Hyundai Exter SUV: ಬೈಕ್ ನಂತೆ ಹೆಚ್ಚು ಮೈಲೇಜ್ ಕೊಡುವ Hyundai Exter ಕಾರ್ ಮಾಡಿರುಕಟ್ಟೆಗೆ ಬಿಡುಗಡೆ, ಕಡಿಮೆ ಬೆಲೆ.

ಬೈಕ್ ನಂತೆ ಮೈಲೇಜ್ ಹೊಂದಿರುವ ಹುಂಡೈ ಕಂಪನಿಯ ಹೊಸ ಕಾರು ಬಿಡುಗಡೆ.

Hyundai Exter SUV Car: ಭಾರತದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ (Hyundai) ಮೋಟಾರ್ ಇಂಡಿಯನ್ ಲಿಮಿಟೆಡ್ ಇದೀಗ ಮತ್ತೊಂದು ಹೊಸ ಕಾರನ್ನು ಪರಿಚಯಿಸಿದೆ. ಹ್ಯುಂಡೈ ಕಂಪನಿಯು ಭಾರತದಲ್ಲಿ ತನ್ನ ಪೋರ್ಟ್ ಪೋಲಿಯೋವನ್ನು ವಿಸ್ತರಿಸಲು ಮುಂದಾಗಿದೆ.

ಇದೀಗ ಹ್ಯುಂಡೈ ಹೊಸ ಎಕ್ಸಟರ್ ಎಂಬ ಮೈಕ್ರೋ ಎಸ್ ಯು ವಿ ಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಹ್ಯುಂಡೈ ತನ್ನ ಮುಂಬರುವ ಎಕ್ಸ್‌ಟರ್ ಎಸ್‌ ಯು ವಿ ಯಲ್ಲಿ 6 ಏರ್‌ಬ್ಯಾಗ್‌ಗಳನ್ನು ಎಲ್ಲಾ ರೂಪಾಂತರಗಳಲ್ಲಿ ಸ್ಟ್ಯಾಂಡರ್ಡ್ ಆಗಿ 25 ಇತರ ಸುರಕ್ಷತಾ ಪೀಚರ್ಸ್ ಗಳೊಂದಿಗೆ ಬರಲಿದೆ ಎಂದು ಬಹಿರಂಗಪಡಿಸಿದೆ.

Features of hyundai exter SUV
Image Credit: zigwheels

ಹ್ಯುಂಡೈ ಎಕ್ಸ್‌ಟರ್ ಎಸ್ ಯು ವಿ ಕಾರಿನ ವಿಶೇಷತೆ
ಹ್ಯುಂಡೈ ಎಕ್ಸ್‌ಟರ್ ಎಸ್ ಯು ವಿ ಯಲ್ಲಿ ಸ್ಟೆಬಿಲಿಟಿ ಕಂಟ್ರೋಲ್, ವೆಹಿಕಲ್ ಸ್ಟೆಬಿಲಿಟಿ, ಮ್ಯಾನೇಜ್ ಮೆಂಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ಎಬಿಎಸ್, ಇಬಿಡಿ. ಐಎಸ್ ಒಪಿಕ್ಸ್ ಆಂಕರಿಂಗ್ ಪಾಯಿಂಟ್ ಗಳು, ರಿಮೈಂಡರ್ ನೊಂದಿಗೆ 3 ಪಾಯಿಂಟ್ ಸೀಟ್ ಬೆಲ್ಟ್ ಗಳು ಒಳಗೊಂಡಿದೆ.

ESS, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ರಿವರ್ಸ್ ಪಾರ್ಕಿಂಗ್ ಸೆನ್ಸರ್ ಗಳು ಮತ್ತು ಇನ್ನಷ್ಟು ಫೀಚರ್ಸ್ ಗಳನ್ನು ಹೊಂದಿವೆ. ಹುಂಡೈ ಇಂಡಿಯಾ ತನ್ನ ಮುಂಬರುವ ಮೈಕ್ರೋ ಎಸ್‌ ಯು ವಿ ಎಕ್ಸ್‌ಟರ್‌ ಗಾಗಿ ಬುಕ್ಕಿಂಗ್‌ ಗಳನ್ನು ಪ್ರಾರಂಭಿಸಿದೆ.

New car launch of Hyundai company with mileage like bike.
Image Credit: carandbike

ಈ ಹೊಸ ಹುಂಡೈ ಎಕ್ಸ್‌ಟರ್ ಕಾರು EX, S, SX, SX (O) ಮತ್ತು SX (O) ಕನೆಕ್ಟ್ ಎಂಬ 5 ಟ್ರಿಮ್‌ಗಳಲ್ಲಿ ಬರುತ್ತದೆ. ಹ್ಯುಂಡೈ ಎಕ್ಸ್‌ಟರ್ ಮಿನಿ ಎಸ್‌ ಯು ವಿ ಯ ಪವರ್‌ಟೈನ್ ಸೆಟಪ್ 1.2 ಲೀಟರ್ ಕಪ್ಪಾ ಪೆಟ್ರೋಲ್ ಮತ್ತು 1.2 ಲೀಟರ್ ಕಪ್ಪಾ ಪೆಟ್ರೋಲ್ ಅನ್ನು ಫ್ಯಾಕ್ಟರಿ-ಫಿಟ್ ಮಾಡಿದ ಸಿಎನ್‌ಜಿ ಕಿಟ್‌ನೊಂದಿಗೆ ಒಳಗೊಂಡಿರುತ್ತದೆ.

Join Nadunudi News WhatsApp Group

ಇನ್ನು ಈ ಕಾರ್ ಇತರೆ ಕಾರುಗಳಿಗೆ ಹೋಲಿಕೆ ಮಾಡಿದರೆ ಗರಿಷ್ಠ ಮೈಲೇಜ್ ಹೊಂದಿದೆ. ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಈ ಕಾರ್ 21 ರಿಂದ 25 ಕಿಲೋ ಮೀಟರ್ ಮೈಲೇಜ್ ಕೊಡುತ್ತದೆ ತಿಳಿದುಬಂದಿದೆ.

Join Nadunudi News WhatsApp Group