್ಯ ಮಾರುಕಟ್ಟೆಯಲ್ಲಿ Hyundai ಕಂಪನಿ ಈಗಾಗಲೇ ಹತ್ತು ಹಲವು ಮಾದರಿಯ ಕಾರ್ ಗಳನ್ನೂ ಪರಿಚಯಿಸುವ ಮೂಲಕ ತನ್ನ ಸ್ಥಾನವನ್ನು ಗಟ್ಟಿಯಾಗಿಸಿಕೊಂಡಿದೆ. ಮಾರುಕಟ್ಟೆಯಲ್ಲಿ Hyundai ಕಂಪನಿಯ ಕಾರ್ ಗಳು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತವೆ ಎಂದರೆ ತಪ್ಪಾಗಲಾರದು.

Hyundai ಇನ್ನುಮುಂದೆ ತನ್ನ ಎಲ್ಲ ಮಾದರಿಯ ಕಾರ್ ಗಳಲ್ಲಿ ಬದಲಾವಣೆಯನ್ನು ತರಲು ಮುಂದಾಗಿದ್ದು, ಗ್ರಾಹಕರ ಅನುಕೂಲಕ್ಕಾಗಿ ಹೆಚ್ಚಿನ ಸುರಕ್ಷತೆಯ ಫೀಚರ್ ಅನ್ನು ಅಳವಡಿಸಲು Hyundai ನಿರ್ಧರಿಸಿದೆ.

Hyundai Aura Financial Plan
Image Source: Moneycontrol

ಹುಂಡೈ ಕಾರ್ ಖರೀದಿಗೆ ಬಂಪರ್ ಆಫರ್
ಸದ್ಯ Hyundai Motor India Limited ಇನ್ನುಮುಂದೆ ತಯಾರಿಸುವ ಎಲ್ಲ Car ಗಳಲ್ಲಿ 6 Airbag ಗಳನ್ನೂ ಅಳವಡಿಸುವುದಾಗಿ ಹೇಳಿಕೊಂಡಿದೆ. ಕಂಪನಿಯು ಈ ಬಗ್ಗೆ ಅಧಿಕೃತ ಘೋಷಣೆಯನ್ನು ಹೊರಡಿಸಿದೆ. ಇನ್ನು ಕಂಪನಿಯು ಈ ಹಿಂದೆ ಪರಿಚಯಯಿಸಿದ್ದ ಕಾರ್ ಗಳಲ್ಲಿ 4 ಏರ್ ಬ್ಯಾಗ್ ಗಳನ್ನು ಅಳವಡಿಸಿದೆ. ಮಾರುಕಟ್ಟೆಯಲ್ಲಿ 4 ಏರ್ ಬ್ಯಾಗ್ ಹೊಂದಿರುವ ಸೆಡನ್ ಕಾರ್ ಗಳು ಕೂಡ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಸದ್ಯ ಹುಂಡೈ ಕಂಪನಿಯು ದೀಪಾವಳಿ ವಿಶೇಷಕ್ಕೆ ಹುಂಡೈ ಕಾರ್ ಖರೀದಿಗೆ ಬಂಪರ್ ಆಫರ್ ಘೋಷಣೆ ಮಾಡಿದೆ.

1 ಲಕ್ಷಕ್ಕೆ ಮನೆಗೆ ತನ್ನಿ ಹೊಸ Hyundai Aura
ಸದ್ಯ ಹುಂಡೈ ತನ್ನ Hyundai Aura ಖರೀದಿಗೆ ಭರ್ಜರಿ ಆಫರ್ ಅನ್ನು ಘೋಷಿಸಿದೆ. ಮಾರುಕಟ್ಟೆಯಲ್ಲಿ Hyundai Aura ಮಾದರಿಯು 6.43 ಲಕ್ಷದಿಂದ 7 .37 ಲಕ್ಷ ಬೆಲೆಯಲ್ಲಿ ಪರಿಚಯವಾಗಿದೆ. ಕಂಪನಿಯು ಹ್ಯುಂಡೈ ಔರಾದ ಮೂಲ ಮಾದರಿಯನ್ನು 6,43,700 ರೂ.ಗಳ ಎಕ್ಸ್ ಶೋ ರೂಂ ಬೆಲೆಗೆ ಪರಿಚಯಿಸಿದೆ. ಇದರ ಆನ್ ರೋಡ್ ಬೆಲೆ 7,37,382 ರೂ. ನೀವು ಈ ಸೆಡಾನ್ ಖರೀದಿಸಲು ಬಯಸಿದರೆ ಕಡಿಮೆ ಬಜೆಟ್‌ ನಲ್ಲಿ ಖರೀದಿಸಬಹುದು. ನೀವು ಕೇವಲ 1 ಲಕ್ಷ ರೂ. ಡೌನ್ ಪೇಮೆಂಟ್ ನ ಮೂಲಕ ಈ ಸೆಡಾನ್ ಕಾರನ್ನು ಖರೀದಿಸಬಹುದು.

Hyundai Aura Financial Plan
Image Source: Jagran English

Hyundai Aura Financial Plan
ಕಂಪನಿಯು Hyundai Aura ಕಾರ್ ಖರೀದಿಗೆ ನೀಡುತ್ತಿರುವ ಹಣಕಾಸಿನ ಯೋಜನೆಯ ಆಬಗ್ಗೆ ವಿವರ ಇಲ್ಲಿದೆ. Hyundai Aura ಮಾದರಿಯ ಖರೀದಿಗೆ ನಿಮಗೆ ಬ್ಯಾಂಕ್ 6,37,382 ರೂ. ಸಾಲ ನೀಡಲಿದೆ. ನೀವು ವಾರ್ಷಿಕ 9.8 ಬಡ್ಡಿದರದಲ್ಲಿ ಸಾಲವನ್ನು ಪಡೆಯಬಹುದು. ಸಾಲದ ಮರುಪಾವತಿಗೆ ಬ್ಯಾಂಕ್ ನಿಮಗೆ 5 ವರ್ಷ ಕಾಲಾವಕಾಶವನ್ನು ನೀಡುತ್ತಿದೆ. ನೀವು ಮಾಸಿಕ 13,480 ರೂ. EMI ಪಾವತಿಸುವ ಮೂಲಕ ಸಾಲವನ್ನು ಮರುಪಾವತಿ ಮಾಡಬಹುದು.

Join Nadunudi News WhatsApp Group

Join Nadunudi News WhatsApp Group